ಕಲಬುರಗಿ, ಫೆ. 04: ನಾಳೆ (ಫೆ. 5ರಂದು) ನಡೆಯಬೇಕಾಗಿದ್ದ ಕಲಬುರಗಿ ಮಹಾನಗರಪಾಲಿಕೆ ಚುನಾವಣೆ ನಡೆಸದಂತೆ ಸ್ಥಳೀಯ ಹೈಕೋರ್ಟ್ ಇಂದು ತನ್ನ ತೀರ್ಪನ್ನು ನೀಡಿದೆ.
ಬಿಜೆಪಿಯು ಐದು ಜನ ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ಸೇರಿಸಿದ್ದನ್ನು ಆಕ್ಷೇಪಿಸಿ ಕಾಂಗ್ರೆಸ್ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಸ್ಥಳೀಯ ಹೈಕೋರ್ಟ್ ಏಕ ಸದಸ್ಯ ಪೀಠವು ಚುನಾವಣೆಯನ್ನು ಮುಂದೂಡಿ ಆದೇಶ ನೀಡಿದೆ.
ಕಲಬುರಗಿ ಮಹಾನಗರಪಾಲಿಕೆಯಲ್ಲಿ ಈ ಹಿಂದೆ ನಿಗದಿಯಾಗಿದ್ದ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಮೀಸಲಾತಿಯಂತೆ ಒಂದು ತಿಂಗಳ ಅವಧಿಯಲ್ಲಿ ನಡೆಸುವಂತೆ ಅಲ್ಲದೇ 63 ಸದಸ್ಯರ ಬಲದ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಬೇಕೆಂದು ತಾಕೀತು ನೀಡಿದೆ.
ನಾಳೆ 5ರಂದು ಮೆಯರ್ ಉಪ ಮೇಯರ್ ಚುನಾವಣೆ ನಡೆಸಲು ಮಹಾನಗರಪಾಲಿಕೆಯ ಆಯುಕ್ತರು ಹಾಗೂ ಚುನಾವಣಾಧಿಕಾರಿಗಳು ಅಧಿಸೂಚನೆ ಜಾರಿಮಾಡಿದ್ದರು.
ಈ ಹಿಂದೆ ಮೀಸಲಾತಿಯನ್ನು ಬದಲಿಸಿ, ಮೆಯರ್ ಎಸ್ಸಿ ಪುರುಷ ಮತ್ತು ಉಪ ಮೇಯರ್ ಸಾಮಾನ್ಯ ಪುರುಷ ಎಂದು ಬದಲಿಸಿ ಇತ್ತಿಚೇಗಷ್ಟೆ ಅಧಿಸೂಚನೆ ಜಾರಿಮಾಡಲಾಗಿತ್ತು.
ಅಲ್ಲದೇ ಭಾರತೀಯ ಜನತಾ ಪಕ್ಷದ ಐದು ಜನ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು 68 ಸದಸ್ಯ ಬಲ ಮತದಾರರ ಪಟ್ಟಿಯನ್ನು ಹೈಕೋಟ್ ಏಕಸದಸ್ಯ ಪೀಠ ತಳ್ಳಿಹಾಕಿ, 63 ಜನ ಮತದಾರರ ಪಟ್ಟಿಯನ್ನು ಎತ್ತಿಹಿಡಿದಿದೆ.
ಮೇಯರ್ ಮತ್ತು ಉಪಮೇಯರ್ ಕನಸು ಕಾಣುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ ಈ ತೀರ್ಪಿನಿಂದಾಗಿ ಹಿನ್ನಡೆಯುಂ ಟಾಂದತಾಗಿದೆ.