10 ವರ್ಷಗಳಿಂದ ಪೋಲಿಸರಿಗೆ ತಲೆನೋವಾಗಿದ್ದ ಕುಖ್ಯಾತ ಮೂರು ಜನ ಮನೆಗಳ್ಳರ ಬಂಧನ

0
1143

ಕಲಬುರಗಿ, ಫೆ. 04: ಕಳೆದ 10 ವರ್ಷಗಳಿಂದ ಪೋಲಿಸರಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದ ಕುಖ್ಯಾತ ಮನೆಗಳ್ಳರನ್ನು ಕಲಬುರಗಿ ಜಿಲ್ಲಾ ಗ್ರಾಮೀಣ ಪೋಲಿಸರು ಇಂದು ಬೆಳಗಿನ ಜಾವ ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ದಿಶಾ ಪಂತ ಅವರು ಹೇಳಿದ್ದಾರೆ.
ಅವರು ಇಂದು ಪೋಲಿಸ್ ಭವನದಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕಳೆದ 10 ವರ್ಷಗಳಿಂದ ತಪ್ಪಿಸಿಕೊಳ್ಳುತ್ತ, ಯಾವುದೆ ಸಣ್ಣ ಮಾಹಿತಿಯೂ ಸಹ ಸಿಗದಂತೆ ಮನೆಗಳ್ಳತನ ಮಾಡಿ ಪೋಲಿಸರಿಗೆ ತಲೆನೋವಾಗಿದ್ದ ಮೂರು ಜನ ಆರೋಪಿಗಳನ್ನು ಒಂದು ತಂಡ ರಚಿಸಿ, ತಂತ್ರಜ್ಞಾನವನ್ನು ಬಳಸಿ ಬಂಧಿಸಲಾಗಿದೆ ಎಂದರು.
ಬAಧಿತ ಚಂದ್ರಕಾAತ ತಂದೆ ಬಸಣ್ಣ ಹಲಗೇನವರ 2018ರಲ್ಲಿ ಸುಲೇಪೇಟ್ ಪೋಲಿಸ ಠಾಣಾ ವ್ಯಾಪ್ತಿಯ ನಿಡಗುಂದಾ ನಡೆದ ಜೋಡಿ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿದ್ದಾನೆಂದು ವಿವರಿಸಿದರು.
ಬಂಧಿತ ಆರೋಪಿ ಚಂದ್ರಕಾAತ ಸುಮಾರು ವರ್ಷಗಳಿಂದ ತಲೆಮರೆಸಿಕೊಂಡು, ಒಂದೇ ಸ್ಥಳದಲ್ಲಿ ವಾಸವಾಗಿರದೇ ಹಳೆಯ ಹಲವಾರು ಪ್ರಕರಣಗಳಲ್ಲಿ ಬೇಕಾದ ಆರೋಪಿಯಾಗಿದ್ದು, ಈತನ ಬಂಧನದಿAದ ಮುಂದೆ ಜರುಗುವ ಅನೇಕ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಕಲಬುರಗಿ ಜಿಲ್ಲಾ ಪೋಲಿಸರು ಯಶಸ್ವಿಯಾಗಿ ದ್ದಾರೆಂದು ಶ್ಲಾಘಿಸಿದರು.
ಬಂಧಿತ ಎಲ್ಲ ಮೂರು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಅವರು ತಿಳಿಸಿದರು.
ಚಿಟಗುಪ್ಪಾ ಪೋಲಿಸ್ ಠಾಣೆಯ ಒಂದು ಪ್ರಕರಣ ಸಮೇತ ಒಟ್ಟು ಕಲಬುರಗಿ ಜಿಲ್ಲೆಯ ವಿವಿಧ 13 ಕಳ್ಳತನ ಪ್ರಕರಣಗಳು ದಾಖಲಾಗಿವೆ.
ನಗರದ ಹೊರವಲಯದಲ್ಲಿರುವ ಕುರಿತುಕೋಟ ಬ್ರಿಡ್ಸ್ ಹತ್ತಿರ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೋಲಿಸರು ಆರೋಪಿ ಗಳನ್ನು ಬಂಧಿಸಿದಲ್ಲದೆ ಅವರಿಂದ ಬೆಲೆ ಬಾಳುವ ಬಂಗಾರ ಆಭರಣಗಳು ಹಾಗೂ ನಗದು ಹಣವನ್ನು ಜಪ್ತಿ ಮಾಡಿದ್ದಾರೆ.
ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದ ಚಂದ್ರಕಾAತ ಅಲಿಯಾಸ್ ವಿಜ್ಯಾ ತಂದೆ ಬಸಣ್ಣ ಹಲಗೇಣವರ ಮತ್ತು ಆತನ ಇಬ್ಬರು ಸಹಚರರಾದ ಜಾಮಖೇಡ ಗ್ರಾಮದ ಪರಸ ತಂದೆ ಜಗನ್ ಕಾಳೆ ಮತ್ತು ಕಲಬುರಗಿ ನಗರದ ಚೋಟಾರೋಜದ ಖಾನಾಪೂರ ನಿವಾಸಿ ರಾಘವೇಂದ್ರ ತಂದೆ ಭೀಮಶ್ಯಾ ತೆಂಗಳಿ ಎಂಬುವವರೆ ಬಂಧಿತ ಆರೋಪಿಗಳಾಗಿದ್ದಾರೆ.
ಸುಮಾರು 20.40 ಲಕ್ಷ ರೂ. ಮೌಲ್ಯದ 407.88 ಗ್ರಾಂ. ಬಂಗಾರ ಒಂದು ದೇವರ ಮೂರ್ತಿ ಸುಮಾರು 7 ಕೆ.ಜಿಯ. ಅದರ ಮೌಲ್ಯ 5 ಲಕ್ಷ ರೂ. ಅಲ್ಲದೇ ನಗದಾಗಿ 50 ಸಾವಿರ ರೂ. ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಬAಧಿತರು ಮನೆಗಳ್ಳತನಕ್ಕೆ ಬಳಸುತ್ತಿದ್ದ ಕೆಲವು ಆಯುಧಗಳು, ಪಾನಾ, ಪಕ್ಕಡ, ಸ್ಕೂçಡ್ರೆöÊವರ್‌ಳು ಅಲ್ಲದೆ ಜಿಂಕೆಯ ಎರಡು ಕೋಡುಗಳು ಸಹ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನಕ್ಕೆ ಪ್ರೋಬೆಷನರಿ ಡಿಎಸ್‌ಪಿ ವೀರಯ್ಯ ಹಿರೇಮಠ ಅವರ ನೇತ್ರತ್ವದಲ್ಲಿ ಕಲಬುರಗಿ ಗ್ರಾಮೀಣ ವ್ರತ್ತ ಪಿಎಸ್‌ಐ ಶ್ರೀಮಂತ ಇಲ್ಲಾಳ, ಡಿಸಿಆರ್‌ಬಿ ಪಿಎಸ್‌ಐ ಪಿ. ಎಸ್. ವನಂಜಿಕರ, ಸಿಎನ್‌ಎಫ್ ಠಾಣಾ ವ್ಯಾಪ್ತಿಯ ಪಿಎಸ್‌ಐ ಚೇತನ, ಚಿತ್ತಾಪೂರ ಠಾಣೆಯ ಸಿಹೆಚ್‌ಸಿ ನಾಗೇಂದ್ರ, ಮಾಡಬೂಳ ಠಾಣೆಯ ಸಿಹೆಚ್‌ಸಿ ಜಗನ್ನಾಥ, ಮಳಖೇಡ ಠಾಣೆಯ ಸಿಹೆಚ್‌ಸಿ ಶಿವರಾಜ ಅಲ್ಲದೆ ವಿವಿಧ ಠಾಣೆಗಳ ಸಿಬ್ಬಂದಿಗಳಾದ ಬಲರಾಮ. ಓಂಕಾರ ರೆಡ್ಡಿ, ಅಂಬ್ರೇಶ ಬಿರಾದಾರ, ಬಸವರಾಜ ಅಲ್ಲದೇ ಗ್ರಾಮೀಣ ವೃತ್ತದ ಮಹಿಳಾ ಪೋಲಿಸ್ ಸಿಬ್ಬಂದಿಗಳು ಸಹ ತಂಡದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here