ಕಲಬುರಗಿ, ಏ. 29: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಕೇಂದ್ರ ಬಿಂದು, ಕಿಂಗ್‌ಪಿನ್ ಆಗಿರುವ ಬಿಜೆಪಿ ಜಿಲ್ಲಾ ನಾಯಕಿ ಹಾಗೂ ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ಕೊನೆಗೂ ಪೋಲಿಸರು ವಶಕ್ಕೆ ಪಡೆದಿದ್ದಾರೆ.
ನೆರೆಯ ಮಹಾರಾಷ್ಟçದ ಪುಣೆಯಲ್ಲಿ ಹಾಗರಗಿ ಸಮೇತ ಅವರ ತಂಡ ಇರುವ ಬಗ್ಗೆ ನಿಖರ ಮಾಹಿತಿ ಕಲೆ ಹಾಕಿದ ರಾಗವೇಂದ್ರ ಹೆಗಡೆ ನೇತೃತ್ವದ ಸಿಐಡಿ ಪೋಲಿಸರ ತಂಡ, ಗುರುವಾರ ರಾತ್ರಿ ಹೋಟೆಲ್‌ವೊಂದರಲ್ಲಿ ಊಟ ಮಾಡುವಾಗ ಬಂದಿಸಿದೆ ಎಂದು ಹೇಳಲಾಗಿದೆ.
ಕಳೆದ 19 ದಿನಗಳಿಂದ ಈ ಅಕ್ರಮ ನೇಮಕಾತಿ ಹಗರಣ ಪ್ರಕರಣ ಹೊರಬರುತ್ತಿದ್ದ ಹಾಗೇ ದಿವ್ಯಾ ಹಾಗರಗಿ ಸಮೇತ ಇನ್ನು ನಾಲ್ವರು ನಾಪತ್ತೆಯಾಗಿದ್ದರು.
ಈ ಅಕ್ರಮ ನೇಮಕಾತಿ ಪ್ರಕರಣದಲ್ಲಿನ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ಅವರ ಬಂಧನಕ್ಕಾಗಿ ಸಿಐಡಿ ಪೋಲಿಸರು ಮೂರು ತಂಡಗಳನ್ನು ರಚಿಸಿ, ಬಂಧನದ ಬಲೆ ಬೀಸಿದ್ದರು.
ಸೋಲಾಪುರದ ಉದ್ಯಮಿ ಸುರೇಶ ಎಂಬುವವರನ್ನು ಸಹ ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಸುರೇಶ ಅವರು ದಿವ್ಯಾ ಹಾಗರಗಿ ಮಧ್ಯೆ ಕಳೆದ ಹಲವಾರು ವರ್ಷಗಳಿಂದ ವ್ಯವಹಾರ ನಡೆದಿದ್ದರ ಬಗ್ಗೆಯೂ ಸಿಐಡಿ ತಂಡ ಮಾಹಿತಿ ಕಲೆ ಹಾಕಿದ್ದು, ಸುರೇಶನನ್ನು ಸಹ ಬಂಧಿಸಲಾಗಿದೆ.
ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿಯನ್ನು ಸರಕಾರ ರಕ್ಷಿಸುತ್ತಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಪದೇ ಪದೇ ಒತ್ತಾಯಿಸುತ್ತ ಪ್ರತಿಭಟನೆಗಳನ್ನು ಕೂಡ ನಡೆಸಿದ್ದವು.
ಅಕ್ರಮ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಬೆನ್ನಲ್ಲೆ ದಿವ್ಯಾ ಹಾಗರಗಿ ಜಾಮೀನಿಗಾಗಿ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು, ಆದರೆ ಸಿಐಡಿ ಪೋಲಿಸರ ಮನವಿ ಮೇರೆಗೆ ನ್ಯಾಯಾಲಯ ಅರ್ಜಿಯನ್ನು ಸಹ ತಿರಸ್ಕರಿಸಿತ್ತು, ಅಲ್ಲದೇ ಒಂದು ವಾರದೊಳಗೆ ತಲೆತಪ್ಪಿಸಿಕೊಂಡಿರುವ ಆರೋಪಿಗಳು ಶರಣಾಗತರಾಗದೇ ಹೋದರೆ ಮುಂಬೈ ಮಾದರಿಯ ಭಯೋತ್ಪಾದಕ ದಾವುದ್ ಇಬ್ರಾಹಿಂಗೆ ಹೊರಡಿಸಿ ವಾರೆಂಟ್ ನಂತರ ಕರ್ನಾಟಕದಲ್ಲೂ ಪ್ರಥಮ ಬಾರಿಗೆ ವಾರೆಂಟ್ ನ್ಯಾಯಾಲಯ ಹೊರಡಿಸಿದ್ದ ಬೆನ್ನೆಲೆ ದಿವ್ಯಾ ಹಾಗರಗಿ ಬಂಧನವಾಗಿದೆ.
ಪುಣೆಯ ಖಾಸಗಿ ಹೋಟೆಲ್‌ವೊಂದರಲ್ಲಿ ಊಟ ಮಾಡುತ್ತಿದ್ದ ಸಮಯದಲ್ಲಿ ಸಿಐಡಿ ಪೋಲಿಸರು, ದಿವ್ಯಾ ಹಾಗರಗಿ ಸಮೇತ ಇನ್ನು ಮೂರು ಜನ ಆರೋಪಿಗಳಾದ ಅರ್ಚನಾ, ಸುನಂದಾ ಮತ್ತು ಸುರೇಶನನ್ನು ಬಂಧಿಸಿ ಪುಣೆಯಿಂದ ಕಲಬುರಗಿ ನಗರಕ್ಕೆ ಕರೆ ತರುತ್ತಿದ್ದಾರೆ.