ಕಲಬುರಗಿ,ಜ.10: ಆಯತಪ್ಪಿ ಬಾವಿಗೆ ಬಿದ್ದು ಮಕ್ಕಳಿಬ್ಬರು ದುಮರಣಕ್ಕೆ ಒಳಗಾಗಿದ್ದು, ವಿಕಲ ಚೇತನ ತಂದೆಯನ್ನು ಜನರು ರಕ್ಷಿಸಿದ ಘಟನೆ ಕಮಲಾಪುರ ತಾಲ್ಲೂಕಿನ ಗೊಬ್ಬರುವಾಡಿ ಗ್ರಾಮದ ಅನಂತಲಿAಗೇಶ್ವರ್ ದೇವಾಲಯದ ಬಳಿ ವರದಿ ಯಾಗಿದೆ.
ಮೃತ ಮಕ್ಕಳನ್ನು ಪ್ರಣತಿ ತಂದೆ ಶರಣಪ್ಪ ರಟಕಲ್ (05) ಹಾಗೂ ಶಿವಕುಮಾರ್ ತಂದೆ ಶರನಪ್ಪ ರಟಕಲ್ (03) ಎಂದು ಗುರುತಿಸಲಾಗಿದೆ. ವಿಕಲಚೇತನ ತಂದೆ ಶರಣಪ್ಪ ರಟಕಲ್ ಜನರಿಂ ದಾಗಿ ಜೀವ ಉಳಿಸಿಕೊಂಡಿದ್ದಾನೆ.
ತನ್ನ ಕಣ್ಮುಂದೆಯೇ ಮಕ್ಕಳಿಬ್ಬರು ಬಾವಿಯಲ್ಲಿ ಆಯತಪ್ಪಿ ಬಿದ್ದಾಗ ಅದನ್ನು ನೋಡಿದ ತಂದೆಯು ಆ ಮಕ್ಕಳನ್ನು ಉಳಿಸಿಕೊಳ್ಳಲು ತಾನೂ ಸಹ ನೀರಿಗೆ ಜಿಗಿದ. ಆದಾಗ್ಯೂ, ಮಕ್ಕಳನ್ನು ಬದು ಕಿಸದೇ ಆತನೂ ಸಹ ನೀರಿನಲ್ಲಿ ಮುಳುಗುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದರು ಎಂದು ಪೋಲಿ ಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೋಲಿ ಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದು ವರೆದಿದೆ.
ವ್ಯಾಪಾರದಲ್ಲಿ ನಷ್ಟವುಂಟಾಗಿದ್ದರಿAದ ಜೀವ ನದಲ್ಲಿ ಜಿಗುಪ್ಸೆ ಹೊಂದಿ ಶರಣಪ್ಪನು ತನ್ನ ಎರಡು ಮಕ್ಕಳನ್ನು ಬಾವಿಗೆ ತಳ್ಳಿ, ತಾನೂ ಬಿದ್ದು ಆತ್ಮಹತ್ಯೆಗೆ ಯತ್ನಿಸಿದನು ಎಂಬ ವದಂತಿಗಳು ಗ್ರಾಮದಲ್ಲಿ ಹರಡಿವೆ. ಶರಣಪ್ಪ ಬಾವಿಗೆ ಎರಡು ಮಕ್ಕಳನ್ನು ತಳ್ಳಿ, ತಾನೂ ಸಹ ಬಾವಿಗೆ ಜಿಗಿಯುವುದನ್ನು ನೋಡಿದ ಶರಣಪ್ಪನ ಅಣ್ಣನ ಪುತ್ರ ತಕ್ಷಣವೇ ಗ್ರಾಮದಲ್ಲಿ ಸುದ್ದಿ ಮುಟ್ಟಿಸಿ ಅವರನ್ನು ಉಳಿಸಿ ಕೊಳ್ಳಲು ಯತ್ನಿಸಿದ್ದು ವಿಫಲವಾಯಿತು ಎನ್ನಲಾ ಗಿದೆ.