ಬೆಂಗಳೂರು, ಜ. 21: ರಾಜ್ಯದಲ್ಲಿ ಕೊರೊನಾ ಮೂರನೇ ಅಲೇ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಾರಾಂತ್ಯದ ಕರ್ಫ್ಯೂ ಕಳೆದ ಎರಡು ವಾರಗಳಿಂದ ಹೇರಲಾಗಿತ್ತು. ಆದರೆ ಮೂರನೇ ಅಲೇಯಿಂದ ಜನಜೀವನಕ್ಕೆ ಯಾವುದೇ ಜೀವಕ್ಕೆ ಅಪಾಯವಿಲ್ಲ ಎಂಬ ಕಾರಣಕ್ಕೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ತೆಗೆಯಲಾಗಿದೆ.
ತಜ್ಞರ ಹಾಗೂ ಸಚಿವರ ಅಭಿಪ್ರಾಯದಂತೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯು ರದ್ದಾಗಿದೆ.
ಬೆಂಗಳೂರಿನ ಗ್ರಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದು, ಸಂಪುಟದ ಕೆಲ ಹಿರಿಯ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ತಜ್ಞರು ಭಾಗವಹಿಸಿದ್ದರು.
ರಾಜ್ಯದಲ್ಲಿ ಹೇರಲಾದ ವೀಕೆಂಡ್ ಕರ್ಫ್ಯೂಗೆ ಜನರು ಆಕ್ರೋಶ ವ್ಯಕ್ತವಾಗಿದ್ದು ವಿರೋಧ ಪಕ್ಷದ ಶಾಸಕರು, ಅಲ್ಲದೆ ಸ್ವಪಕ್ಷೀಯರಿಂದ ಅದರಲ್ಲೂ ಕೆಲವು ಸಚಿವರು, ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದರಿಂದಾಗಿ ಜನಜೀವನಕ್ಕೆ ತುಂಬಾ ಹಾನಿಯಾಗುತ್ತದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದುಮಾಡಲಾಗಿದ್ದು, ಆದರೆ ಅಧಿಕೃತವಾಗಿ ಆದೇಶ ಸರಕಾರ ಹೊರಡಿಸಬೇಕಾಗಿದೆ.
ವೀಕೆಂಡ್ ಕರ್ಫ್ಯೂ ಬಿಟ್ಟು ರಾಜ್ಯದಲ್ಲಿ ಉದ್ಯಮಿಗಳ ಹಾಗೂ ಹೋಟೆಲ್, ಬಾರ್ ಉದ್ಯಮಿಗಳಿಂದ ಆಕ್ರೋಶವಿದ್ದು, ಅದನ್ನು ಬಿಟ್ಟು ಶೇ. 50 : 50 ಅನುಪಾತದಲ್ಲಿ ಕಠಿಣ ನಿಯಮ ಜಾರಿಗೊಳಿಸಲು ತಜ್ಞರ ಅಭಿಪ್ರಾಯವಾಗಿದೆ.
ಜನವರಿ ತಿಂಗಳಾAತ್ಯದವರೆಗೆ ರಾತ್ರಿ ಕರ್ಫ್ಯು ಜಾರಿಯಿದೆ. ಮತ್ತೇ ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಮತ್ತೆ ಮತ್ತಷ್ಟು ಕಠಿಣ ನಿಯಮಗಳನ್ನು ಹಾ