

(ವರದಿ : ಶರಣಯ್ಯ ಮಠಪತಿ)
ಸೇಡಂ, ಜೂನ. 27: ಕೇಂದ್ರ ರ‍್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯ ವಿರುದ್ಧ ಕಾಂಗ್ರೆಸ್ ಪಕ್ಷವು ಸೇಡಂನಲ್ಲಿ ಇಂದು ಸತ್ಯಾಗ್ರಹ ಮತ್ತು ಪ್ರತಿಭಟನೆ ನಡೆಸಿತು.
ಸೇಡಮ ಹಾಗೂ ಮುಧೋಳ ಬ್ಲಾಕ್ ಕಾಂಗ್ರೆಸ್ ಸಮಿತಿ ಜಂಟಿಯಾಗಿ ಕೆಪಸಿಸಿ ರಾಜ್ಯ ಉಪಾಧ್ಯಕ್ಷರಾದ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸೇಡಮ ಸಹಾಯಕ ಆಯುಕ್ತರ ಕರ‍್ಯಾಲಯದ ಎದುರುಗಡೆ ಸತ್ಯಾಗ್ರಹ ನಡೆಸಲಾಯಿತು.
ಈ ಸತ್ಯಾಗ್ರಹ ಮತ್ತು ಪ್ರತಿಭಟನೆಯ ಸಂರ‍್ಭದಲ್ಲಿ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮುಖರಂ ಖಾನ, ನಾಗೇಶ್ವರರಾವ್ ಮಾಲಿಪಾಟೀಲ್, ಜೈಭೀಮ್ ಉಡಗಿ, ದಾಮೋದರರೆಡ್ಡಿ ಪಾಟೀಲ್, ಸತೀಶ ಪೂಜಾರಿ, ರಾಜು ಹಡಪದ, ಸತ್ತಾರ ನಾಡೆಪಲ್ಲಿ, ರಾಮಯ್ಯ ಪೂಜಾರಿ, ಸಿದ್ದು ಬಾನರ, ಭೀಮಾಶಂಕರ ಕೊಳ್ಳಿ, ಅಶೋಕ್ ಫಿರಂಗಿ, ಹಾಜಿ ನಾಡೇಪಲ್ಲಿ ನೀಲಕಂಠ ಟೆಂಗಳಿ, ಗ್ರಾಮ ಪಂಚಾಯತ ಸದಸ್ಯರು, ಪುರಸಭೆ ಸದಸ್ಯರು, ಹಾಗೂ ಮಹಿಳಾ ಪ್ರತಿನಿದಿಗಳು, ಯುವ ನಾಯಕರು, – ಮಾಜಿ ಚುನಾಯಿತ ಜನಪ್ರತಿನಿದಿಗಳು, ಪದಾಧಿಕಾರಿಗಳು, ಕರ‍್ಯರ‍್ತರು, ಅಭಿಮಾನಿಗಳೆಲ್ಲರೂ ಆಗಮಿಸಿ ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು