ಕಲಬುರರ್ಗಿ, ಜುಲೈ. 18:ಜಯತಿರ್ಥರ ಮೂಲವೃಂದಾವನ ಸನ್ನಿಧಾನವಾದ ಸೇಡಂ ತಾಲೂಕಿನ ಮಳಖೇಡದಲ್ಲಿ ಶ್ರೀ ಜಯತೀರ್ಥರ ಆರಾಧನೆ ನಿಮಿತ್ತ ಜೋಡು ರತೋತ್ಸವ ಸಂಭ್ರಮದಿAದ ಸೋಮವಾರ ಜರುಗಿತು.
ಟೀಕಾಚಾರ್ಯರ ಮಧ್ಯಾರಾದನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ತಮಗಳು ನಡೆದವು. ಬೆಳಗ್ಗೆ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರಿಂದ ವಿದ್ಯಾರ್ಥಿಗಳಿಗೆ ಸುಧಾ ಪಾಠ, ಮುದ್ರಾಧಾರಣೆ, ರಥಾಂಗ ಹೋಮ, ನಂತರ ಶ್ರೀಗಳಿಂದ ಜೋಡು ರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಭಕ್ತ ಸಮೂಹ ನಡುವೆ ಸಂಭ್ರಮದಿAದ ರಥೋತ್ಸವ ನೆರವೇರಿತು.
ಶ್ರೀಗಳಿಂದ ಶ್ರೀ ದಿಗ್ವಿಜಯ ಮೂಲ ರಾಮದೇವರ ಪೂಜೆ ನಡೆಯಿತು. ನಂತರ ಆಗಮಿಸಿದ ಎಲ್ಲ ಭಕ್ತರಿಗೂ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಮುಂಬಯಿಯ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ.ವಿದ್ಯಾಸಿAಹಾಚಾರ್ಯ ಮಾಹುಲಿ, ಮಠದ ವ್ಯವಸ್ಥಾಪಕೊಂ. ವೆಂಕಣ್ಣಾಚಾರ್ಯ ಪೂಜಾರ, ಪಂ.ಡಾ. ಗುರುಮಧ್ವಾ ಚಾರ್ಯ ನವಲಿ, ಪಂ. ಗೋಪಾಲಾಚಾರ್ಯ ಅಕಮಂಚಿ, ಪಂ. ಪ್ರಸನ್ನಾಚಾರ್ಯ ಜೋಶಿ, ಮಠಾಧಿಕಾರಿ ರಾಮಾಚಾರ್ಯ ಘಂಟಿ, ಕಮಲಾಕರ ಕುಲಕರ್ಣಿ, ವೆಂಕಟೇಶಾಚಾರ್ಯ ಕಡಿವಾಳ, ಬ್ರಾಹ್ಮಣ ಮಹಾಸಭಾದಅಧ್ಯಕ್ಷ ರವಿ ಲಾತೂರಕರ, ಮನೋಹರ ಜೋಷಿ,ಬಾಲಕೃಷ್ಣ ಲಾತೂರಕರ ಅಶೋಕ ಕುಲಕರ್ಣಿ ಗೌರಕರ್, ಗುಂಡಾಚಾರ್ಯ ನರಬೋಳಿ, ಶ್ರೀನಿವಾಸಾಚಾರ್ಯ ನೆಲೋಗಿ, ಸೇರಿ ಅಪಾರ ಭಕ್ತರು ಪಾಲ್ಗೊಂಡಿದ್ದರು.