ಸುಲಿಗೆಕೋರರ ಸೆರೆ: ಮೊಬೈಲ್, ಸ್ಕೂಟಿ, ಮಾರಕಾಸ್ತçಗಳು ವಶ

0
1353

ಕಲಬುರ್ಗಿ,ಮೇ.17- ನಾಲ್ವರು ಸುಲಿಗೆಕೋರರನ್ನು ಸಬ್ ಅರ್ಬನ್ ಠಾಣೆಯ ಪೋಲಿಸರು ಕಾರ್ಯಾಚರಣೆಯ ವೇಳೆ ಬಂಧಿಸಿದ ಕುರಿತು ನಗರದ ಮಾಲಗತ್ತಿ ರಸ್ತೆ ಪಕ್ಕದಲ್ಲಿರುವ ಮರಗಮ್ಮ ದೇವಸ್ಥಾನದ ಹತ್ತಿರ ವರದಿಯಾಗಿದೆ.
ಬಂಧಿತರನ್ನು ಇಸ್ಲಾಮಾಬಾದ್ ಕಾಲೋನಿಯ ಪೇಂಟರ್ ಸಮೀರ್ ತಂದೆ ನಬಿಸಾಬ್ ಮುಲ್ಲಾವಾಲೆನ್ (19), ಖಮರ್ ಕಾಲೋನಿಯ ಗೌಂಡಿ ಮೊಹ್ಮದ್ ತಬರೇಷ್ ತಂದೆ ಇಮ್ತಿಯಾಜ್ ಬಾಬಾ (19), ಖಾಜಾ ಕಾಲೋನಿಯ ಬೀಬಿ ರಜಾ ಕಾಲೇಜು ಹತ್ತಿರದ ನಿವಾಸಿ ಹಾಗೂ ಪ್ಲಂಬರ್ ಮೊಹ್ಮದ್ ಮೊಸಿನ್ ತಂದೆ ಮೊಹ್ಮದ್ ಬಾಬಾ (18) ಹಾಗೂ ಅಬೂಬಕರ್ ಕಾಲೋನಿಯ ಚುನ್ನಭಟ್ಟಿ ಹತ್ತಿರದ ಕೂಲಿ ಕೆಲಸಗಾರ ಮೊಹ್ಮದ್ ಮುಕ್ರಮ್ ತಂದೆ ಶುಕುರ್ (23) ಎಂದು ಗುರುತಿಸಲಾಗಿದೆ.
ಬಂಧಿತರಿAದ ಒಂದು ಮೊಬೈಲ್, ಒಂದು ಹೊಂಡಾ ಏವಿಯೇಟರ್ ಸ್ಕೂಟಿ ಹಾಗೂ ಎರಡು ಖಡ್ಗಗಳನ್ನು ಪೋಲಿಸರು ಜಪ್ತಿ ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.
ಗ್ರಾಮೀಣ ಪೋಲಿಸ್ ಠಾಣೆಯ ಪಿಐ ರಮೇಶ್ ವೈ. ಕಾಂಬಳೆ ಅವರ ನೇತೃತ್ವದಲ್ಲಿ ಪಿಎಸ್‌ಐ ಕವಿತಾ ಚವ್ಹಾಣ್, ಸಿಬ್ಬಂದಿಗಳಾದ ರಾಜಕುಮಾರ್, ಸಿರಾಜ್ ಪಟೇಲ್, ಮಲ್ಲಿಕಾರ್ಜುನ್, ನಾಗೇಂದ್ರ, ಪ್ರಕಾಶ್ ಅನಿಲ್ ಮತ್ತು ಅಂಬಾನಿ ಅವರು ಕಾರ್ಯಾಚರಣೆ ಕೈಗೊಂಡರು. ಪೋಲಿಸರ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here