ಮಾರ್ಚ 20ರ ವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ

0
1121

ಕಲಬುರಗಿ, ಮಾ. 16: ಜಿಲ್ಲೆಯಾದ್ಯಂತ 15.3.2022 ರಿಂದ 19.3.2022ರ ಬೆಳಿಗ್ಗೆ 6.00 ಗಂಟೆಯವರೆಗೆ ಹೊರಡಿಸಲಾಗಿದ್ದ ಕಲಂ 144ರ ಅನ್ವಯ ನಿಷೇದಾಜ್ಞೆಯಿರುವುದರಿಂದ ಈ ಮೊದಲು ಜಿಲ್ಲೆಯಾದ್ಯಂತ ಎಲ್ಲ ಮದ್ಯ ಮಾರಾಟವನ್ನು ನಿಷೇಧಿಸಿ ಹೊರಡಿ ಸಲಾಗಿದ್ದ ಆಜ್ಞೆಯನ್ನು ದಿನಾಂಕ 20.3.2022ರ ಬೆಳಗಿನ 6 ಗಂಟೆಯವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿಗಳು ಆದೇಶ ಜಾರಿ ಮಾಡಿದ್ದಾರೆ.
ದಿನಾಂಕ 15.3.2022ರಂದು ರಾತ್ರಿ 8 ಗಂಟೆಯಿAದ ಜಿಲ್ಲೆಯಾದ್ಯಂತ ಹಿಜಾಬ್ ತೀರ್ಪು ಪ್ರಕಟಿಸುವ ಹಿನ್ನೆಲೆಯಲ್ಲಿ ನಿಷೇದಾಜ್ಞೆಯನ್ನು 19ರ ಬೆಳಿಗ್ಗೆ 6ರ ವರೆಗೆ ಹೊರಡಿಸಲಾಗಿತ್ತು ಅಲ್ಲದೇ ಮಾರ್ಚ 17, 18 ಎರಡು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ ಮತ್ತೇ 19ರಂದು ಕೂಡ ಹೋಳಿ ಹಬ್ಬದ ಆಚರಣೆಗೆ ಹಲವೆಡೆ ನಡೆಯುವ ಸಾಧ್ಯತೆಯಿರುವುದರಿಂದ ಮದ್ಯ ಮಾರಾಟವನ್ನು 20ರ ವರೆಗೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಹಾಗೂ ಶಾಂತತೆಯನ್ನು ಕಾಪಾಡಿಕೊಂಡು ಬರುವ ಹಿನ್ನೆಲೆಯಲ್ಲಿ ಮತ್ತು ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.

LEAVE A REPLY

Please enter your comment!
Please enter your name here