ಅತನೂರ ಗ್ರಾಮಕ್ಕೆ ಆಗಮಿಸಿದ ಡಿ.ಸಿ.

0
901

ಅಫಜಲಪುರ, ಏ. 16: “ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ” ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಶನಿವಾರ ಅಫಜಲಪೂರ ತಾಲೂಕಿನ ಅತನೂರ ಗ್ರಾಮಕ್ಕೆ ಆಗಮಿಸಿದರು.
ಸಹಾಯಕ ಅಯುಕ್ತೆ ಮೋನಾ ರೋಟ್, ಅಫಜಲಪೂರ ತಹಶೀಲ್ದಾರ ಸಂಜೀವಕುಮಾರ ದಾಸರ, ಡಿ.ಡಿ.ಎಲ್.ಅರ್. ಶಂಕರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಿ ಜಗನ್ನಾಥ ಗೊಳಸಾರ ಅವರು ಜಿಲ್ಲಾಧಿಕಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಣೆಯ ಮೇಲೆ ತಿಲಕವಿಟ್ಟು ಗ್ರಾಮದ ಮಹಿಳೆಯರು ಕುಂಭ ಕಳಸದೊಂದಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಅವರುಗಳನ್ನು ಆಲಂಕೃತ ಎತ್ತಿನ ಚಕಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆತರಲಾಯಿತು.

ಬಾoತಿಯರಿಗೆ ತಾಯಿ ಕಾರ್ಡ್ ವಿತರಣೆ

ವೇದಿಕೆ ಸ್ಥಳಕ್ಕೆ ಬರುವ ಮುನ್ನ ಡಿ.ಸಿ ಮತ್ತು ಸಿ.ಇ.ಓ ಅವರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅತನೂರ ಮಠದ ಪೂಜ್ಯ ಶ್ರೀ ಷ.ಬ್ರ. ಅಭಿನವ ಗುರುಬಸವ ಶಿವಚಾರ್ಯರು ಡಿ.ಸಿ ಮತ್ತು ಸಿ.ಇ.ಓ ಅವರನ್ನು ಸನ್ಮಾನಿಸಿದರು.
ತದನಂತ ಗ್ರಾಮ ವಾಸ್ತವ್ಯ ಅಂಗವಾಗಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ ಅರೋಗ್ಯ ಶಿಬಿರಕ್ಕೆ ಭೇಟಿ ಮಾಡಿ ಕೋವಿಡ್ ಲಸಿಕೆ ಕಾರ್ಯ ವೀಕ್ಷಿಸಿದರು.

ಸಾಮಾಜಿಕ ಪಿಂಚಣಿ ಮಂಜೂರಾತಿ ಆದೇಶ ವಿತರಣೆ

ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಡಿ.ಸಿ. ಅವರ ಬಳಿ ತಮ್ಮ ಅಳಲನ್ನು ಹೇಳಿಕೊಳ್ಳಲು ಆಗಮಿಸಿದ್ದರು. ಇದರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

LEAVE A REPLY

Please enter your comment!
Please enter your name here