ದುಬೈ , ಅ.24- ಕಳೆದ ಐದು ಮಿನಿ ವಿಶ್ವಕಪ್‌ಗಳಲ್ಲಿ ಬಲಿಷ್ಠ ಭಾರತದ ವಿರುದ್ಧ ಸೋಲುತ್ತಲೇ ಬಂದಿದ್ದ ಪಾಕ್ ತಂಡಕ್ಕೆ ಈಗ ಮೋಕಾ (ಅವಕಾಶ) ಸಿಕ್ಕಿ, ವಿಶ್ವದ ಶ್ರೇಷ್ಠ ತಂಡದ ವಿರುದ್ಧ ರವಿವಾರ ಪಾಕ್ ಜಯಗಳಿಸಿದೆ.
ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಸಂಘಟಿತ ಹೋರಾಟ ನಡೆಸಿದ ಪಾಕಿಸ್ತಾನ, ಭಾರತದ ವಿರುದ್ಧ ಹತ್ತು ವಿಕಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ದುಬೈನ ಅಂತರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆದ ಹೊನಲು ಬೆಳಕಿನ ನಡೆದ ಚುಟುಕು ಟಿ-20 ಕ್ರಿಕೆಟ್‌ನ ಲೀಗ್ ಪಂದ್ಯದಲ್ಲಿ ಭಾರತವನ್ನು 10 ವಿಕೆಟ್‌ಗಳ ಅಂತರದಿAದ ಸದೆ ಬಡೆಯಿತು.
ಈ ಅಭೂತಪೂರ್ವ ಗಲುವಿನೊಂದಿಗೆ ಪಾಕಿಸ್ತಾನ ಟಿ20 ವಿಶ್ವಕಪ್ ನಲ್ಲಿ ಭರ್ಜರಿಯಾಗಿಯೇ ಗೆಲುವಿನ ನಾಗಾಲೋಟ ಆರಂಭಿಸಿದರೆ, ಭಾರತ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ಎದುರು ಹೀನಾಯ ಸೋಲು ಅನುಭವಿಸಿತು.
ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಪಾಕ್ ವಿರುದ್ಧ ಭಾರತ ಸೋತು ತೀವ್ರ ಮುಖಭಂಗ ಅನುಭವಿಸಿತು. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ಪಾಕಿಸ್ತಾನ ದಿಟ್ಟ ಉತ್ತರ ನೀಡಿತು.ನಾಯಕ ಬಾಬರ್ ಅಜಂ ಹಾಗೂ ಮತ್ತು ಮೊಹ್ಮದ್ ರಿಜ್ವಾನ್ ಬಿರುಸಿನ ಬ್ಯಾಟಿಂಗ್ ನಿಂದಾಗಿ ಇನ್ನೂ 2.1 ಓವರ್ ಬಾಕಿಯಿರುವಂತೆ ಪಾಕಿಸ್ತಾನ ವಿಜಯದ ಕಹಳೆ ಮೊಳಗಿಸಿತು.
ರಿಜ್ವಾನ್ 55 ಎಸೆತಗಳಲ್ಲಿ ಹೆಚ್ಚು 79 ಹಾಗೂ ಬಾಬರ್ 52 ಎಸೆತಗಳಲ್ಲಿ 68 ರನ್ ಬಾರಿಸಿದರು.
ಭಾರತ ತಂಡದಲ್ಲಿ ಅನುಭವಿ ಬೌಲರ್ ಗಳಿದ್ದರೂ ಒಂದು ವಿಕೆಟ್ ಪಡೆಯಲು ಕೊಹ್ಲಿ ಪಡೆ ತಿಣುಕಾಡಿತು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ, ನಾಯಕ ವಿರಾಟ್ ಕೊಹ್ಲಿ ಅಕರ್ಷಕ ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 151 ರನ್ ಗಳ ಸವಾಲಿನ ಮೊತ್ತ ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ಹಾಗೂ ಕೆ.ಎಲ್
. ರಾಹುಲ್ ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ 31 ರನ್ ಗಳಿಗೆ ಮೂರು ವಿಕೆಟ್ ಪತನಗೊಂಡು ಒತ್ತಡಕ್ಕೆ ಸಿಲುಕಿತ್ತು. ಅಪಾರ ನಿರೀಕ್ಷೆ ಹುಟ್ಟುಹಾಕಿದ್ದ ಸೂರ್ಯಕುಮಾರ್ ಯಾದವ್ 11 ರನ್ ಗಳಿಸಿ ಬ್ಯಾಟಿಂಗ್ ವೈಫಲ್ಯ ಕಂಡರು.
ಈ ಹಂತದಲ್ಲಿ ಕೊಹ್ಲಿ ಮತ್ತು ಪಂತ್ ಇನ್ನಿಂಗ್ಸ್ ಕಟ್ಟಿದರು.
ಕೊಹ್ಲಿ 57 ಹಾಗೂ ರಿಷಬ್ ಪಂತ್ 39 ರನ್ ಗಳಿಸಿ ಸವಾಲಿನ ಮೊತ್ತ ದಾಖಲಿಸಲು ನೆರವಾದರು. ರವೀಂದ್ರ ಜಡೇಜಾ 13 ಹಾಗೂ ಹಾರ್ದಿಕ್ ಪಾಂಡ್ಯ 11 ರನ್ ಗಳಿಸಿದರು.
ಶಾಹಿನ್ ಅಫ್ರಿದಿ 3, ಹಸನ್ ಅಲಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.