ಕಲ್ಯಾಣ ಕರ್ನಾಟಕ ಭಾಗಕ್ಕೆ 10 ರಾಜ್ಯೋತ್ಸವ ಪ್ರಶಸ್ತಿ ಈ ಸಾಲಿನ ಒಟ್ಟು 66 ಸಾಧಕರಿಗೆ ಪ್ರಶಸ್ತಿ ಪ್ರಕಟ

0
693
mahadevappa kadecur

ಕಲಬುರಗಿ, ಅ. 31: ಕಲಬುರಗಿ ಜಿಲ್ಲೆಗೆ ಈ ಬಾರಿ ಎರಡು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದು ಕಲ್ಯಾಣ ಕರ್ನಾಟಕ ಭಾಗಕ್ಕೆ ಒಟ್ಟು 10 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಕಟಿಸಲಾಗಿದೆ.
ಸಂಘ, ಸಂಸ್ಥೆಗಳಿಗೆ ಕೊಡಮಾಡುವ ಪ್ರಶಸ್ತಿಯನ್ನು ಸೇಡಂನ ಶ್ರೀ ಕೊತ್ತಲ್ಲ ಬಸವೇಶ್ವರ ಶಿಕ್ಷಣ ಸಂಸ್ಥೆಗೆ ನೀಡಿದರೆ ಇನ್ನೊಂದು ಹೈದ್ರಾಬಾದ ಕರ್ನಾಟಕ ಏಕೀಕರಣ ಹೋರಾಟಗರ ಪ್ರಶಸ್ತಿಯನ್ನು ಭಾರತೀಯ ಜನತಾ ಪಕ್ಷದ ಹಿರಿಯ ಮುತ್ಸದಿಯಾದ ಮಹಾದೇವಪ್ಪ ಕಡೆಚೂರ ಅವರಿಗೆ ನೀಡಲಾಗಿದೆ.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷ ನೀಡಲಾಗುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ವಿವಿಧ ಕ್ವೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 66 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಕನ್ನಡದ ಮೇರು ನಟ ಪುನಿತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನದಿಂದ ಪ್ರಶಸ್ತಿ ಘೋಷಣೆಯಲ್ಲಿ ವಿಳಂಬವಾಯಿತು ಅವರ ಅಂತ್ಯಕ್ರಿಯೆಯ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ಈ ಅದರ ಜೊತೆಗೆ ಈ ವರ್ಷ ಭಾರತ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅದರ ಸ್ಮರಣೆಗಾಗಿ ರಾಜ್ಯದ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು
ನೀಡಲಾಗುತ್ತಿದೆ. ಈ ಪ್ರಶಸ್ತಿ ಈ ವರ್ಷಕೆ, ಮಾತ್ರ ಸೀಮಿತವಾಗಿದೆ.
ಸೇವಾ ಸಿಂಧು ಮೂಲಕ ಸಾರ್ವಜನಿಕರು ಮಾಡಿದ ಶಿಫಾರಸ್ಸುಗಳನ್ನು ಪರಿಶೀಲಿಸಿಹಾಗೂ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿದ ಅನೇಕ ಮಹನೀಯರನ್ನು ಹೆಕ್ಕಿ ತೆಗೆದು ಅವರ ಹೆಸರುಗಳನ್ನು ಕೂಡ ಪ್ರಶಸ್ತಿ ಸಲಹಾ ಸಮಿತಿ ಮತ್ತು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಪ್ರಶಸ್ತಿ ಆಯ್ಕೆ ಸಮಿತಿಗಳ ಮುಂದೆ ಇಡಲಾಯಿತು. ಅವುಗಳ ಸಮಗ್ರ ಪರಿಶೀಲನೆಯ ನಂತರ ಆಯ್ಕೆ ಸಮಿತಿಯು ಅಂತಿಮಗೊಳಿಸಿದ ಹೆಸರುಗಳನ್ನು ಈ ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ.
ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದ ಕಲಬುಗಿ ಜಿಲ್ಲೆಗೆ 2, ಬಳ್ಳಾರಿಗೆ 3, ಕೊಪ್ಪಳ ಜಿಲ್ಲೆಗೆ 2, ಯಾದಗಿರಿ ಜಿಲ್ಲೆಗೆ 2 ಮತ್ತು ಬೀದರ ಜಿಲ್ಲೆಗೆ ಪ್ರಶಸ್ತಿಯನ್ನು ನೀಡಲಾಗಿದೆ.
ಸಂಘ-ಸAಸ್ಥೆಗಳಿಗೆ 10 ಪ್ರಶಸ್ತಿ ಪ್ರಕಟಿಸಲಾಗಿದ್ದು, ಉಳಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ 6 ಸಾಧಕರಿಗೆ, ರಂಗಭೂಮಿ ಕ್ಷೇತ್ರದ ಐವರು, ಜಾನಪದ ಕ್ಷೇತ್ರದಲ್ಲಿನ 7 ಸಾಧಕರಿಗೆ, ಸಂಗೀತ ಕ್ಷೇತ್ರ ಮತ್ತು ಶಿಲ್ಪಕಲಾ ಕ್ಷೇತ್ರದ ತಲಾ ಇಬ್ಬರಿಗೆ, ಸಮಾಜ ಸೇವೆಗಾಗಿ ಐವರನ್ನು, ವೈದ್ಯಕೀಯ ಕ್ಷೇತ್ರದಲ್ಲಿನ ಗುರುತರ ಸೇವೆಯನ್ನು ಪರಿಗಣಿಸಿ 10 ಜನರಿಗೆ, ಸಿನೇಮಾ ಕ್ಷೇತ್ರದಲ್ಲಿನ ಒಬ್ಬರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಇಬ್ಬರಿಗೆ, ಕೃಷಿ ಕ್ಷೇತ್ರದಲ್ಲಿ 3 ಜನ ಸಾಧಕರಿಗೆ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಮೂರು ಜನರಿಗೆ, ಪರಿಸರ ಕ್ಷೇತ್ರದಲ್ಲಿ ಇಬ್ಬರಿಗೆ, ಪತ್ರಿಕೋದ್ಯಮದಲ್ಲಿ ಇಬ್ಬರಿಗೆ, ನ್ಯಾಯಾಂಗ ಕ್ಷೇತ್ರಕ್ಕೆ ಓರ್ವ ಸಾಧಕರಿಗೆ, ಆಡಳಿತ, ಸೈನಿಕ, ಯಕ್ಷಗಾನ, ಪೌರ ಕಾರ್ಮಿಕ, ಯೋಗ ಮತ್ತು ಉದ್ಯೋಗ ಕ್ಷೇತ್ರದ ತಲಾ ಒಬ್ಬರಿಗೆ ಅಲ್ಲದೇ ಹೊರನಾಡು ಕನ್ನಡಿಗ ಪ್ರಶಸ್ತಿಯನ್ನು ನಾಲ್ಕು ಜನ ಸಾಧಕರಿಗೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here