ಕಾನೂನು ಮಾಪನ ಶಾಸ್ತç ಇಲಾಖೆ ಅಧಿಕಾರಿಗಳಿಂದ ದಲ್ಲಾಳಿಗಳ ಮೂಲಕ ಆಟೋ ಚಾಲಕರಿಂದ ಹಣ ಲೂಟಿ

0
743

ಕಲಬುರಗಿ, ಜೂ. 01: ಸುಮಾರು ನಗರದಿಂದ 15 ರಿಂದ 40 ಕೀ.ಮೀ ದೂರ ಉದ್ದಗಲತೆಯುಳ್ಳ ನಗರದಲ್ಲಿ ಚಲಿಸುತ್ತಿರುವ ಆಟೋಗಳಿಗೆ ಕಡ್ಡಾಯವಾಗಿ ಪ್ರತಿ ಕೀಮಿ.ಗೆ ಇಂತಿಷ್ಟು ದರ ನಿಗದಿ ಮಾಡಿದ್ದು, ಇದನ್ನು ಪಡೆಯಲು ಕಡ್ಡಾಯವಾಗಿ ಆಟೋ ಚಾಲಕರು ಮೀಟರ್ ಅಳವಡಿಸಿಕೊಳ್ಳುವಂತೆ ಸರಕಾರದ ಆದೇಶವಾಗಿದೆ.
ಅಲ್ಲದೇ ನಮ್ಮ ಕಲಬುರಗಿ ನಗರದ ಸೇರಿ ಹಲವಾರು ನಗರಗಳಲ್ಲಿ 15 ಕೀಮಿ. ವ್ಯಾಪ್ತಿಯಲ್ಲಷ್ಟೇ ಆಟೋಗಳು ಸಂಚರಿಸಲು ಅನುಮತಿಸಲಾಗಿದೆ. ಆದರೆ ಕಲಬುರಗಿ ನಗರದ ಸುತ್ತಳತೆ ಏನಿದ್ದರೂ ಸಾರ್ವಜನಿಕರು ಆಟೋಗಳಲ್ಲಿ ಪ್ರಯಾಣಿಸುವುದು 5 ರಿಂದ 7 ಕಿ.ಮೀ. ಇದಕ್ಕೆ ಯಾವುದೇ ಮೀಟರ್ ನೋಡಿ ಪ್ರಯಾಣಿಕರು ಹಣ ಕೊಡುವುದಿಲ್ಲ, ಒಂದು ಕಡೆ ಹೋಗಬೇಕಾದರೆ ಇಂತಿಷ್ಟು ಹಣ ಉದಾಃ ಸುಪರ್ ಮಾರುಕಟ್ಟೆಯಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ದರ ಒಬ್ಬರಿಗೆ 15 ರೂ. ನಗದಿ ಮಾಡಲಾಗಿದ್ದು, ಆದರೆ ಈ ಕಲಬುರಗಿ ನಗರ ಪ್ರದೇಶದಲ್ಲಿ ಮೀಟರ್ ಮೂಲಕ ಹಣ ಪಾವತಿಸುವ ಕಾನೂನು ಇಲ್ಲ ಆದರೂ ರಸ್ತೆ ಸಾರಿಗೆ ಅಧಿಕಾರಿಗಳು ಪ್ರತಿ ಆಟೋಗಳಿಗೆ ಎಲೆಕ್ಟಾçನಿಕ್ ಮೀಟರ್ ಅಳವಡಿಸಿದರೂ ಅದಕ್ಕೆ ಸರಕಾರದಿಂದ ಕಾನೂನು ಮಾಪಣ ಶಾಸ್ತç ಇಲಾಖೆಯವರು ಸತ್ಯಪನ ಪ್ರಮಾಣ ಪತ್ರ ನೀಡಲು 150 ರೂ. ದರ ನಿಗದಿ ಪಡಿಸಲಾಗಿದೆ ಅಲ್ಲದೇ ಅದರಂತೆ ಅದರ ಹಣ ಸ್ವೀಕೃತಿಯ ರಶೀದಿಯು ಕೊಡುತ್ತಾರೆ, ಆದರೆ ಇಲ್ಲಿ ಒಂದು ಕರಾಮತ್ತು ನಡೆಸಿದ ಕಾನೂನು ಮಾಪನ ಶಾಸ್ತç ಇಲಾಖೆಯವರು ನಮ್ಮ ಹತ್ತಿರ ಮೀಟರ್‌ಗೆ ಸೀಲ್ ಹಾಕಲು ಲೆಡ್ ಮತ್ತು ತಾರ ಇಲ್ಲದೇ ಖಾಸಗಿ ಹಾಕಿಸಿಕೊಂಡು ಬಂದರೆ ನಿಮಗೆ ನವೀಕರಿಸಲಾಗುವುದು ಎಂದು ಹೇಳುವ ಮೂಲಕ ಈ ಇಲಾಖೆ ಖಾಸಗಿ ಸರ್ವಿಸ್ ಸೆಂಟರ್‌ಗಳ ಮೂಲಕ ಆಟೋ ಚಾಲಕರಿಂದ 236 ರೂ. ಹೆಚ್ಚಿಗೆ ಅಂದರೆ 386 ಹಣ ಕೀಳುತ್ತಿರುವುದು ರಾಜಾರೋಷವಾಗಿ ನಡೆದಿದೆ.
ಕಳೆದ 2008ನೇ ಸಾಲಿನಲ್ಲಿ ಆಟೊ ಚಾಲರಿಗೆ ಕೆಸರಟಗಿ ಗ್ರಾಮದಲ್ಲಿ ಸರಕಾರದಿಂದ ಮಂಜೂರಾಗಿರುವ ಮನೆ ನೀಡಬೇಕಾದರೆ ಕಡ್ಡಾಯವಾಗಿ ಆಟೋಗಳಿಗೆ ಎಲೆಕ್ಟಾçನಿಕ್ ಮೀಟರ್ ಅಳವಡಿಸಿ ನವೀಕರಿಸಿದರೆ ಮಾತ್ರ ಮನೆಗಳನ್ನು ನೀಡಲಾಗುವುದು ಎಂಬ ಆದೇಶವನ್ನು ಆಗಿನ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಪರಿಣಾಮವಾಗಿ ಈ ಎಲ್ಲ ಅವಾಂತರಗಳು ನಡೆಯುತ್ತಿವೆ.
ಈಗಲಾದರೂ ಸಂಬAಧಪಟ್ಟ ಇಲಾಖೆಯವರನ್ನು ವಿಚಾರಿಸಿ, ಜಿಲ್ಲಾಧಿಕಾರಿಗಳು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬಹುದೇ?

LEAVE A REPLY

Please enter your comment!
Please enter your name here