ಕಲಬುರಗಿಯಲ್ಲಿ ಕೋವಿಡ್ ಸ್ಫೋಟ್ ಒಂದೇ ಸಾವಿರಕ್ಕೂ ಅಧಿಕ ಜನರಿಗೆ ಸೋಂಕು

0
879

ಕಲಬುರಗಿ, ಜ. 21: ಜಿಲ್ಲೆಯಲ್ಲಿ ಕೊರೊನಾ ಸ್ಫೋಟ್‌ವಾಗಿದ್ದು, ಇಂದು ಶುಕ್ರವಾರ ಒಂದೇ ದಿನ 1164 ಜನರಲ್ಲಿ ಹೊಸದಾಗಿ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಕಳೆದ 21 ದಿನಗಳ ಹಿಂದೆ 10-12 ಇದ್ದ ಪ್ರಕರಣಗಳು ದಿನವೊಂದಿಗೆ ನೂರರಿಂದ ಹಿಡದು ಈಗ ಅದರ ಸಂಖ್ಯೆ ಸಾವಿರಕ್ಕೆ ತಲುಪಿದ್ದು, ಸರಕಾರ ಕಳೆದ ಎರಡು ವಾರಗಳಿಂದ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂ ಕೂಡ ಈಗ ರದ್ದಾಗಿದ್ದು, ಒಂದು ಹಂತದಲ್ಲಿ ಒಳ್ಳಯ ನಿರ್ಧಾರ ಆದರೆ ಕೋವಿಡ್ ನಿಯಮಗಳನ್ನು ಪಾಲಿಸದೇ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಅಷ್ಟೆ ಅಲ್ಲ ವ್ಯಾಪಾರಸ್ಥರು ಕೂಡ 100ಕ್ಕೆ 90% ಪ್ರತಿಶತ ಮಾಸ್ಕ ಇಲ್ಲದೇ ವ್ಯಾಪಾರದಲ್ಲಿ ನಿರತರಾಗಿದ್ದು ನೋಡಿದರೆ ಜಿಲ್ಲೆಯಲ್ಲಿ ಜನೆವರಿ ಅಂತ್ಯದ ವರೆಗೆ ಕೊರೊನಾ ಮಹಾ ಸ್ಪೋಟ್ ಆಗುವ ಎಲ್ಲ ಸೂಚನೆಗಳು ಗೋಚರಿಸುತ್ತಿವೆ.
ಜಿಲ್ಲಾಡಳಿತವಾಗಲೀ, ಪೋಲಿಸರಾಗಲಿ, ಮಹಾನಗರಪಾಲಿಕೆಯ ಆರೋಗ್ಯ ಅಧಿಕಾರಿಗಳಾಗಲೀ, ಕೊರೊನಾ ಸೋಂಕಿನ ಬಗ್ಗೆ ವ್ಯಾಪಾ ರಸ್ಥರಿಗೆ ಸೂಚಿಸುವದಲ್ಲದೇ ಮಾಸ್ಕ ಹಾದದವರ ವಿರುದ್ಧ ಕ್ರಮ ಕೈಗೊಳ್ಳದೇ ಬರೀ ಕಛೇರಿಯಲ್ಲಿಯೇ ಕೊರೊನಾ ನಿಯಂತ್ರಣದ ಬಗ್ಗೆ ಪೋಸ್ಟರ್‌ಗಳನ್ನು ಹಚ್ಚಿ, ಕುಂತಲ್ಲೇ ಕಾರಬಾರು ಮಾಡುತ್ತಿರುವುದು ನೋಡಿದರೆ ಜಿಲ್ಲೆಯ ಜನತೆಯ ಗತಿ ದೇವರೇ ಗತಿ ಎಂಬAತಾಗಿದೆ.
ಮೊದಲನೇ ಮತ್ತು ಎರಡನೇ ಅಲೇಗಿಂತ ಈ ಮೂರನೇ ಅಲೇಯಿಂದ ಜನರ ಜೀವಕ್ಕೆ ಹಾನಿಯಿಲ್ಲದ್ದರೂ ಕೂಡ ಕೊರೊನಾ ನಿಯಮಗಳನ್ನು ಪಾಲನೆ ಮಾಡದಿದ್ದರೆ ಜನರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳು ಮಾತ್ರ ಇವೆ.
ಕೊರೊನಾ ಜನೆವರಿಯಿಂದ ಕೊನೆಯವಾರದಿಂದ ಫೆಬ್ರುವರಿ ಎರಡನೇ ವಾರದವರೆಗೆ ಅದರ ಪೀಕ್ ಸಮಯವಾಗಿದ್ದು, ಇಂತಹದರಲ್ಲಿ ರಾಜ್ಯ ದಲ್ಲಿ ಅಧಿಕಾರದಲ್ಲಿರುವ ಸರಕಾರಕ್ಕೆ ಕಣ್ಣು, ಕಿವಿ ಇಲ್ಲದಂತಾಗಿದ್ದು, ಕಳೆದ ವಾರ ಕಾಂಗ್ರೆಸ್ ಮೇಕೆದಾಟು ಯೋಜನೆಯ ಹಿನ್ನೆಲೆಯಲ್ಲಿ ದೊಡ್ಡ ಪಾದಯಾತ್ರೆಯೇ ಮಾಡಿ, ಜನರ ಜೀವದೊಂದಿಗೆ ಆಟವಾಡಿದರೂ ಕೂಡ ಸರಕಾರ ಎಚ್ಚೆತ್ತದೆ ಕೊನೆಗೆ ನ್ಯಾಯಾಲಯ ಛೀಮಾರಿ ಹಾಕಿದಾಗ, ಪಾದಯಾತ್ರೆ ನಿಲ್ಲುವಂತಾಯಿತು.
ಗುರುವಾರ ಒಂದೇ ಕಲಬುರಗಿಯಲ್ಲಿ ಕೊರೊನಾದಿಂದ 5 ಜನರು ಸಾವನ್ನಪ್ಪಿದ್ದು ನೋಡಿದರೆ ಜಿಲ್ಲೆಯಲ್ಲಿ ಕೊರೊನಾ ತೀವ್ರತೆ ಎಷ್ಟದೆ ಎಂಬುದು ಗೊತ್ತಾಗುತ್ತದೆ.

LEAVE A REPLY

Please enter your comment!
Please enter your name here