ಪ್ರಾಧಿಕಾರದಿಂದ ಅಪ್ಪನ ಕೆರೆ ಅಭಿವೃದ್ಧಿ:ದಯಾಘನ ಧಾರವಾಡಕರ್

0
586

ಕಲಬುರಗಿ,ಮೇ.17:ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಶ್ರೀ ಶರಣಬಸವೇಶ್ವರ ಕೆರೆಯ ಒಂದು ಭಾಗದಲ್ಲಿ ಈಗಾಗಲೆ ಮ ಹಾನಗರ ಪಾಲಿಕೆ ಮತ್ತು ಕೆ.ಕೆ. ಆರ್.ಡಿ.ಬಿ. ಜಂಟಿಯಾಗಿ ಅಭಿವೃ ದ್ಧಿಪಡಿಸುತ್ತಿದ್ದು, ಅದೇ ರೀತಿಯಾಗಿ ಇನ್ನೊಂದು ಭಾಗದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್ ಹೇಳಿದರು.
ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ ಭವನದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾದ ಕುಸನೂರ ವಸತಿ ಬಡಾವಣೆ ಯೋಜನೆಯ ಲ್ಲಿನ ನಿವೇಶನಗಳ ಲಾಟರಿ ಮೂ ಲಕ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರಾಧಿಕಾರವು ನಿವೇಶನ, ಮನೆ, ಬಡಾವಣೆ ಅಭಿವೃದ್ಧಿಪಡಿ ಸುವದಷ್ಟೆ ಅಲ್ಲ ನಗರದ ಅಭಿವೃ ದ್ಧಿಗೂ ಕೈ ಜೋಡಿಸಿದೆ. ಕೆ.ಕೆ. ಅರ್.ಡಿ.ಬಿ. ಅನುದಾನದೊಂದಿಗೆ 26.30 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ನಗರದ ಎಂ.ಎಸ್. ಕೆ.ಮಿಲ್ ಪ್ರದೇಶದ ಸುಸಜ್ಜಿತ ಕಣ್ಣಿ ತರಕಾರಿ ಮಾರುಕಟ್ಟೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಮುಂದಿನ 2 ತಿಂಗಳಲ್ಲಿ ಕಾಮ ಗಾರಿ ಆರಂಭಗೊಳ್ಳಲಿದೆ. ಇದರಿಂ ದ ಬೀದಿಯಲ್ಲಿ ತರಕಾರಿ ಮಾ ರುತ್ತಿದ್ದ ರೈತಾಪಿ ಜನರಿಗೆ ಸುಸಜ್ಜಿತ ಸ್ಥಳ ದೊರೆಯಲಿದೆ. ಒಟ್ಟಾರೆ ಯಾಗಿ ಕಲಬುರಗಿ ನಗರ ಸುಂ ದರ ಮತ್ತು ಮಾದರಿ ನಗರವ ನ್ನಾಗಿಸುವ ಪಣ ತೊಡಲಾಗಿದೆ ಎಂದರು.
ಕುಸನೂರ ಬಡಾವಣೆ ಯೋ ಜನೆ 4-5 ವರ್ಷದ ಹಿಂದಿನ ಯೋಜನೆಯಾಗಿದೆ. ಕಾರಣಾಂ ತರದಿಂದ ನೆನಗುದ್ದಿಗೆ ಬಿದ್ದಿದ ಈ ಯೋಜನೆಗೆ ತಾವು ಪ್ರಾಧಿಕಾರದ ಅಧ್ಯಕ್ಷರಾದ ನಂತರ ಕಳೆದ ಒಂದು ವರ್ಷದಿಂದ ಯೋಜನೆಗಿರುವ ಸಮಸ್ಯೆ-ತೊಡಕುಗಳನ್ನು ನಿವಾರಿಸಿ ಇಂದು ನಿವೇಶನ ಹಂಚಿಕೆ ಪಾರ ದರ್ಶಕವಾಗಿ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಇಂತಹ ಯೋಜನೆಗಳು ನಿರಂತರವಾಗಿ ಜಾರಿಗೆ ತರಲಾಗುವುದು ಎಂದ ರು.
ಇದಕ್ಕೂ ಮುನ್ನ ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ ಸರ್ವರನ್ನು ಸ್ವಾಗತಿಸಿ ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರದಿಂದ 90.17 ಎಕರೆ ಪ್ರದೇಶದಲ್ಲಿ ಅಭಿ ವೃದ್ಧಿಪಡಿಸಲಾದ ಕುಸನೂರ ವಸತಿ ಯೋಜನೆಯಡಿ ಒಟ್ಟು 1490 ನಿವೇಶನಗಳಿದ್ದು, ಇದರಲ್ಲಿ ಮೂಲೆ ನಿವೇಶನ 188 ಹೊರತು ಪಡಿಸಿ 1302 ನಿವೇಶನಗಳನ್ನು ಹರಾಜಿಗೆ ಇಡಲಾಗಿದೆ. 1302 ನಿವೇಶನಕ್ಕೆ 1989 ಅರ್ಜಿ ಸ್ವೀಕೃತಗೊಂಡಿರುವ ಹಿನ್ನೆಲೆಯಲ್ಲಿ ಇಂದು ಪ್ರವರ್ಗವಾರು ಲಾಟರಿ ಮೂಲಕ ಪಾರದರ್ಶಕವಾಗಿ ಹಂಚಿಕೆ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾ ಟಕ ಗೃಹ ಮಂಡಳಿಯ ಕಾರ್ಯ ನಿರ್ವಾಹಕ ಅಭಿಯಂತ ಮುರ ಳಿಧರ ದೇಶಮುಖ, ಪ್ರಾಧಿಕಾರದ ನಗರ ಯೋಜನಾ ಸದಸ್ಯ ಎಸ್.ಎಸ್.ಗಾರಂಪಳ್ಳಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ದಿಲೀಪ್ ಜಾಧವ, ಕಾರ್ಯದರ್ಶಿ ವೀಣಾ ಕುಲಕರ್ಣಿ ಇದ್ದರು. ಸುಬ್ಬರಾವ್ ನಿರ್ವಹಣೆ ಮಾಡಿ ದರು.
ಪ್ರಾಧಿಕಾರದ ಅನೇಕ ಸಿಬ್ಬಂ ದಿಗಳು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here