ಕಲಬುರಗಿ, ನ. 05:ನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯೋರ್ವಳ ಶವ ಪತ್ತೇಯಾಗಿದೆ.
ಕಲಬುರಗಿ ನಗರದ ರಾಜಾಪೂರ ಬಾಡಾವಣೆಯಲ್ಲಿ ರಮಾಬಾಯಿ ಎಂಬ 23 ವರ್ಷದ ವಿವಾಹಿತ ಮಹಿಳೆಯ ಶವ ಪತ್ತೆಯಾಗಿದೆ.
ರಮಾಬಾಯಿ ಎಂಬ ಮಹಿಳೆಯು ಮೂರು ತಿಂಗಳ ಹಿಂದೆ ರಾಹುಲ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು.
ಪ್ರೀತಿಸಿ ಮನೆಯಿಂದ ರಮಾಬಾಯಿಯನ್ನು ಓಡಿಸಿಕೊಂಡು ಹೋಗಿ ರಾಹುಲ್ ಮದುವೆಯಾಗಿದ್ದು, ಅತ್ತೆ ಮನೆಯವರಿಂದ ದಿನನಿತ್ಯ ಕಿರುಕುಳ, ಜಾತಿ ನಿಂದನೆ, ಕಿರುಕುಳ ಕೊಡುತ್ತಿದ್ದರೆಂದು ಆಕೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ನಿನ್ನೆ ಸಂಜೆ ಮನೆಯಲ್ಲಿ ಶವವಾಗಿ ಪತ್ತೆಯಾದ ರಮಾಬಾಯಿ ಗಂಡನ ಮನೆಯವರೆ ಕೊಲೆ ಮಾಡಿರುವದಾಗಿಯೂ ಕುಟುಂಬಸ್ಥರು ಆರೋಪಿಸಿ ವಿಶ್ವವಿದ್ಯಾಲಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.