ಕಲಬುರಗಿಯಲ್ಲಿ ಶಂಕಿತ ಓಮಿಕ್ರಾನ್ ಲಕ್ಷಣಗಳುಳ್ಳ ವ್ಯಕ್ತಿ ಪತ್ತೆ

0
1459
omicron virus

ಕಲಬುರಗಿ, ಡಿ. 07: ಕಲಬುರಗಿಯಲ್ಲಿ ಓಮಿಕ್ರಾನ್ ಸೋಂಕು ಶಂಕಿತ ವ್ಯಕ್ತಿಯೋರ್ವ ಪತ್ತೆಯಾಗಿದ್ದಾನೆ.
ನವೆಂಬರ್ 25ರಂದು ಯುಎಇಯಿಂದ ಮಧ್ಯಾಹ್ನ ಹೈದ್ರಾಬಾದ ಅಂತರಾಷ್ಟಿçÃಯ ಏರ್‌ಪೋರ್ಟಗೆ ಆಗಮಿಸಿದ್ದು, ಖಾಸಗಿ ವಾಹನದಲ್ಲಿ ಹೊರಟು ರಸ್ತೆ ಮಾರ್ಗವಾಗಿ ರಾತ್ರಿ ಕಲಬುರಗಿ ನಗರಕ್ಕೆ ಆಗಮಿಸಿದ್ದ ಬಗ್ಗೆ ಟ್ರಾವೇಲ್ ಹಿಸ್ಟರಿ ಆಗಿದೆ.
ಸ್ನೇಹಿತರ ಜೊತೆ ಕಾರಿನಲ್ಲಿ ಆಗಮಿಸಿದ 32 ವರ್ಷದ ವ್ಯಕ್ತಿ ನಗರದ ಹೊಟೆಲ್‌ನಲ್ಲಿ ಉಪಹಾರ ಸೇವನೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಸೋಂಕಿನ ಅಂದಾಜು ಹಿನ್ನೆಲೆಯಲ್ಲಿ ಆ ವ್ಯಕ್ತಿ ನೇರವಾಗಿ ತಮ್ಮ ನಿವಾಸಕ್ಕೆ ಬಂದು ಕ್ವಾರಂಟೈನ್ ಆಗಿದ್ದಾನೆ.
ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡ ಸಂದರ್ಭದಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತ ವ್ಯಕ್ತಿಯನ್ನು ಜೀಮ್ಸ್ ಆಸ್ಪತ್ರೆಯ ಪ್ರತ್ಯೇಕ ವಾರ್ಡನಲ್ಲಿ ದಾಖಲು ಮಾಡಿ ಆತನ ಗಂಟಲು ಧ್ರವ್ಯದ ಮಾದರಿಯನ್ನು ಬೆಂಗಳೂರಿನ ನಿಮಾನ್ಸ್ಗೆ ರವಾನೆ ಮಾಡಲಾಗಿದೆ.
ಎರಡ್ಮೂರು ದಿನದಲ್ಲಿ ವ್ಯಕ್ತಿಯ ಕೊವಿಡ್ ವರದಿ ಜಿಲ್ಲಾಡಳಿತದ ಕೈಸೇರುವ ಸಾಧ್ಯತೆ ಇದೆ. ವ್ಯಕ್ತಿಯ ಜೊತೆ ಪ್ರಾಥಮಿಕ ಮತ್ತು ದ್ವೀತಿಯ ಸಂಬAದ ಹೊಂದಿದ್ದ ವ್ಯಕ್ತಿಗಳ ಹುಡುಕಾಟಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.
ವ್ಯಕ್ತಿಯ ಪ್ರಾಥಮಿಕ ಸಂಬAಧ ಹೊಂದಿದವರ ಪತ್ತೆಗಾಗಿ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಹೈದ್ರಾಬಾದ ಏರ್‌ಪೋರ್ಟನಿಂದ ಕಲಬುರಗಿ ನಗರಕ್ಕೆ ಖಾಸಗಿಯಾಗಿ ಕಾರಿನಲ್ಲಿ ಬಂದವರ ಬಗ್ಗೆ ತನಿಖೆ ಮುಂದುವರೆದಿದೆ
ನಗರದಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ನಾಗರಿಕರು ಮತ್ತಷ್ಟು ಭಯಭೀತಗೊಂಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರ ವ್ಯಕ್ತಿಗಳಲ್ಲಿ ಓಮಿಕ್ರಾನ್ ಪತ್ತೇಯಾಗಿದ್ದು, ಅಲ್ಲದೇ ದೇಶದಲ್ಲಿ ಈವರೆಗೆ 23 ಜನರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ.

LEAVE A REPLY

Please enter your comment!
Please enter your name here