ಚಿತ್ತಾಪುರದಲ್ಲಿ ಚಾಕು ಇರಿದು ಯುವಕನ ಭೀಕರ ಹತ್ಯೆ

0
1627

ಕಲಬುರಗಿ, ಡಿ. 12: ಸಣ್ಣ ಕಾರಣಕ್ಕಾಗಿ ನಡೆದ ಜಗಳದಲ್ಲಿ ಯುವಕನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾದ ಘಟನೆ ಚಿತ್ತಾಪೂರ ತಾಲೂಕಿನ ಆಶ್ರಯ ಕಾಲೋನಿಯಲ್ಲಿ ನಡೆದಿದೆ.

ಚಿತ್ತಾಪೂರ ಆಶ್ರಯ ಕಾಲೋನಿಯ ನಿವಾಸಿಯಾದ 26 ವರ್ಷದ ಮಹಮ್ಮದ ರಶೀದ್ ಎಂಬಾAತನೆ ಕೊಲೆಯಾದ ಯುವಕನಾಗಿದ್ದಾನೆ.
ಕ್ಷಲಕ ಕಾರಣಕ್ಕಾಗಿ ಲಂಗ್ಡಾ ಸಲೀಂ ಮತ್ತು ರಶೀದ್ ನಡುವೆ ಜಗಳ ನಡೆದು, ಈ ವೇಳೆ ಲಂಗ್ಡಾ ಸಲೀಂ ಎಂಬುವವನು ಮಹ್ಮಮದ್ ರಶೀದಗೆ ಚಾಕು ಇರಿದು ಕೊಲೆ ಮಾಡಿದ್ದಾನೆಂದು ಹೇಳಲಾಗಿದೆ.

ಕೊಲೆ ಆರೋಪದ ಮೇಲೆ ಲಂಗ್ಡಾ ಸಲೀಂನನ್ನು ಚಿತ್ತಾಪೂರ ಪೋಲಿಸರು ಈಗಾಗಲೇ ಬಂಧಿಸಿದ್ದಾರೆ.
ಈ ಕುರಿತಂತೆ ಚಿತ್ತಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here