ನಾಳೆಯಿಂದ ಜಿಲ್ಲೆಯಾದ್ಯಂತ ವೀಕೆಂಡ್ ಕರ್ಫ್ಯೂ ಮದ್ಯದಂಗಡಿಗಳು ಸಂಪೂರ್ಣ ಬಂದ್

0
1328

ಕಲಬುರಗಿ, ಜ. 06: ರಾಜ್ಯದಲ್ಲಿ ಕೊರೊನಾ ರೂಪಾಂತರ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ನಾಳೆಯಿಂದ ದಿನಾಂಕ 7.1.22ರಿಂದ ಮತ್ತೇ ರಾಜ್ಯದಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಜನವರಿ 7 ರಿಂದ ರಾತ್ರಿ 10 ಗಂಟೆಯಿAದ ಸೋಮವಾರ ಮುಂಜಾನೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಿದ್ದು, ಅಲ್ಲದೇ ಉಳಿದ ದಿನಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿದ್ದು, ಅದು ಜನೆವರಿ 19ರ ವರೆಗೆ ಅಸ್ತಿತ್ವದಲ್ಲಿರುತ್ತದೆ.
ನೈಟ್ ಕರ್ಫ್ಯೂ ಅವಧಿಯಲ್ಲಿ ಕೆಲವು ಅವಶ್ಯಕ ವಸ್ತುಗಳಿಗೆ ರಿಯಾಯಿತಿ ನೀಡಲಾಗಿದ್ದು ಹೋಟೆಲ್‌ಗಳಲ್ಲಿ ಕೇವಲ ಪಾರ್ಸಲ್‌ಗೆ ಅವಕಾಶ ಅಲ್ಲದೇ ಬಾರ್ ಮತ್ತು ವೈನ್ಸ್ ಸ್ಟೋರ್‌ಗಳೂ ಕೂಡ ವಾರಾಂತ್ಯದ ಎರಡು ದಿನಗಳು ಸಂಪೂರ್ಣ ಬಂದ್ ಆಗಲಿವೆ.

night curfew

ಶುಕ್ರವಾರ ರಾತ್ರಿ 10 ಗಂಟೆಯಿAದ ಸೋಮವಾರ ಬೆಳಗಿನ 5ಗಂಟೆಯವರೆಗೆ ಬಾರ್‌ಗಳು ಮತ್ತು ವೈನ್ಸ್ಗಳು ಬಂದ್ ಆಗಲಿವೆ.
ಅವಶ್ಯಕ ಸೇವೆಗಳಾದ ಮೆಡಿಕಲ್ ಸ್ಪೊರ‍್ಸ್, ಸೇವೆಗಳಾದ ಮೆಡಿಕಲ್ ಡಿಸ್ಟಿçÃಬ್ಯೂರ‍್ಸ್, ಆಕ್ಸಿಜನ್ ಘಟಕಗಳು, ಅಂಬ್ಯುಲೇನ್ಸ್ ಸೇರಿದಂತೆ ಹಲವಾರು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.
ದಿನಸಿ ಅಂಗಡಿಗಳು ಹೋಮ್‌ಡೆಲಿವರಿಗೆ ಅವಕಾಶ ನೀಡಲಾಗಿದೆ. ಕಾಯಿಪಲ್ಲೆ ಮತ್ತು ಹಣ್ಣು-ಹಂಪಲಗಳನ್ನು ಒಂದೆ ಕಡೆ ಕುಳಿತ ಮಾರಾಟಕ್ಕೆ ಅವಕಾಶ ಕಲ್ಪಿಸದೇ ತಳ್ಳುವ ಬಂಡಿಗಳನ್ನು ಮಾರಾಟಕ್ಕೆ ಅನುಮತಿ ನೀಡಲಾಗಿದೆ.

LEAVE A REPLY

Please enter your comment!
Please enter your name here