ಓದೋಕೆ ಆಗುತ್ತಿಲ್ಲ ಎಂಬ ಕಾರಣದಿಂದ ಯುವಕ ಆತ್ಮಹತ್ಯೆ

0
1499

ಕಲಬುರಗಿ, ಡಿ. 05: ಓದೋಕೆ ಆಗುತ್ತಿಲ್ಲ ಎಂಬ ಕಾರಣದಿಂದ ಮರಣ ಪತ್ರ ಬರೆದಿಟ್ಟು ಮಂಜುನಾಥ ಮಾರುತಿ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ನಾಗನಹಳ್ಳಿ ಪೋಲಿಸ್ ತರಬೇತಿ ಕೇಂದ್ರದ ವಸತಿ ಗೃಹದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಟಿ ಗ್ರಾಮದ ಪೋಲಿಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ಈ ಯುವಕನನ್ನು ಆತನ ಪೋಷಕರು ತಂದು ಬಿಟ್ಟಿದ್ದರು ಎನ್ನಲಾಗಿದೆ.
ನನ್ನಿಂದ ಓದೋಕೆ ಆಗುತ್ತಿಲ್ಲ.. ಅಪ್ಪ, ಅಮ್ಮ ಕ್ಷಮೀಸಿ ಬಿಡಿ’ ಎಂದು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಕೂಡ ಬರೆದಿಟ್ಟಿದ್ದಾನೆ ಎಂದು ಹೇಳಲಾಗಿದೆ.
ತರಬೇತಿಗಾಗಿ ನಾಗನಹಳ್ಳಿ ತರಬೇತಿ ಕೇಂದ್ರದ ಅಧಿಕಾರಿಯೋರ್ವರ ಮನೆಯಲ್ಲಿದ್ದ ಈ ಯುವಕ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.
ಪಾಲಕರು, ತಮ್ಮ ಮಕ್ಕಳು ಚೆನ್ನಾಗಿ ಓದಲಿ ಎಂದು ದೂರದ ಜಿಲ್ಲೆಗಳಲ್ಲಿ ಓದಲು ಬಿಟ್ಟು, ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂಬ ಉದ್ದೇಶ ಹೊಂದಿದ್ದರೆ, ಕೆಲವು ಮಕ್ಕಳು ಸರಿಯಾಗಿ ಓದದೇ, ಅಪ್ಪ ಅಮ್ಮನ ದುಡ್ಡಿನಲ್ಲಿ ಆಯ್ಯಾಷಿ ಮಾಡುತ್ತ ಕಾಲ ಕಳೆದು, ಪಾಲಕರ ನಿರಾಸಗೆ ಕಾರಣವಾಗಿರುವ ಹಲವಾರು ಘಟನೆಗಳು ಬೆಳಕಿಗೆ ಬಂದಿದ್ದು, ಇನ್ನು ಕೆಲ ಮಕ್ಕಳು ಚೆನ್ನಾಗಿ ಓದಿ, ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದು ಪಾಲಕರಿಗೆ ಒಳ್ಳೆ ಹೆಸರು ತಂದ ಉದಾಹರಣೆ ಕೂಡ ಸಾಕಷ್ಟಿವೆ. ಆದರೆ ತನಗೆ ಓದಲು ಆಗುತ್ತಿಲ್ಲ ಎಂಬ ಕಾರಣ ಇದೇ ಮೊದಲ ಎಂದು ಹೇಳಲಾಗುತಿದೆ.
ಈ ಕುರಿತಂತೆ ವಿಶ್ವವಿದ್ಯಾಲಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ನಿಜವಾಗಿಯೂ ಓದಲು ಆಗುತ್ತಿಲ್ಲ ಎಂಬ ಕಾರಣ ಹೇಳಿದ್ದು ಸತ್ಯನೋ ಅಥವಾ ಇನ್ನಾವುದೋ ಉದ್ದೇಶದಿಂದ ಆತ್ಮ ಹತ್ಯೆ ಮಾಡಿಕೊಂಡಿದ್ದಾನೋ ಎಂಬ ಬಗ್ಗೆ ಸಂಶಯ ಉಂಟು ಮಾಡಿದೆ.

LEAVE A REPLY

Please enter your comment!
Please enter your name here