ಪಿಎಸ್‌ಐ ಅಕ್ರಮ: ಕೆಎಸ್‌ಆರ್‌ಪಿ ಅಸಿಸ್ಟೆಂಟ್ ಕಮ್ಯಾಂಡೆoಟ್ ವೈಜನಾಥ್ ಅಮಾನತ್ತು

0
699

ಕಲಬುರ್ಗಿ,ಮೇ.13- ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧನಕ್ಕೆ ಒಳಗಾಗಿರುವ ಕೆಎಸ್‌ಆರ್‌ಪಿ ಅಸಿಸ್ಟೆಂಟ್ ಕಮ್ಯಾಂಡೆAಟ್ ವೈಜನಾಥ್ ರೇವೂರ್‌ನಿಗೆ ಸೇವೆಯಿಂದ ಅಮಾನತ್ತಿಗೆ ಒಳಪಡಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಜೊತೆ ವೈಜನಾಥ್ ರೇವೂರ್ ಒಡನಾಟ ಹೊಂದಿದ್ದರು ಎಂಬುದು ತನಿಖೆಯ ಮೂಲಕ ತಿಳಿದುಬಂದಿದೆ.
ಅಭ್ಯರ್ಥಿಗಳು ಹಾಗೂ ಪ್ರಕರಣದ ರೂವಾರಿ ನಡುವೆ ಸೇತುವೆಯಾಗಿ ಕೆಎಸ್‌ಆರ್‌ಪಿ ಅಸಿಸ್ಟೆಂಟ್ ಕಮ್ಯಾಂಡೆAಟ್ ವೈಜನಾಥ್ ರೇವೂರ್ ಕೆಲಸ ಮಾಡುತ್ತಿದ್ದ. ಅಭ್ಯರ್ಥಿಗಳನ್ನು ಹುಡುಕಿ ಅಕ್ರಮದ ವ್ಯವಹಾರ ಕುದುರಿಸಿದ್ದೆಂಬ ಗುರುತರ ಆರೋಪವೂ ವೈಜನಾಥ್ ಮೇಲಿದೆ. ಸಿಐಡಿ ವಿಚಾರಣೆ ವೇಳೆ ಪ್ರಕರಣದ ರೂವಾರಿ ರುದ್ರಗೌಡ ಪಾಟೀಲ್ ಬಿಟ್ಟುಕೊಟ್ಟ ಸುಳಿವಿನ ಆಧಾರದಲ್ಲಿ ಕಳೆದ ಮೇ6ರಂದು ಆರೋಪಿಯನ್ನು ಸಿಐಡಿ ಪೋಲಿಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ನಗರದ ಕೆಎಸ್‌ಆರ್‌ಪಿ ಪರೇಡ್ ಮೈದಾನದಲ್ಲಿ ತರಬೇತಿ ಪೂರ್ಣಗೊಂಡ ಅಭ್ಯರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂಧ್ರ ಅವರೂ ಸೇರಿದಂತೆ ಕೆಎಸ್‌ಆರ್‌ಪಿ ಅಸಿಸ್ಟೆಂಟ್ ಕಮ್ಯಾಂಡೆAಟ್ ವೈಜನಾಥ್ ರೇವೂರ್ ಸಹ ಪಾಲ್ಗೊಂಡಿದ್ದ. ಕಾರ್ಯಕ್ರಮ ಮುಗಿದ ಕೆಲ ಗಂಟೆಗಳಲ್ಲಿಯೇ ವೈಜನಾಥ್ ಬಂಧನವಾಗಿದೆ.
ವೈಜನಾಥ್ ರೇವೂರ್ ಪತ್ನಿ ಶ್ರೀಮತಿ ಸುನಂದಾ ವೈಜನಾಥ್ ರೇವೂರ್ ಅವರು ನಗರದ ಕೇಂದ್ರ ಕಾರಾಗೃಹದ ಜೈಲಾಧಿಕಾರಿ ಆಗಿದ್ದಾರೆ. ಪತ್ನಿ ಕೆಲಸ ಮಾಡುವ ಕಾರಾಗೃಹಕ್ಕೆ ಅಸಿಸ್ಟೆಂಟ್ ಕಮ್ಯಾಂಡೆAಟ್ ಈಗ ಅತಿಥಿ ಆಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಪೋಲಿಸ್ ಅಧಿಕಾರಿಗಳು ಇದೀಗ ಜೈಲು ಸೇರಿದ್ದಾರೆ. ಅಮಾನತ್ತುಗೊಂಡ ಅಸಿಸ್ಟೆಂಟ್ ಕಮ್ಯಾಂಡೆAಟ್ ಮತ್ತು ಸಿಪಿಐ ಇಬ್ಬರನ್ನೂ ನಗರದ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ಅವರ ಕಸ್ಟಡಿ ಅವಧಿ ಅಂತ್ಯವಾಗಿದ್ದರಿAದ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಸ್ಥಳಾಂತರಿಸಲಾಗಿದೆ.

LEAVE A REPLY

Please enter your comment!
Please enter your name here