ವಿಜಯಪುರ, ನ. 02: ಸಿಂದಗಿ ವಿಧಾನಸಭೆಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭಾರೀ ಜಯ ಸಾಧಿಸಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಸುಮಾರು ಕಾಂಗೈ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿAದ ಮುನ್ನಡೆ ಪಡೆದಿದ್ದು, ಬಹುತೇಕ ಭೂಸನೂರ ಅವರು ಜಯಗಳಿಸಿದ್ದಾರೆ.
ಆದರೆ ಘೋಷಣೆ ಅಧಿಕೃತವಾಗಿ ಆಗಬೇಕಿದೆ.
ಸಿಂದಗಿಯಲ್ಲಿ ಜೆಡಿಎಸ್ ಅಭ್ಯರ್ಥಿ 3 ಸಾವಿರ ಮತಗಳಿಸಿದ್ದು, ಈ ಕ್ಷೇತ್ರದಲ್ಲಿ ಎಂ.ಸಿ. ಮನಗೂಳಿ ನಿಧನದಿಂದಾಗಿ ಈ ಉಪಚು ನಾವಣೆ ನಡೆದಿತ್ತು.
ಜೆಡಿಎಸ್ ಸ್ಥಾನವನ್ನು ಕಳೆದುಕೊಂಡಿದ್ದು, ಇಲ್ಲಿ ಬಿಜೆಪಿ ತನ್ನ ಖಾತೆಗೆ ಇನ್ನೊಂದು ಸ್ಥಾನ ಏರಿಸಿಕೊಂಡಿದೆ.
ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ನಡೆದ ಪ್ರಥಮ ಉಪ ಚುನಾವಣೆಯಾಗಿದೆ. ಹಾನಗಲ್‌ನಲ್ಲಿ ಕಾಂಗೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ ಸುಮಾರು 4 ಸಾವಿರಕ್ಕೂ ಅಧಿಕ ಮತಗಳಿಂದ ಹಿನ್ನಡೆ ಸಾಧಿಸಿದ್ದರು, ಇಲ್ಲಿ ಇನ್ನು 10 ಸುತ್ತುಗಳ ಮತ ಏಣಿಕೆ ಬಾಕಿಯಿದ್ದು, ಫಲಿತಾಂಶ ಏರುಪೇರಾಗುವ ಸಾಧ್ಯತೆಯಿದೆ.
ಯಾರೇ ಗೆದ್ದರೂ ಕೂಡ ಅಲ್ಪ ಮತಗಳಿಂದ ಎಂದು ಹೇಳಲಾಗುತ್ತಿದ್ದು, ಹಾನಗಲ್‌ನಲ್ಲಿ ಶಾಸಕರಾಗಿದ್ದ ಸಿ.ಎಸ್. ಉದಾಸಿ ಅವರ ನಿಧನದಿಂದಾಗಿ ಈ ಸ್ಥಾನ ತೆರವಾಗಿತ್ತು.
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಬಿಜೆಪಿ ಮುಖಭಂಗ ಅನುಭವಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕರುಗಳು ಹೇಳಿಕೆಗಳು ನೀಡುತ್ತಿದ್ದು, ಆದರೆ ಮುಖ್ಯಮಂತ್ರಿಗಳು ಮಾತ್ರ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ, ಕಾದು ನೋಡಿಮ ಎಂಬ ಹೇಳಿಕೆ ನೀಡಿದ್ದಾರೆ.