ಕಲಬುರಗಿ, ನ.17: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಹಾಗೂ ಸರಕಾರದ ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಅಂಕಿಅAಶ ಇಲಾಖೆಯ ಪ್ರಭಾರಿ ಜಂಟಿ ಕಾರ್ಯದರ್ಶಿಯಾಗಿದ್ದ ವೆಂಕಟೇಶಕುಮಾರ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಬೆಳಗಾವಿ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಜಾರಿಮಾಡಲಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಸರಕಾರ ಆಡಳಿತಾತ್ಮಕ ಜಂಟಿ ಕಾರ್ಯದರ್ಶಿ ಸಂಜಯ ಬಿ. ಎಸ್. ಅವರು ಆದೇಶ ಜಾರಿ ಮಾಡಿದ್ದಾರೆ.
ಕೆಕೆಆರ್‌ಡಿಬಿಗೆ ಕಾರ್ಯದರ್ಶಿಯಾಗಿರುವುದಕ್ಕಿಂತ ಮುಂಚೆ ಅವರು ರಾಯಚೂರು ಜಿಲ್ಲಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದರು, ಅಲ್ಲದೇ ಕಲಬುರಗಿಯಲ್ಲಿಯೂ ಈ ಹಿಂದೆ ಜಿಲ್ಲಾಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಿಸಿದ್ದರು.