ರಾಜ್ಯೋತ್ಸವ ಕೊಡುಗೆಯಾಗಿ ಸಪ್ನ ಬುಕ್‌ಹೌಸ್‌ನಿಂದ ಕನ್ನಡ ಪುಸ್ತಕಗಳಿಗೆ ವಿಶೇಷ ರಿಯಾಯಿತಿ

0
600
What do Bengaluru Kannadigas read these days? - Citizen Matters, Bengaluru

ಕಲಬುರಗಿ, ಅ. ೩೧: ಸಪ್ನ ಬುಕ್ ಹೌಸ್ ಕನ್ನಡ ನಾಡಿನ ಜನಪ್ರಿಯ ಪುಸ್ತಕ ಭಂಡಾರ. ಇದು ಪುಸ್ತಕಗಳಿಗಷ್ಟೇ ಸೀಮಿತವಾಗದೇ, ಶಿಕ್ಷಣಕ್ಕೆ ಸಂಬAದಪಟ್ಟ ಪೂರಕ ಸಾಮಗ್ರಿಗಳಿಗೂ ಹೆಸರುವಾಸಿ. ಪ್ರತಿ ಬಾರಿಯೂ ಈ ಪುಸ್ತಕ ಭಂಡಾರ ರಾಜ್ಯೋತ್ಸವದ ತಿಂಗಳಿನಲ್ಲಿ ಕನ್ನಡದ ಓದುಗರಿಗಾಗಿ ತನ್ನೆಲ್ಲಾ ಶಾಖೆಗಳಲ್ಲೂ ಕೆಲವು ಜನಪ್ರಿಯ ಯೋಜನೆಗಳನ್ನು ನೀಡುತ್ತಾ ಬಂದಿದೆ.
ರಿಯಾಯಿತಿ- ನವೆಂಬರ್ ತಿಂಗಳಿನಲ್ಲಿ ಕನ್ನಡ ಪುಸ್ತಕಗಳಿಗೆ ನಮ್ಮ ಎಲ್ಲಾ ಶಾಖೆಗಳಲ್ಲೂ ವಿಶೇಷವಾಗಿ ಶೇ.೧೦%ರಿಂದ ೨೦%ರಷ್ಟು ರಿಯಾಯಿತಿಯನ್ನು ಕನ್ನಡ ಪುಸ್ತಕ ಪ್ರಿಯರಿಗೆ ಸಪ್ನ ಬುಕ್ ಹೌಸ್ ನೀಡುತ್ತಿದೆ.
ಸಪ್ನ ಸದಸ್ಯರ ಕಾರ್ಡ್- ನವೆಂಬರ್ ತಿಂಗಳಿನಲ್ಲಿ ಕೊಳ್ಳುವ ಪ್ರತಿ ರೂ. ೨೦೦ ಮೌಲ್ಯದ ನಿವ್ವಳ ಬೆಲೆಗೆ ಈ ಕಾರ್ಡನ್ನು ಗ್ರಾಹಕರಿಗೆ ಕೊಡಲಾಗುತ್ತದೆ. ಇದರಿಂದ ಒಂದು ವರ್ಷದ ಅವಧಿಗೆ ಪುಸ್ತಕ ಪ್ರೇಮಿಗಳು ಕನ್ನಡ ಪುಸ್ತಕಳ ಮೇಲೆ ಯಾವುದೇ ಶಾಖೆಯಲ್ಲಾಗಲೀ ಶೇ.೧೦% ರಷ್ಟು ರಿಯಾಯಿತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಓದುಗರ ಆಯ್ಕೆ ಸಮೃದ್ಧ ಬೆಳೆ- ಈ ವಿಶೇಷ ಪುಸ್ತಕ ಪ್ರದರ್ಶನ ವಿಭಾಗದಲ್ಲಿ ಕೆಲವು ಜನಪ್ರಿಯ ಕೃತಿಗಳಿಗೆ ಶೇ.೧೫%ರಷ್ಟು ರಿಯಾಯಿತಿಯನ್ನು ನವೆಂಬರ್ ತಿಂಗಳಿನಾದ್ಯAತ ನಮ್ಮ ಎಲ್ಲಾ ಶಾಖೆಗಳಲ್ಲೂ ನೀಡಲಾಗುತ್ತದೆ.
ಸಪ್ನ ಪ್ರಕಟಣೆಗಳಿಗೆ ಶೇ. ೨೦% ರಿಯಾಯಿತಿ- ನವೆಂಬರ್ ತಿಂಗಳಿನಾದ್ಯAತ ಸಪ್ನ ಪ್ರಕಟಿಸಿರುವ ತನ್ನ ಎಲ್ಲಾ ಕನ್ನಡ ಪ್ರಕಟಣೆಗಳಿಗೆ ಶೇ.೨೦% ವಿಶೇಷ ರಿಯಾಯಿತಿಯನ್ನು ಎಲ್ಲಾ ಶಾಖೆಗಳಲ್ಲೂ ನೀಡಲಾಗುವುದು.
ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮಗಳು- ನವೆಂಬರ್ ತಿಂಗಳಿನ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಸಪ್ನ ಬುಕ್ ಹೌಸ್ ಕಲಬುರಗಿ ಶಾಖೆಯಲ್ಲಿ ಗ್ರಾಹಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಸಪ್ನ ವ್ಯವಸ್ಥಾಪಕರಾದ ಮಹಾಂತೇಶ ಮಠ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here