ಕಲಬುರಗಿ/ಕಾಳಗಿ ಜ. 11: ವಿಸ್ಮಯ ನಾಡು ಎಂದೆ ಪ್ರಸಿದ್ಧಿ ಹೊಂದಿರುವ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಸುರ‍್ಣಗೀರಿ ಸುಗೂರು (ಕೆ) ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲಿ ಜನವರಿ 13 ಮತ್ತು 14ರಂದು ನಡೆಯಲಿರುವ ವೈಕುಂಠ ಏಕಾದಶಿ ಸಂಭ್ರದ ಮನೆ ಮಾಡಿದೆ.
ಅಂದು ವೈಕುಂಠ ದ್ವಾರದ ಮೂಲಕ ವೆಂಕಟರಮಣ ದೇವರ ರ‍್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ಬಂದು ಕೋವಿಡ್ ಮರ‍್ಗಸೂಚಿಯಂತೆ ಬರಲು ದೇವಸ್ಥಾನದ ಮುಖ್ಯಸ್ಥ ಪೂಜ್ಯ ಸನ್ನಧದಾಸ್ ಮಹಾರಾಜ ಹೇಳಿದ್ದಾರೆ.
ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇವಸ್ಥಾನ ಧರ‍್ಮಿಕ ಮಹತ್ವವನ್ನು ಪಡೆದಿದ್ದು, ತಿರುಮಲ ತಿರುಪತಿ ಹಾತಿರಾಮಜೀ ಮಠದ ರ‍್ಜುನದಾಸ ಮಹಾರಾಜ ಅವರ ನೇತೃತ್ವದಲ್ಲಿ ಕೃಷ್ಣದಾಸ ಮಹಾರಾಜ, ಕೇಶವದಾಸ ಮಹಾರಾಜ ಇವರ ಸಹಯೋಗದಲ್ಲಿ ಸಕಲ ಸಿದ್ದತೆಗಳೊಡನೆ ದೇವಾಲಯ ಸನ್ನದ್ಧಗೊಂಡಿದೆ.