ಬೆಳ್ಳಂಬೆಳ್ಳಿಗ್ಗೆ ನಗರದ ಬಸ್ ನಿಲ್ದಾಣದಲ್ಲಿ ಅಟ್ಟಾಡಿಸಿಕೊಂಡು ಯುವಕನ ಭೀಕರ ಕೊಲೆ

0
2562

ಕಲಬುರಗಿ, ನ. 04: ಬೆಳ್ಳಂಬೆಳಿಗ್ಗೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಯುವಕನೋರ್ವನನ್ನು ಮಚ್ಚಿನಿಂದ ಹೊಡೆದು ಭೀಕರವಾಗಿವಾಗಿ ಹತ್ಯೆ ಮಾಡಲಾಗಿದೆ.

ವಿದ್ಯಾನಗರ ನಿವಾಸಿ ಅಭೀಷೇಕ ತಂದೆ ಚಂದ್ರಕಾAತ ನಂದೂರ (26) ಎಂಬ ಯುವಕನೆ ಹತ್ಯೇಗೀಡಾಗಿದ್ದಾನೆ.
ಈ ಕೊಲೆಗೆ ಹಳೆ ವೈಷ್ಯವೇ ಕಾರಣವೆಂದು ಹೇಳಲಾಗಿದ್ದು, ಕೆಲ ತಿಂಗಳ ಹಿಂದೆಯಷ್ಟೆ ನಗರದ ಕೆಳಸೇತುವೆ ಬಳಿ ಸಾಗರ ಎನ್ನುವನ ಹತ್ಯೆಯಲ್ಲಿ ಇಂದು ಕೊಲೆಯಾದ ಯುವಕನು ಭಾಗಿಯಾಗಿದ್ದನೆಂದು ಹೇಳಲಾಗಿದೆ.
ಕೊಲೆಯಾದ ಯುವಕನ ತಂದೆ ಪೋಲಿಸ್ ಇಲಾಖೆಯ ಸೈಬರ್ ಅಪರಾಧ ವಿಭಾಗದಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂದು ಕೊಲೆಯಾದ ಮತ್ತು ಕೊಲೆ ಮಾಡಿದ ಯುವಕರಿಬ್ಬರು ನಗರದ ಸೇಂಟ್ ಮೇರಿ ಶಾಲೆಯ ವಿದ್ಯಾರ್ಥಿಗಳಾಗಿದ್ದರು.
ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಬಸ್ ನಿಲ್ದಾಣ ಸಮೀಪದ ಮೆಡಿಕಲ್ ಸ್ಟೋರ್ ಬಳಿ ಅಭೀಷೇಕ ನಂದೂರನನ್ನು ಕಂಡ ಸುಮಾರು ನಾಲ್ಕು ಜನರು ಕೂಡ ಅವನನ್ನು ಬೆನ್ನುಹತ್ತಿದ್ದಾಗ ಆತ ತಪ್ಪಿಸಿಕೊಂಡು ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರವೇಶಿಸಿದಾಗ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕುಳಿತ ಪ್ರಯಾಣಿಕರೆದುರೆ ಅಭಿಷೇಕನನ್ನು ಭೀಕರವಾಗಿ ಮಾರಕಾಸ್ತçಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ಅಡ್ಡೂರ ಶ್ರೀನಿವಾಸಲು, ಅಶೋಕ ನಗರ ಪಿಐ ಪಂಡಿತ ಸಗರ ಅವರು ಭೇಟಿ ನೀಡಿ ಪರಿಶೀಲಿಸಿದರು.

ಈ ಕೊಲೆಯಲ್ಲಿ ಭಾಗಿಯಾದವರ ಪತ್ತೆ ಹಚ್ಚುವ ಕಾರ್ಯ ಮುಂದುವರೆದ್ದು, ಈಗ ಬಗ್ಗೆ ಅಶೋಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here