ಸಿರಿತನದೊಂದಿಗೆ ಗುಣವಂತರೂ ಆಗಿರುವ ಬಿ.ಜಿ.ಪಾಟೀಲ್‌ರ ಗೆಲುವು ನಿಶ್ಚಿತ:ತೇಲ್ಕೂರ

0
743

ಕಲಬುರಗಿ, ಡಿ. 06: ಕಲಬುರಗಿ ಯಾದಗಿರಿ ಜಿಲ್ಲೆಗಳ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿರುವ ನಮ್ಮ ಪಕ್ಷದ ಹಿರಿಯರಾದ ಬಿ.ಜಿ. ಪಾಟೀಲ್‌ರ ಬಗ್ಗೆ ಕಾಂಗ್ರೆಸ್ ಕೆಲ ನಾಯಕರು ಸೋಲಿನ ಹತಾಶೆಯಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ಬಿಜಿ ಪಾಟೀಲರು ಹಣವಂತರು… ಎಂದು ಹೇಳುತ್ತಿದ್ದು, ಅವರು ಮನೆತನದಿಂದ ಶ್ರೀಮಂತರಾಗಿದ್ದಾರೆ ಅಲ್ಲದೇ ಅವರು ಹೃದಯವಂತರೂ ಹಾಗೂ ಗುಣವಂತರೂ ಆಗಿದ್ದಾರೆ ಎಂದು ಕಾಂಗ್ರೆಸ್ ನಾಯಕರುಗಳು ಆರೋಪಕ್ಕೆ ಬಿಜೆಪಿ ವಕ್ತಾರ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಲೂರ್ ಅವರು ತಿರುಗೇಟು ನೀಡಿ ಅವರು ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕೆಂದು ಖಾರವಾಗಿ ನುಡಿದರು.
ಅವರು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಪದೇ ಪದೇ ಕಾಂಗೈ ನಾಯಕರುಗಳು, ನಮ್ಮ ವಿಧಾನ ಪರಿಷತ್ ಸದಸ್ಯರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕಗಳು ಆಗಿಲ್ಲ ಎಂದು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಅವರ ಅವಧಿಯಲ್ಲಿ 12 ಕೋಟಿ ಅನುದಾನದಲ್ಲಿ ಈಗಾಗಲೇ 10 ಕೋಟಿ ರೂ.ಗಳು ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಿದ್ದು, ಇದರ ಮಾಹಿತಿ ಬೇಕಿದ್ದರೆ ನೇರವಾಗಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪಡೆಯಬಹುದಾಗಿದೆ. ಇದ್ದನ್ನು ಬಿಟ್ಟು ಕ್ಷÄಲಕ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಟುವಾಗಿ ಟೀಕಿಸಿದರು.
ಅಲ್ಲದೇ ಕಲಬುರಗಿ ಯಾದಗಿರಿ ಸ್ಥಳೀಯ ಸಂಸ್ಥೆಗಳಿAದ ನಡೆಯುವ ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಒಟ್ಟು 7000 ಸದಸ್ಯರು ಮತಚಲಾಯಸುವ ಹಕ್ಕು ಹೊಂದಿದ್ದು, ಇದರಲ್ಲಿ 4000 ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿನ ಬಿಜೆಪಿ ಬೆಂಬಲಿತ ಸದಸ್ಯರಿದ್ದು, ನಮ್ಮ ಪಕ್ಷದಿಂದ 3 ಜನ ಎಂಪಿಗಳು, 12 ಶಾಸಕರುಗಳು, 3 ಜನ ಪರಿಷತ್ ಸದಸ್ಯರು ಹೊಂದಿದ್ದು, ಎಲ್ಲಡೆ ಉತ್ತಮ ವಾತಾವರಣವಿದ್ದು, ಈ ಬಾರಿ ನೂರಕ್ಕೆ ನೂರು ಮತ್ತೋಮೆ ಬಿಜಿ ಪಾಟೀಲ್ರು ಪರಿಷತ್ ಪ್ರವೇಶಿಸುವುದು ಖಚಿತವಾಗಿದೆ ಎಂದು ಭವಿಷ್ಯ ನುಡಿದರು.
ಮತ್ತೊಬ್ಬರಿಗೆ ಟೋಪಿ ಹಾಕಿಲ್ಲ:
ಬಿಜಿ ಪಾಟೀಲರು ಮನೆತನದಿಂದ ಶ್ರೀಮಂತರು, ರಾಜಕಾರಣಕ್ಕೆ ಬಂದು ಶ್ರೀಮಂತರಾಗಿಲ್ಲ, ಅವರು ಅವರ ಉದ್ದಿಮೆಗಳಿಂದ ಹಣ ಗಳಿಸಿದ್ದಾರೆ ಅಲ್ಲದೇ ಅವರು ಯಾರಿಗೂ ಟೋಪಿ ಹಾಕಿ ಮುಂದಿ ಬಂದಿಲ್ಲ ಎಂದು ತಿಳಿಸಿದ ರಾಜಕುಮಾರ ಪಾಟೀಲರು, ಪಾಟೀಲರ ಬಗ್ಗೆ ಎಲ್ಲರಿಗೂ ಗೊತ್ತು ಅವರು ಏನೆಂದು, ಅವರು ಯಾನಾಗುಂದಿಯ ಮಾತೇ ಮಾಣಿಕೇಶ್ವರಿಯ ಪರಮಭಕ್ತರು, ಯಾನಾಗುಂದಿಯಲ್ಲಿ ಈಗಲೂ ಹಲವಾರು ವರ್ಷಗಳಿಂದ ದಿನನಿತ್ಯ ನಿರಂತರ ದಾಸೋಹ ಸೇವೆಯನ್ನು ಬಿಜಿ ಪಾಟೀಲರು ಮಾಡುತ್ತಿದ್ದಾರೆ ಎಂದು ಎಂದರು.
15 ಸ್ಥಾನಗಳಲ್ಲಿ ಬಿಜೆಪಿ ಗೆಲುವು :
ರಾಜ್ಯದ ಒಟ್ಟು 25 ಸ್ಥಾನಗಳಿಗೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಇದರಲ್ಲಿ 15 ಸ್ಥಾನಗಳಲ್ಲಿ ನಮ್ಮ ಪಕ್ಷದ ಗೆಲುವು ನಿಶ್ಚಿತ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಯೇ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ತೇಲ್ಕೂರ್ ತಿಳಿಸಿದರು.
12-13 ನೇ ಹಣಕಾಸು ಆಯೋಗವು 3500 ಕೋಟಿ ರೂ. ಅನುದಾನ ನೀಡುತ್ತಿತ್ತು, ನಮ್ಮ ಸರಕಾರ ಬಂದ ಮೇಲೆ 14-15ನೇ ಹಣಕಾಸು ಆಯೋಗವು ಈ ಮೊತ್ತವನ್ನು 9500ಕ್ಕೆ ಏರಿಕೆ ಮಾಡುವ ಮೂಲಕ ಎರಡು ವರೆ ಪಟ್ಟು ಪಂಚಾಯತ್‌ಗಳಿಗೆ ನೀಡುವ ಅನುದಾನ ಏರಿಕೆ ಮಾಡಿದ್ದು, ಪಕ್ಷದ ಸಾಧನೆಯೆ ಸರಿ ಎಂದರು.
ಪಾಟೀಲರ ಮೇಲೆ ಯಾವ ಅಪರಾಧ ಪ್ರಕರಣಗಳಿಲ್ಲ:
ಬಿ.ಜಿ. ಪಾಟೀಲರು ಗುಣವಂತರಲ್ಲ ಎಂದು ಪರೋಕ್ಷವಾಗಿ ಹೇಳುತ್ತಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡಿದ ತೇಲ್ಕೂರ್, ಅವರ ಮೇಲೆ ಯಾವುದಾದರೂ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪ್ರಶ್ನಿಸಿದ ಅವರು ಇದು ಕೀಳರಮೆ ಕಾರಣದಿಂದ ಹಣವಂತರು, ಗುಣವಂತರು ಎಂದು ಜರಿಯುತ್ತಿರುವ ಕಾಂಗೈ ನಾಯಕರು ಈ ಸತ್ಯವನ್ನು ತಿಳಿದುಕೊಂಡು ಮಾತಾಡಲಿ ಎಂದರು ನುಡಿದರು.
ಸಂಸತ್ ಸದಸ್ಯ ಡಾ. ಉಮೇಶ ಜಾಧವ ಅವರು ಕೂಡ ಬಿಜಿ ಪಾಟೀಲರನ್ನು ಕುರಿತು ಮಾತನಾಡಿ, ಈ ಬಾರಿ ಮತ್ತೋಮ್ಮೆ ಬಿ.ಜಿ. ಪಾಟೀಲರು ವಿಧಾನ ಪರಿಷತ್ ಪ್ರವೇಶಿಸುತ್ತಾರೆ, ಅವರು ಈ ಬಾರಿ ಚುನಾವಣೆಗೆ ನಿಲ್ಲುವ ಬಗ್ಗೆ ಆಸಕ್ತಿ ವಹಿಸಿರಲಿಲ್ಲ, ನಮ್ಮೆಲ್ಲರ, ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ನಿಂತಿದ್ದಾರೆ ಅವರ ಆಯ್ಕೆ ನೂರಕ್ಕೆ ನೂರು ಸತ್ಯ ಎಂದು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಸೇರಿದಂತೆ ಇನ್ನು ಹಲವಾರು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here