ಬಾರದ ಮಳೆ; ವರುಣನ ಆಹ್ವಾನಿಸಲು ನಗರದಲ್ಲಿ ಪಾರಾಯಣ

0
560

ಕಲಬುರಗಿ, ಜು. 05: ಜೂನ್ ತಿಂಗಳು ಕಳೆದರೂ ಕೂಡ ಇನ್ನು ಮಳೆಯಾಗದಿರುವುದರಿಂದ ಮನೆಗಳಲ್ಲಿರುವ ಬೋರ್‌ವೆಲ್‌ಗಳ ನೀರಿನ ಮಟ್ಟ ಕುಸಿದು, ನೀರು ಬತ್ತಿ ಹೋಗಿದೆ, ಇದರಿಂದಾಗಿ ಮಹಾನಗರದ ಹಲವಾರು ಪ್ರದೇಶಗಳ ಜನತೆ ಪರದಾಡುವಂತಾಗಿದ್ದು, ಮಳೆಗಾಗಿ ವಿಷ್ಣುಸಹಸ್ರನಾಮ ಮತ್ತು ವರುಣ ಮಂತ್ರವನ್ನು ಪಠಿಸಲಾಯಿತು ಎಂದು ಪಾರಾಯಣ ಸಂಚಾಲಕ ರವಿ ಲಾತೂಕರ್ ಅವರು ತಿಳಿಸಿದ್ದಾರೆ.
ರವಿವಾರದಂದು ನಗರದ ಜಯತೀರ್ಥ ನಗರದಲ್ಲಿ ಮಳೆಗಾಗಿ ವಿಷ್ಣಸಹಸ್ರನಾಮ ಮತ್ತು ವರುಣ ಮಂತ್ರ ಓಂ ಜಲ ಬಿಂಬಾಯ ವಿದ್ಮಹೇ ನೀಲಪುರುಷಾಯ ಧೀಮಹಿ ತನ್ಯೋ ವರುಣ ಪ್ರಚೋದಯಾತ ಅಂತಾ 108 ಬಾರಿ ಪಾರಾಯಣ ಮಾಡಲಾಯಿತು.
ಜೂನ್ ತಿಂಗಳ ಮಳೆ ಬಾರದೆ ಕಲ್ಬುರ್ಗಿಯ ಜನರ ಮನೆಯಲ್ಲಿ ಬೋರ್ವೆಲ್ ಬತ್ತಿ ಹೋಗಿವೆ ಜನರು ಹಣ ಖರ್ಚು ಮಾಡಿ ನೀರು ಕೊಳ್ಳುತ್ತಿದ್ದಾರೆ.ಮಹಾನಗರ ಪಾಲಿಕೆ ಆಗಲಿ , ಶಾಸಕರಾಗಾಲಿ ಕೂಡಲೇ ಇದರ ಬಗ್ಗೆ ಗಮನ ಹರಿಸಲಿ ಎಂದು ಪಾರಾಯಣ ಸಂಚಾಲಕ ರವಿ ಲಾತೂರಕರ ಹೇಳಿದರು .
ಈ ಪಾರಾಯಣದಲ್ಲಿ ಅನಿಲ ಕುಲ್ಕರ್ಣಿ, ಸುರೇಶ್ ಕುಲಕರ್ಣಿ,ಶ್ರೀನಿವಾಸ ಕಾರಟಗಿ, ಸಂಜೀವ ಮಹಿಪತಿ, ಕೆ.ಬಿ. ಕುಲಕರ್ಣಿ, ಪ್ರಾಣೇಶ್ ಮೂಜುಂದಾರ್,ಸAತೋಷ್ ಕುಲ್ಕರ್ಣಿ,ವಿನುತ ಜೋಷಿ, ಧನೇಷ್ ,ಅಪ್ಪಾ ರಾವ್ ಟಕ್ಕಳಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here