ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸದ ಖರ್ಗೆ ಅವರ ಗುರುಗಳು ಕೇಳಲಿ ಉತ್ತರಿಸುವೆ…..

0
802

ಕಲಬುರಗಿ, ನ. 21: ಲೂಟಿ ಗ್ಯಾಂಗ್ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರ ಹೇಳಿಕೆ ಬಗ್ಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ನಗರದಲ್ಲಿ ರವಿವಾರ ಪತ್ರಕರ್ತರ ಪ್ರಶ್ನಗೆ ಈ ಬಗ್ಗೆ ಉತ್ತರಿಸಿದ ಅವರು ಅಂಥವರ ಬಗ್ಗೆ ನಾನು ಮಾತನಾಡಲಾರೆ, ಅವರ ಗುರುಗಳು ನನಗೆ ಪ್ರಶ್ನೆ ಕೇಳಲಿ ಉತ್ತಿಸುತ್ತೇನೆ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ಪ್ರಶ್ನೆ ಕೇಳಿದರೆ ಉತ್ತರಿಸುವೆ ಎಂದರು.

ಇoಥವರ ಮಾತುಗಳಿಗೆ ನಮ್ಮ ಪಕ್ಷದ ಸ್ಥಳೀಯ ನಾಯಕರು ಉತ್ತರ ಕೋಡುತ್ತಾರೆ, ನಮ್ಮ ಪಕ್ಷದಲ್ಲಿ ಶಿಸ್ತು ಇದೆ, ಇಂತಹ ಮಾತುಗಳಿಗೆ ಬಿಜೆಪಿಯವರ ಸಂಸೃತಿ ಎತ್ತಿತೋರಿಸುತ್ತದೆ ಎಂದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಗ್ರಾಮ ನಿರ್ಮಾಣ ವಿಚಾರದ ಬಗ್ಗೆ ವಿವರಣೆ ನೀಡಿದ ಖರ್ಗೆ, ಅವರು ಗ್ರಾಮ ನಿರ್ಮಾಣ ಮಾಡುತ್ತಿದ್ದಾರೆ.. ಇವರು ಅದನ್ನು ನೋಡುತ್ತಾ ಕುಳಿತಿದ್ದಾರೆ ಎಂದು ಕೇಂದ್ರದ ಸರಕಾರದ ವಿರುದ್ಧ ಹರಿಹಾಯ್ದರು.
ಚೀನಾ ನಡೆಯ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಈ ಮೊದಲೇ ಎಚ್ಚರಿಸಿದ್ದರು, ಆದರೆ ಇರ‍್ಯಾರು ಅದರ ಬಗ್ಗೆ ಗಮನ ಕೊಡದೇ ನಿರ್ಲಕ್ಷಿಸಿದ್ದರು ಎಂದರು.
ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಬಗ್ಗೆ ಮಾತನಾಡಿದ ಅವರು ಯುಪಿಯಲ್ಲಿ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಪ್ರಿಯಾಂಕ ಗಾಂಧಿ ಈಗಾಗಲೇ ಹೇಳಿದ್ದಾರೆ. ಅಲ್ಲದೇ ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯ ಮಟ್ಟದ ಹೊಂದಾಣಿಕೆ ಬಿಟ್ರೆ ಸ್ವತಂತ್ರವಾಗಿ ಸ್ಪರ್ಧಿಸಲಾಗುವುದು ಎಂದು ಹೇಳಿದರು.
ಏಕಾಏಕಿಯಾಗಿ ಕೇಂದ್ರ ಸರಕಾರ ಜಾರಿಗೋಳಿಸಿದ್ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆದದ್ದು ಮೋದಿ ಅವರ ರೈತರ ಮೇಲಿನ ಕಾಳಜಿಯಂದಲ್ಲ, ಮುಂಬರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಪರಿಣಾಮ ಬೀರಬಹುದು ಎನ್ನುವ ದೃಷ್ಟಿಯಿಂದ ಮಾತ್ರ ಈ ನಿರ್ಧಾರವಾಗಿದೆ ಎಂದು ಖರ್ಗೆ ನುಡಿದರು.
ಕೃಷಿ ಕಾಯಿದೆಗಳ ಬಗ್ಗೆ ಅವರು ಈಗಲೂ ಕಾನೂನು ಸರಿ ಇದೆ ಎನ್ನುವ ಮನೋಭಾವ ಮೋದಿಯವರದ್ದಾಗಿದೆ, ಎಂದ ಅವರು ಕಳೆದ ಒಂದು ವರ್ಷದಿಂದ ರೈತರು ಮುಷ್ಕರ ನಡೆಸುತ್ತಿದ್ದರೂ ಕೂಡ ಕಾಯ್ದೆ ಯಾವುದೇ ಕಾರಣಕ್ಕೂ ಹಿಂಪಡೆಯುವ ಪ್ರಶ್ನೆಯೆ ಇಲ್ಲ ಎನ್ನುತ್ತಿದ್ದ ಮೋದಿ ಅವರು ಏಕಾ ಏಕಿ ಯಾಕೆ ಕಾಯ್ದೆಯನ್ನು ಸಂಪುಟದಲ್ಲಿ ಚರ್ಚಿಸದೇ ಹಿಂತೆದುಕೊAಡರು, ಇದನ್ನು ನೋಡಿದರೆ ಅವರು ಸಡನ್ ಆಗಿ ತಮ್ಮ ಮನಸ್ಸಿಗೆ ಬಂದAತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದ ಸಾಬೀತಾದಂತಾಗಿದೆ.
ಈ ನಿರ್ಣಯವನ್ನು ಉಪಚುನಾವಣೆಯಲ್ಲಿ ಬಿಜೆಪಿಯ ಸೋಲಿನಿಂದ ಕಂಗೆಟ್ಟು ಮೋದಿ ಅವರು ಕೈಗೊಂಡಿದ್ದಾರೆ ಎಂದರು.

LEAVE A REPLY

Please enter your comment!
Please enter your name here