ಪಿಎಸ್‌ಐ ಅಕ್ರಮದ ಆರೋಪಿ ಆರ್.ಡಿ. ಪಾಟೀಲ್ ಬೆಂಗಳೂರಿಗೆ ಸ್ಥಳಾಂತರ…!

0
807

ಕಲಬುರ್ಗಿ, ಮೇ.11- ಉಪ್ಪು ತಿಂದವ ನೀರು ಕುಡಿಯಲೇಬೇಕು. ಮಾಡಿದ ಪಾಪಕ್ಕೆ ತಕ್ಕ ಪ್ರಾಯಶ್ಚಿತವನ್ನು ಪಡಲೇಬೇಕು ಎನ್ನುವಂತೆ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ರೂವಾರಿ ಆರ್.ಡಿ. ಪಾಟೀಲ್ ಈಗಾಗಲೇ ಮರ‍್ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಸಿಐಡಿ ವಶದಲ್ಲಿದ್ದು, ಕಸ್ಟಡಿ ಅವಧಿ ಮುಗಿದ ನಂತರ ಜೈಲು ಸೇರಿದ್ದ. ಆದಾಗ್ಯೂ, ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಅಕ್ರಮ ಪ್ರಕರಣಕ್ಕೆ ಮರುಜೀವ ಬಂದಿದ್ದು, ಪಿಎಸ್‌ಐ ಅಕ್ರಮದ ಆರೋಪಿ ರುದ್ರಗೌಡ ಪಾಟೀಲ್‌ನಿಗೆ ಬಾಡಿ ವಾರೆಂಟ್ ಮೇರೆಗೆ ಪೋಲಿಸರು ಬೆಂಗಳೂರಿಗೆ ಕರೆದುಕೊಂಡು ಹೋದರು. ಇದೇ ವೇಳೆ ಪ್ರಕರಣ ಮಂಡ್ಯ ಜಿಲ್ಲೆಗೂ ವ್ಯಾಪಿಸಿದೆ.
ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ಹಾಗೂ ಸಹಾಯಕ ಅಭಿಯಂತರರ ಹುದ್ದೆಗಳೂ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದನ್ನು ವಿಚಾರಣೆ ವೇಳೆ ಸಿಐಡಿ ಪೋಲಿಸರು ಕಂಡುಕೊAಡಿದ್ದರು. ಅಕ್ರಮದ ಕುರಿತು ಈ ಹಿಂದೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಅಲ್ಲಿನ ಪೋಲಿಸರು ಪ್ರಕರಣ ಮರು ತನಿಖೆ ಆರಂಭಿಸಿದ್ದು, ಪ್ರಮುಖ ಆರೋಪಿ ಆರ್.ಡಿ. ಪಾಟೀಲ್‌ನಿಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಈಗಾಗಲೇ 16 ಜನರನ್ನು ಬಂಧಿಸಲಾಗಿದೆ. 17ನೇ ಆರೋಪಿ ಆರ್.ಡಿ. ಪಾಟೀಲ್‌ನಿಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಪೋಲಿಸ್ ವಶಕ್ಕೆ ಪಡೆಯಲಿದ್ದಾರೆ. ಮತ್ತೋರ್ವ ಆರೋಪಿ ಅಕ್ರಮ ಎಸಗಿರುವುದು ಬಯಲಿಗೆ ಬಂದಿದ್ದು, ಸಿಐಡಿ ವಶದಲ್ಲಿದ್ದಾನೆ.
ನೇಮಕಾತಿ ಅಕ್ರಮಕ್ಕೆ ಸಂಬAಧಿಸಿದAತೆ ನಾಗಮಂಗಲ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರೊಬ್ಬರನ್ನು ಸಿಐಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಮಾಜಿ ಸಚಿವವರೊಬ್ಬರ ಪರಮಾಪ್ತ ವಲಯದಲ್ಲಿ ಒಬ್ಬರಾಗಿರುವ ವ್ಯಕ್ತಿ ಹಗರಣದಲ್ಲಿ ಭಾಗಿಯಾಗಿರುವುದು ಕಾಂಗ್ರೆಸ್ಸಿಗೆ ಮುಜುಗುರ ತಂದಿದೆ. 40 ಲಕ್ಷ ರೂ.ಗಳ ಡೀಲ್ ಕುದುರಿಸಿದ್ದ ಆರೋಪವೂ ಅವರ ಮೇಲಿದೆ ಎಂದು ಸಿಐಡಿ ಪೋಲಿಸರು ತಿಳಿಸಿದ್ದಾರೆ.
ಹತ್ತು ದಿನ ಪೋಲಿಸ್ ವಶಕ್ಕೆ: ಲೋಕೋಪಯೋಗಿ ಇಂಜಿನಿಯರ್ ಪರೀಕ್ಷೆಯಲ್ಲಿ ಅಕ್ರಮ ಆರೋಪ ಪ್ರಕರಣದ ಆರೋಪಿ ಆರ್.ಡಿ. ಪಾಟೀಲ್‌ನಿಗೆ ಪೋಲಿಸ್ ಕಸ್ಟಡಿಗೆ ನೀಡಲಾಗಿದೆ. ಹತ್ತು ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ಬೆಂಗಳೂರು ನಗರದ ಒಂದನೇ ಎಸಿಎಂಎA ನ್ಯಾಯಾಲಯ ಆದೇಶಿಸಿದೆ.

LEAVE A REPLY

Please enter your comment!
Please enter your name here