ವಿದ್ಯುತ್ ತಂತಿ ತಗುಲಿ ತಾಯಿ-ಮಗ ಸಾವು

0
886

ಕಲಬುರಗಿ,ಮಾ.12-ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗ ಮೃತಪಟ್ಟ ದಾರುಣ ಘಟನೆ ನಗರದ ಯತಿಮಖಾನಾದಲ್ಲಿ ಇಂದು ಬೆಳಗಿನಜಾವ ನಡೆದಿದೆ.
ಶಾಹಿನಾಬೇಗಂ ರಶೀದ್ ಖಾನ್ (40) ಮತ್ತು ಅವರ ಮಗ ಸೋಹೆಲ್ ಖಾನ್ ರಶೀದ್ ಖಾನ್ (20) ಮೃತಪಟ್ಟ ದರ‍್ದೈವಿಗಳು.
ತಾಯಿ-ಮಗ ಪತ್ರಾಸು ಮನೆಯಲ್ಲಿ ವಾಸಿಸುತ್ತಿದ್ದರು. ಮಧ್ಯರಾತ್ರಿ 3-4 ಗಂಟೆಗೆ ಮಳೆ ಬಂದು ಮನೆ ಸೋರಲು ಆರಂಭಿಸಿದಾಗ ಸೋಹೆಲ್ ಖಾನ್ ಅದನ್ನು ಸರಿಪಡಿಸಲು ಹೋಗಿದ್ದಾನೆ. ಈ ವೇಳೆ ಆತನಿಗೆ ವಿದ್ಯುತ್ ತಂತಿ ತಗುಲಿ ಒದ್ದಾಡುತ್ತಿದ್ದಾಗ ತಾಯಿ ಶಾಹಿನಾಬೇಗಂ ರಕ್ಷಣೆಗೆ ಹೋಗಿದ್ದಾರೆ. ಅವರಿಗೂ ವಿದ್ಯುತ್ ತಗುಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಸ್ಟೇಷನ್ ಬಜಾರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here