ರೌಡಿ ಶೀಟರ್ ಅಭಿಷೇಕ ಹತ್ಯೆ 6 ಜನ ಆರೋಪಿಗಳ ಬಂಧನ

0
2107

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನ. 4ರಂದು ನಡೆದಿದ್ದ ರೌಡಿ ಶೀಟರ್ ಆಗಿದ್ದ ಪೇದೆ ಪುತ್ರ ಅಭಿಷೇಕ ನಂದೂರ (26) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಆರು ಜನರನ್ನು ಬಂಧಿಸಿದ್ದಾರೆ.
ಕೊಲೆಯಾಗಿರುವ ಅಭಿಷೇಕ ಅಲಿಯಾಸ್ ಅಭಿ ಸಿಆರ್ ಪಿ ಸಹ ಪೇದೆ ಮಗನಾಗಿದ್ದ. ಅಲ್ಲದೆ ಈಗ ಬಂದಿರಲ್ಲಿ ಸಹ ಮುರ್ತುಜಾ ಸಹ ಪೇದೆ ಮಗ ಆಗಿದ್ದಾನೆ.

ಪೊಲೀಸ್ ಕಾಲೊನಿ ನಿವಾಸಿ ಮುರ್ತುಜಾ ಮೊಹಮ್ಮದ್ ಅಲಿ ರೋತೆ (25), ರಾಮನಗರ ನಿವಾಸಿ ಸಾಗರ ಮಹಾಂತೇಶ ಭೈರಾಮಡಗಿ (22), ಸಿಐಬಿ ಕಾಲೊನಿ ನಿವಾಸಿ ಆಕಾಶ ಮಹಾದೇವ ಜಾಧವ (22), ಗೋದುತಾಯಿ ನಗರ ಸಾಗನೂರನ ಶುಭಂ ಅಶೋಕ ದೊಡ್ಡಮನಿ (23), ಅಮರ ಪ್ಯಾಲೇಸ್ ಬಳಿಯ ಅಶೋಕ ರಾಜಕುಮಾರ ಮೂಲಭಾರತಿ (21) ಹಾಗೂ ಶಾಂತಿ ನಗರ ನಿವಾಸಿ ಕೌಶಿಕ್ ಸೋಮಶೇಖರ ಹಳೆಮನಿ (21) ಎಂಬುವರು ಬಂಧಿತರು.

ಕಮಿಷನರ್ ಡಾ.ರವಿಕುಮಾರ್, ಡಿಸಿಪಿ ಅಡ್ಡೂರು ಶ್ರೀನಿವಾಸುಲು ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ದಕ್ಷಿಣ ಉಪವಿಭಾಗದ ಎಸಿಪಿ ಅಂಶಕುಮಾರ್‌ ನೇತೃತ್ವದಲ್ಲಿ ಅಶೋಕ ನಗರ ಠಾಣೆ ಇನ್‌ಸ್ಪೆಕ್ಟರ್ ಪಂಡಿತ ಸಗರ, ರೌಡಿ ನಿಗ್ರಹ ದಳದ ಬಸವರಾಜ ಮಂಜಾಳಕರ ಹಾಗೂ ಸಿಇಎನ್ ಠಾಣೆಯ ಪಿಎಸ್‌ಐ ವಾಹಿದ್ ಕೊತ್ವಾಲ್ ಅವರ ತಂಡವು ಕಾರ್ಯಾಚರಣೆ ನಡೆಸಿ ಹಂತಕರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ನಾಲ್ಕು ಲಾಂಗ್ ಮಚ್ಚು, ಎರಡು ಬೈಕ್ ಹಾಗೂ ಒಂದು ಇನ್ನೋವಾ ಕಾರನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.

ಆರೋಪಿಗಳ ವಿರುದ್ಧ ಕೊಲೆ, ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.

ಸುಮಾರು ಒಂದೂವರೆ ವರ್ಷದ ಹಿಂದೆ ಅಭಿಷೇಕ ತಂಡ ಕಟ್ಟಿಕೊಂಡು ಸಾಗರ ಭೈರಾಮಡಗಿ ಮೇಲೆ ಹಲ್ಲೆ ನಡೆಸಿದ್ದ.ಅದರ ಪ್ರತೀಕಾರಕ್ಕಾಗಿ ಆರು ಜನರು ಸೇರಿಕೊಂಡು ಕೊಲೆ ಮಾಡಿದ್ದರೆ ಎಂದು ಅಭಿಷೇಕ ತಂದೆ ಚಂದ್ರಕಾಂತ ನಂದೂರು ದೂರು ನೀಡಿದ್ದರು.
ಬಂದಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಅಶೋಕ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

LEAVE A REPLY

Please enter your comment!
Please enter your name here