ಮಹಾ ಸಿಎಂ ಆಗಿ ಏಕನಾಥ ಶಿಂಧೆ ಉಪಮುಖ್ಯಮಂತ್ರಿಯಾಗಿ ಫಡ್ನವೀಸ್

0
549

ಮುಂಬೈ, ಜೂನ್. 30-ಮಹಾರಾಷ್ಟçದ ನೂತನ ಮುಖ್ಯ ಮಂತ್ರಿಯಾಗಿ ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂಧೆ ಹಾಗೂ ಭಾರತೀಯ ಜನತಾ ಪಕ್ಷದ ದೇವೇಂದ್ರ ಫಡ್ನವೀಸ್ ಅವರು ಉಪಮುಖ್ಯ ಮಂತ್ರಿಯಾಗಿ ರಾಜಭನವದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಕೇವಲ 12 ನಿಮಿಷಗಳ ಕಾಲ ನಡೆದ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಹಾರಾಷ್ಟç ರಾಜ್ಯಪಾಲ ಭಗತಸಿಂಗ್ ಕೋಶಿಯಾ ಅವರು ಈ ಉಭಯ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.
ಏಕನಾಥ ಶಿಂಧೆ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಶಿವಸೇನೆಯ ಹುಲಿಯೆಂದೆ ಕರೆಯಲ್ಪಡುತ್ತಿದ್ದ ಬಾಳ ಠಾಕ್ರೆ ಅವರನ್ನು ಸ್ಮರಿಸಿದರು.
ಗುರುವಾರ ಏಕನಾಥ ಶಿಂಧೆ ಮತ್ತು ದೇವೀಂದ್ರ ಫಡ್ನವೀಸ್ ಅವರುಗಳು ಕ್ರಮವಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ ಮಾತ್ರ ಪ್ರಮಾಣ ವಚನ ಸ್ವೀಕರಿಸಿದರು.
ನಾಳೆ ಅಥವಾ ಇನ್ನೆರಡು ದಿನಗಳಲ್ಲಿ ಮತ್ತಷ್ಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಗೋವಾದಿಂದ ಮುಂಬೈಗೆ ಮರಳಿದ ಶಿಂಧೆ ಅವರು ದೇವೇಂದ್ರ ಫಡ್ನವೀಸ್ ಅವರ ನಿವಾಸಕ್ಕೆ ಭೇಟಿ ನೀಡಿ, ನಂತರ ಪತ್ರಿಕಾಗೋಷ್ಠಿಯಲ್ಲಿ ಕ್ಷೀಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಫಡ್ನವೀಸ್ ಅವರು ಶಿಂಧೆ ಹೆಸರನ್ನು ಘೋಷಿಸಿದ್ದ ಬೆನ್ನಲ್ಲೆ ರಾಜ್ಯಪಾಲರನ್ನು ಭೇಟಿ ಮಾಡಿದ ಶಿಂಧೆ ಅವರಿಗೆ ಸಂಜೆ 7.30ಕ್ಕೆ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಆಹ್ವಾನ ನೀಡಿದರು.
ಆಹ್ವಾನದಂತೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದಂತೆ ಅಚ್ಚರಿಯ ಬೆಳವಣಿಗೆಯಲ್ಲಿ ಕೊನೆ ಹಂತದಲ್ಲಿ ಸರಕಾರದಿಂದ ದೂರ ಉಳಿಯಲು ನಿರ್ಧರಿಸಿದ ಫಡ್ನವೀಸ್ ಹೈಕಮಾಂಡ್ ಸೂಚನೆಯಂತೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಎಲ್ಲರಲ್ಲಿ ಅಚ್ಚರಿ ಅಚ್ಚರಿ ಮೂಡಿತು.
ಶಿಂಧೆ ಅವರ ಪರಿಚಯ:
ಥಾಣೆ ಪಾಲ್ಘರ್ ಪ್ರದೇಶದ ಜನಾನುರಾಗಿ ನಾಯಕ 1964 ರ ಫೆಬ್ರವರಿ 9ರಂದು ಸತಾರಾದಲ್ಲಿ ಜನಿಸಿದ ಏಕನಾಥ್ ಶಿಂಧೆ, ನಂತರ ಥಾಣೆಗೆ ತೆರಳಿ 11ನೇ ತರಗತಿ ತನಕ ಮಂಗಳ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡಿದರು.
ಆಟೋ ಚಾಲಕ ಶಿಂಧೆ:
ಕುಟುAಬ ನಿರ್ವಹಣೆ ಕಷ್ಟವಾದಾಗ ಓದಿಗೆ ತಿಲಾಂಜಲಿ ನೀಡಿ ಥಾಣೆಯಲ್ಲಿ ಜೀವನೋಪಾಯಕ್ಕಾಗಿ ಆಟೋರಿಕ್ಷಾ ಓಡಿಸಿಕೊಂಡ ದಿಶೆಯಲ್ಲಿಯೇ ಶಿವಸೇನಾ ಬಗ್ಗೆ ಆಕರ್ಷಣೆ ಬೆಳೆಸಿಕೊಂಡರು.
1980ರಲ್ಲಿ ಬಾಳಾ ಸಾಹೇಬ್ ಠಾಕ್ರೆರಿಂದ ಪ್ರಭಾವಿತರಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಶಿವಸೈನಿಕ ಎನಿಸಿಕೊಂಡರು. ಮಹಾರಾಷ್ಟ್ರ-ಕರ್ನಾಟಕ ನಡುವಿನ ಗಡಿವಿವಾದ ಪ್ರತಿಭಟನೆಯಲ್ಲಿ ಪಾಲ್ಗೊಂಡು 40 ದಿನಗಳ ಕಾಲ ಜೈಲುವಾಸ ಅನುಭವಿಸಿದರು.
ಹಂತ ಹಂತವಾಗಿ ಮೇಲಕ್ಕೇರಿದ ಶಿಂಧೆ 1997ರಲ್ಲಿ ಶಿವಸೇನಾ ನಿಷ್ಠಾವಂತ ಸೈನಿಕ ಎನಿಸಿಕೊಂಡಿದ್ದ ಏಕನಾಥ್ ಶಿಂಧೆಗೆ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಎದುರಿಸಲು ಅವಕಾಶ ಸಿಕ್ಕಿತು. ಭರ್ಜರಿ ವಿಜಯದೊಂದಿಗೆ ಕಾರ್ಪೊರೇಟ್ ಆಗಿ ಜಯಭೇರಿ ಬಾರಿಸಿದರು.
2001ರಿಂದ 2004ರ ತನಕ ಖಿಒಅ ನಾಯಕರಾಗಿ ಅಭಿವೃದ್ಧಿ ಕಾರ್ಯದಲಿ ಆಸಕ್ತಿ ವಹಿಸಿದ್ದಲ್ಲದೆ, ಥಾಣೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣರಾದರು.
ವಿಧಾನಸಭೆ ಪ್ರವೇಶ
2004ರಲ್ಲಿ ಶಿಂಧೆ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಲು ಬಾಳಾ ಠಾಕ್ರೆಯಿಂದ ಆಹ್ವಾನ ಪಡೆದುಕೊಂಡರು. ಥಾಣೆಯಿಂದ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. 2005ರಲ್ಲಿ ಥಾಣೆ ಜಿಲ್ಲೆ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದರು. 2014ರ ಚುನಾವಣೆಯಲ್ಲಿ ಶಿವಸೇನಾಯಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಲೋಕೋಪಯೋಗಿ ಖಾತೆ ಸಚಿವರಾಗಿ ಪದಗ್ರಹಣ ಮಾಡಿದರು. 2019ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಹೆಚ್ಚುವರಿಯಾಗಿ ಪಡೆದುಕೊಂಡರು.
ಕುಟುಂಬದ ಹಿನ್ನೆಲೆ:
ಪತ್ನಿ ಲತಾ ಶಿಂಧೆ, ಪುತ್ರ ಶ್ರೀಕಾಂತ್ ಶಿಂಧೆ. ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಆರ್ಥೋಪೆಡಿಕ್ ಸರ್ಜನ್ ಹಾಗೂ ಕಲ್ಯಾಣ್ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ.
ಏಕನಾಥ್ ಶಿಂಧೆ 2004, 2009, 2014 ಹಾಗೂ 2019ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಏಕನಾಥ್ ಶಿಂಧೆಯ ಇಬ್ಬರು ಮಕ್ಕಳಾದ ದೀಪೇಶ್ ಶಿಂಧೆ, ಶುಭದ ಶಿಂಧೆ ಮನೆ ಸಮೀಪದ ಕೆರೆಯಲ್ಲಿ ಆಟ ಆಡುವಾಗ ಬೋಟ್ ಮುಗಿಸಿ ಸಾವನ್ನಪ್ಪಿದ್ದರು. ಈ ವೇಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಏಕನಾಥ ಶಿಂಧೆ ನಂತರ ರಾಜಕೀಯದಲ್ಲಿ ತೊಡಗಿಕೊಂಡರು.
2014ರಲ್ಲಿ ಬಿಜೆಪಿ ಹಾಗೂ ಶಿವಸೇನಾ ಸಖ್ಯ ಮುರಿದ ಬಳಿಕ ಶಿವಸೇನಾದಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಏಕನಾಥ್ ಶಿಂಧೆ ಕಾರ್ಯನಿರ್ವಹಿದ್ದರು.

LEAVE A REPLY

Please enter your comment!
Please enter your name here