ಕಲಬುರ್ಗಿಯಲ್ಲಿ ಜುಲೈ 12ರಂದು ಪತ್ರಕರ್ತ ಸಾಹಿತಿಗಳ ಸಮಾವೇಶ

0
605

ಕಲಬುರ್ಗಿ, ಜು.11- ಮಾಧ್ಯಮ ಹಾಗೂ ಪತ್ರಕರ್ತ ಸಾಹಿತಿಗಳ ಸಮಾವೇಶವನ್ನು ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ನಾಳೆ (ಜು. 12) ಹಮ್ಮಿಕೊಳ್ಳಲಾಗಿದೆ.
ಪತ್ರಕರ್ತ ದಿನೇಶ್ ಅಮೀನಮಟ್ಟು ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಹಲವಾರು ಹಿರಿಯ-ಕಿರಿಯ ಪತ್ರಕರ್ತರು ಹಾಗೂ ಸಾಹಿತಿಗಳು ಪಾಲ್ಗೊಳ್ಳಲಿದ್ದು, ಈ ಸಂದರ್ಭದಲ್ಲಿ ಹಲವು ಪತ್ರಕರ್ತರಿಗೆ ಸನ್ಮಾನಿಸುವದರೊಂದಿಗೆ ಗೌರವಿಸುವ ಕಾರ್ಯಕ್ರಮವು ಸಹ ನಡೆಯ ಲಿದೆ.
ಹಿರಿಯ ಪತ್ರಕರ್ತ ಶ್ರೀಕಾಂತಾಚಾರ್ಯ ಮಣ್ಣೂರ್ ಅವರು ಕಾವ್ಯ ಕಾವಲು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.
ಅತಿಥಿಗಳಾಗಿ ವಾರ್ತಾ ಇಲಾಖೆಯ ಉಪ ನಿರ್ದೇಶಕ ಜಿ.ಎಂ. ಸಿದ್ದೇಶ್ವರಪ್ಪ, ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ, ಖ್ಯಾತ ವೈದ್ಯ ಡಾ. ಎಸ್.ಬಿ. ಕಾಮರೆಡ್ಡಿ ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ.
ಮಧ್ಯಾಹ್ನ 12-15ಕ್ಕೆ ಮೊದಲ ಗೋಷ್ಠಿ ಆರಂಭವಾಗುವುದು. ಹಿರಿಯ ಪತ್ರಕರ್ತ ಡಾ. ಶ್ರೀನಿವಾಸ್ ಸಿರನೂರಕರ್ ಅವರು ಸಂವಹನ ಮಾಧ್ಯಮ ಮತ್ತು ಕನ್ನಡ ಅಭಿವೃದ್ಧಿ, ಪತ್ರಕರ್ತ ಶೇಷಮೂರ್ತಿ ಅವಧಾನಿ ಅವರು ಪತ್ರಿಕೆ ಮತ್ತು ಸೃಜನಶೀಲ ಸಾಹಿತ್ಯ ಕುರಿತು ವಿಚಾರ ಮಂಡಿಸುವರು.
ಮಧ್ಯಾಹ್ನ 2 ಗಂಟೆಗೆ ಕವಿಗೋಷ್ಠಿ, 3-30ಕ್ಕೆ ಮಾಧ್ಯಮ, ಸಾಹಿತ್ಯ: ಕುಸಿಯುತ್ತಿರುವ ಮೌಲ್ಯ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಿದೆ.
ಸಂಜೆ 4 ಗಂಟೆಗೆ ಸಮಾರೋಪ ಹಾಗೂ ಸತ್ಕಾರ ಕಾರ್ಯಕ್ರಮ ನೆರವೇರಲಿದೆ ಎಂದು ಅವರು ತಿಳಿಸಿದರು.
ಸಂಗೀತ ಸೇವೆ ಪತ್ರಕರ್ತ ಹಾಗೂ ಸಂಗೀತಗಾರ ಬಾಬುರಾವ ಕೋಬಾಳ ಅವರಿಂದ ನಡೆಯಲಿದೆ.

LEAVE A REPLY

Please enter your comment!
Please enter your name here