ಲಾರಿ ಚಕ್ರಕ್ಕೆ ಸಿಕ್ಕಿ ಮಹಿಳೆ ಸಾವು

0
1697

ಕಲಬುರಗಿ, ಜೂನ್. 21: ವೇಗವಾಗಿ ಬರುತ್ತಿದ್ದ ಲಾರಿಯ ಹಿಂದಿನ ಚಕ್ರಕ್ಕೆ ಸಿಕ್ಕಿ ಮಹಿಳೆಯೊಬ್ಬಳು ಸಾವನ್ನಪ್ಪಿದ್ದ ಘಟನೆ ಇಂದು ಸಂಜೆ 5ರ ಸುಮಾರಿಗೆ ನಡೆದ ಬಗ್ಗೆ ವರದಿಯಾಗಿದೆ.
ನಗರದ ರಾಮ ಮಂದರಿ ವೃತ್ತದ ಬಳಿ ನಾಗನಹಳ್ಳಿಯಿಂದ ಜೇವರ್ಗಿ ಕಡೆ ಲಾರಿ ತಿರುವು ಕಂಡಾಗ ಈ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಮೃತಪಟ್ಟ ಅಂಬವ್ವ ಗಂಡ ಶಿವಲಿಂಗಪ್ಪಾ ಕುಂಬಾರ (59) ಎಂದು ಗುರುತಿಸಲಾಗಿದೆ.

ಲಾರಿ ತಿರುವು ಮಾಡುವಾಗ ಈ ಮಹಿಳೆ ಲಾರಿಯ ಹಿಂದನ ಚಕ್ರಕ್ಕೆ ಸಿಕ್ಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಈ ಬಗ್ಗೆ ಸಂಚಾರಿ ಪೋಲಿಸ್ ಠಾಣೆ 2ರಲ್ಲಿ ಅಪಘಾತ ಪ್ರಕರಣ ದಾಖಲಿಸಿಕೊಂಡು ಸಂಚಾರಿ ಪೋಲಿಸರು ಲಾರಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸಂಚಾರಿ ಠಾಣೆಯ ಸರ್ಕಲ್ ಇನ್ಸ್ಪೇಕ್ಟರ್ ಅಮರೇಶ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಅಂಬುಲೇನ್ಸ್ ಮೂಲಕ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here