ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: ಜ್ಞಾನಜ್ಯೋತಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆ

0
868

ಕಲಬುರ್ಗಿ, ಜು.5- ಪಿಎಸ್‌ಐ ನೇಮಕಾತಿ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣದ ದೋಷಾರೋಪಣೆ ಪಟ್ಟಿಯನ್ನು ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಸಿಐಡಿ ತಂಡ ಸುದೀರ್ಘ ತನಿಖೆ ಕೈಗೊಂಡು ಸುಮಾರು 2000 ಪುಟಗಳುಳ್ಳ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದೆ. ಅದನ್ನು ಮಂಗಳವಾರ ಸಿಐಡಿ ಅಧಿಕಾರಿಗಳು ನಗರದ ಮೂರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪಿಎಸ್‌ಐ ಪರೀಕ್ಷೆ ಅಕ್ರಮ ಸಂಬAಧ ಈಗಾಗಲೇ ಕೇಂದ್ರ ಸ್ಥಾನ ಜ್ಞಾನಜ್ಯೋತಿ ಶಾಲೆಯ ಒಡತಿ ಶ್ರೀಮತಿ ದಿವ್ಯಾ ಹಾಗರಗಿ, ಆಕೆಯ ಪತಿ ರಾಜೇಶ್ ಹಾಗೂ ಮುಖ್ಯ ಗುರುಗಳಾದ ಕಾಶೀನಾಥ್ ಸೇರಿದಂತೆ ಹಿರಿಯ ಪೋಲಿಸ್ ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡು ಒಟ್ಟು 34 ಜನರನ್ನು ಸಿಐಡಿ ಪೋಲಿಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಬಂಧಿತ ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದ ಸಿಐಡಿ ತಂಡವು ಆರೋಪಿಗಳ ವಿರುದ್ಧ ಸಿದ್ಧಪಡಿಸಿದ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ನಗರದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೇ ಮೊದಲ ಪ್ರಕರಣ ಪತ್ತೆಯಾಯಿತು. ಸೇಡಂ ಮೂಲದ ವೀರೇಶ್ ಎಂಬಾತನು ಹಣ ಕೊಟ್ಟು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿರುವ ಕುರಿತು ಆತನ ಗೆಳೆಯನೇ ಬಹಿರಂಗಪಡಿಸಿದ್ದ. ಇದರಿಂದಾಗಿ ಇಡೀ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಹಗರಣವು ಬಯಲಿಗೆ ಬಂದಿತು.
ನAತರ ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಅವರ ಗನ್‌ಮ್ಯಾನ್ ಅಯ್ಯಪ್ಪ ಹಯ್ಯಾಳಕರ್ ಅವರೂ ಪರೀಕ್ಷೆ ಅಕ್ರಮದಲ್ಲಿ ಸಿಲುಕಿಕೊಂಡರು. ನಂತರ ಕಾಂಗ್ರೆಸ್ ಮುಖಂಡರಾದ ಮಹಾಂತೇಶ್ ಪಾಟೀಲ್, ಆತನ ಸಹೋದರ ರುದ್ರಗೌಡ ಪಾಟೀಲ್ ಸೇರಿದಂತೆ ಶಾಲೆಯ ಮುಖ್ಯಸ್ಥ ರಾಜೇಶ್ ಹಾಗರಗಿ ಅವರನ್ನು ಬಂಧಿಸಲಾಯಿತು. ಪರಾರಿಯಾಗಿದ್ದ ದಿವ್ಯಾ ಹಾಗರಗಿಯವರನ್ನು ಮಹಾರಾಷ್ಟçದ ಪುಣೆಯಲ್ಲಿ ಸಿಐಡಿ ಪೋಲಿಸರು ಬಂಧಿಸಿದರು. ಜೊತೆಗೆ ರಕ್ಷಣೆ ನೀಡಿದ ಸುರೇಶ್ ಕಾಟೆಗಾಂವಕರ್ ಅವರಿಗೂ ಸಹ ಸೆರೆ ಹಿಡಿಯಲಾಯಿತು. ಶಾಲಾ ಮುಖ್ಯ ಗುರುಗಳು, ಶಿಕ್ಷಕರು, ಸಿಬ್ಬಂದಿಗಳು, ಅಕ್ರಮವಾಗಿ ಆಯ್ಕೆಯಾದ ಪಿಎಸ್‌ಐ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದವರಾಗಿದ್ದಾರೆ. ಹೀಗಾಗಿ ಇಡೀ ಅಕ್ರಮದ ಪರೀಕ್ಷಾ ಕೇಂದ್ರವಾಗಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಎನ್ನುವ ರೀತಿಯಲ್ಲಿ ತನಿಖೆ ಆಗಿದೆ. ಈಗ ದೋಷಾರೋಪಣೆ ಪಟ್ಟಿಯನ್ನು ಸಿಐಡಿ ಪೋಲಿಸರು ಸಲ್ಲಿಸಿದ್ದಾರೆ. ಮುಂದಿನ ಕಾನೂನು ಕ್ರಮ ತೀವ್ರ ಕುತೂಹಲ ಮೂಡಿಸಿದೆ.

LEAVE A REPLY

Please enter your comment!
Please enter your name here