ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಹೈಕೋರ್ಟನ ತ್ರಿಸದಸ್ಯ ಪೀಠದಿಂದ ಐತಿಹಾಸಿಕ ತೀರ್ಪು ಪ್ರಕಟ

0
1426

ಬೆಂಗಳೂರು, ಮಾ. 15: ಕಳೆದ ಎರಡು ತಿಂಗಳಿAದ ಎದ್ದಿದ್ದ ಹಿಜಾಬ್ ಪ್ರಕರಣಕ್ಕೆ ಇತೀಶ್ರಿ ಹಾಡಿರುವ ನ್ಯಾಯಾಲಯ ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ನ ತ್ರೀಸದಸ್ಯ ಪೀಠದಿಂದ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಹಿಜಾಬ್‌ಗೆ ಅವಕಾಶ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟನ ತ್ರಿಸದಸ್ಯ ಪೀಠ ಸರಾಸಗಟವಾಗಿ ತೀರಸ್ಕರಿಸಿದೆ.
ಸರಕಾರ ಹೊರಡಿಸಿರುವ ಸಮವಸ್ತç ನೀತಿಯನ್ನು ಪಾಲಿಸುವಂತೆ ಹಾಗೂ ಸರಕಾರದ ಆದೇಶ ಸದುದ್ದೇಶದಿಂದ ಕೂಡಿದ್ದಾಗೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟು ತೀರ್ಪು ಪ್ರಕಟಿಸುವ ಮೂಲಕ ಸರಕಾರದ ಆದೇಶ ಕಾನೂನುಬದ್ಧವಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶವಿಲ್ಲ ಅಲ್ಲದೇ ಶಾಲೆಯೊಳಗೆ ಯಾವುದೇ ಕೇಸರಿ ಶಾಲುಗಳಿಗೂ ಕೂಡ ಅನುಮತಿ ಇರುವುದಿಲ್ಲ ಎಂಬುದಾಗಿ ನ್ಯಾಯಾಲಯದ ತೀರ್ಪಿನಲ್ಲಿ ಪ್ರಕಟಿಸಲಾಗಿದೆ.
ವಿದ್ಯಾರ್ಥಿಗಳು, ಶಾಲಾ ಕಾಲೇಜುಗಳಲ್ಲಿ ಸರಕಾರ ಹೊರಡಿಸಿದ ಸಮವಸ್ತç ನೀತಿ ಆದೇಶ ಪಾಲಿಸಬೇಕೆಂದು ಅಂಶ ಹೈಕೋರ್ಟ ಎತ್ತಿ ಹಿಡಿದಿದೆ.
ನ್ಯಾ. ರಿತುರಾಜ ಅವಸ್ತಿ ಒಳಗೊಂಡ ಇನ್ನಿಬ್ಬರ ನ್ಯಾಯಾಧೀಶರ ಪೂರ್ಣ ಪೀಠ ಒಂದೇ ವಾಕ್ಯದಲ್ಲಿ ತೀರ್ಪು ಪ್ರಕಟಿಸಿ, ವಿಚಾರಣೆ ಅಂತ್ಯಗೊಳಿಸಿದೆ.

LEAVE A REPLY

Please enter your comment!
Please enter your name here