ಶಾಲಾ-ಕಾಲೇಜು, ಹಾಸ್ಟಲ್‌ಗಳಿಗೆ ನಿರ್ಭಂಧ ಇಲ್ಲ 3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧ :ಡಿಸಿ

0
1825

ಕಲಬುರಗಿ, ಜ. 07: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ ಮತ್ತು ಈಗಾಗಲೇ ಎಂಸಿಎAಆರ್ ಘೋಷಿಸಿರುವಂತೆ ಜಿಲ್ಲೆಯಲ್ಲಿ 3ನೇ ಅಲೇ ಎದುರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಜಿಲ್ಲಾಡಳಿತ ಸಂಪೂರ್ಣವಾಗಿ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ವಿವಿ ಜೊತ್ಸಾö್ನ ಅವರು ಹೇಳಿದ್ದಾರೆ.
ಅವರು ಶುಕ್ರವಾರ ಮಧ್ಯಾಹ್ನ ತಮ್ಮ ಕಛೇರಿಯಲ್ಲಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡುತ್ತ, ಈಗಾಗಲೇ ಜಿಲ್ಲಾಡಳಿತ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸ್ಥಾಪನೆಯಾಗಿರುವ ಆಕ್ಸಿಜನ್ ಘಟಕಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಸಿದ್ದಗೊಳಿಸಲಾಗಿದೆ. ಅಲ್ಲದೇ ಕಳೆದ 2ನೇ ಅಲೆಯಲ್ಲಿ ಸೇವೆಗೆ ಬಳಿಸಿಕೊಂಡಿದ್ದ 47 ಖಾಸಗಿ ಆಸ್ಪತ್ರೆಗಳನ್ನು ಸಹ ಸಂಪರ್ಕಿಸಿ, ಸೋಕಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಸೂಚಿಸಲಾಗಿದೆ ಎಂದರು.
ವೀಕೆAಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳು, ವಸತಿಗೃಹಗಳನ್ನು ಯಾವುದೇ ರೀತಿಯಲ್ಲಿ ಮುಚ್ಚಲು ಜಿಲ್ಲಾಡಳಿತ ಸೂಚಿಸಿಲ್ಲ ಒಂದು ಮುಂಬರುವ ದಿನಗಳಲ್ಲಿ ಸೋಂಕಿನ ಪ್ರಮಾಣ ಶೇ. 5%ಕ್ಕಿಂತ ಹೆಚ್ಚಾದರೆ ಆಗ ಕ್ರಮ ಕೈಗೊಳ್ಳಲಾಗುವುದು ಎಂದರು.
3ನೇ ಅಲೇಯಲ್ಲಿ ಮಕ್ಕಳಿಗೆ ಬಹಳಷ್ಟು ಸೋಂಕು ಹರಡುತ್ತದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಈಗಾಗಲೇ ಶೇ.27ರಷ್ಟು 2 ವರ್ಷದಿಂದ 15 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಜಿಲ್ಲೆಯಲ್ಲಿ ಒಟ್ಟು 1 ಲಕ್ಷ 65 ಸಾವಿರ ಮಕ್ಕಳಲ್ಲಿ ಈವರೆಗೆ 43 ಸಾವಿರ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನಗೆ ಉತ್ತರಿಸಿದರು.
ಜಿಲ್ಲೆಗೆ ಹೊಂದಿಕೊAಡುರುವ ಮಹಾರಾಷ್ಟç ಮತ್ತು ತೆಲಂಗಾಣ ಗಡಿಗಳಲ್ಲಿ 12 ಚೆಕ್‌ಪೋಸ್ಟಗಳನ್ನು ಸ್ಥಾಪಿಸಲಾಗಿದೆ ಇದರಲ್ಲಿ ಮಹಾರಾಷ್ಟçಕ್ಕೆ ಹೊಂದಿಕೊAಡುರವ ಗಡಿಯಲ್ಲಿ 5 ಮತ್ತು ತೇಲಂಗಾಣದ ಗಡಿಯ 7 ಚೆಕ್‌ಪೋಸ್ಟಗಳನ್ನು ನಿರ್ಮಿಸಲಾಗಿದೆ, ಕಡ್ಡಾಯವಾಗಿ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬರುವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಕೈಗೊಳ್ಳಲಾಗುವುದು ಎಂದರು.
ಕಳೆದ 2 ತಿಂಗಳಲ್ಲಿ ಜಿಲ್ಲೆಯಲ್ಲಿ 1 ರಿಂದ 4 ಹೊಸ ಪ್ರಕರಣಗಳು ಮಾತ್ರ ದಾಖಲಾಗುತ್ತಿದ್ದವು, ಆದರೆ ಕಳೆದ ಒಂದು ವಾರದಿಂದ ಅದರ ಪ್ರಮಾಣ ಹೆಚ್ಚಾಗಿ ಈವರೆಗೆ 100 ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ವಿವಿಧ ಆಸ್ಪತ್ರೆಗಳಲ್ಲಿ 15 ಸಕ್ರೀಯ ಪ್ರಕರಣಗಳಿದ್ದು, ಎಲ್ಲವು ಸಾಮಾನ್ಯ ಪ್ರಕರಣಗಳಾಗಿವೆ ಎಂದರು,
ಶಾಪ್‌ಗಳು, ಮಾಲ್‌ಗಳು, ಮಲ್ಟಿಫೆಕ್ಸ್ಗಳು, ಸಿನೇಮಾ ಹಾಲ್‌ಗಳ ಮಾಲಿಕರು ಅಲ್ಲದೇ ವ್ಯವಸ್ಥಾಪಕರು, ಸಿಬ್ಬಂದಿಗಳು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು ಮತ್ತು ಅಲ್ಲದೇ ಅದರ ಪ್ರಮಾಣ ಪತ್ರ ಅಧಿಕಾರಿಗಳಿಗೆ ತೋರಿಸಬೇಕು ಎಲ್ಲದಿದ್ದರೆ ಅಂತವರ ವ್ಯಾಪಾರವನ್ನು ಸ್ಥಗೀತಗೊಳಿಸಲಾವುದು ಮುಂದು ಅವರು ಅದರ ಪ್ರಮಾಣ ಪತ್ರ ನೀಡಿದರೆ ಮತ್ತೆ ಅನುಮತಿಸಲಾಗುವುದು ಎಂದು ವಿವರಿಸಿದರು.
ಕೆಕೆಆರ್‌ಟಸಿ ಬಸ್ ಸಂಚಾರ ಎಂದಿನAತೆ ಇರದೇ ಸೂಚಿಸಿದ ಮಾರ್ಗಗಳಲ್ಲಿ ಶೇ. 50%ರಷ್ಟು ಸಂಚಾರಕ್ಕೆ ಅನುಮತಿಸಲಾಗಿದೆ.
ಮದ್ಯದಂಗಡಿಗಳು ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಎರಡು ದಿನಗಳ ಕಾಲ ಬಂದ್ ಆದೇಶಿಸಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿAದ ಸೋಮವಾರ ಬೆಳಿಗಿನ 5 ಗಂಟೆಯವರೆಗೆ ವ್ಯಾಪಾರವನ್ನು ನಿಷೇಧಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ದಿಲೇಶ ಸಾಸಿ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here