ಸೇಡಂ, ಅ. 18:ದರ್ಶನಕ್ಕೆ ಬಂದಿದ್ದ ಸಾಧು ಓರ್ವನಿಗೆ ಮಠದ ಸಿಬ್ಬಂದಿಗಳು ಕೂಡಿ ಥಳಿಸಿದ ಘಟನೆ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಮಠದಲ್ಲಿ ನಡೆದಿದೆ.
ಸೇಡಂ ತಾಲೂಕಿನ ಯಾನಗುಂದಿ ಬೆಟ್ಟದ ಮಾತಾ ಮಾಣಿಕೇಶ್ವರಿ ಮಠಕ್ಕೆ ಸಾಧು ಪ್ರವೇಶಿಸುತ್ತಿದ್ದಂತೆ ಮೇಲೆಗರಿದ ಸಿಬ್ಬಂದಿ ಮಠದ ಸಿಬ್ಬಂದಿಗಳಿAದ ಕೂದಲಿಡಿದು ಎಳೆದಾಡಿ ಹೊರನೂಕಿ ದೌರ್ಜನ್ಯವೆಸಗಿದ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ಮಠದ ಸಿಬ್ಬಂದಿಗಳ ಈ ಕೃತ್ಯಕ್ಕೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ.
ಮಠದ ಸಿಬ್ಬಂದಿಗಳು ಆ ಸಾಧುವಿನ ಕೈ, ಕಾಲು ಹಿಡಿದುಕೊಂಡು ದರದರನೆ ಎಳೆದಾಡುತ್ತ ಮಠದ ಮುಂಭಾಗಕ್ಕೆ ಕರೆದೊಯ್ಡುದಲ್ಲದೇ ಹಲ್ಲೆ ಮಾಡುತ್ತಿರುವ ಸಂದರ್ಭದಲ್ಲಿ ಸಾಧು ಓಮ ನಮೋ ನಾರಾಯಣಾಯ ಎಂದು ಉಚ್ಚರಿಸುತ್ತ ಸಂದರ್ಭದಲ್ಲಿಯೂ ಸಿಬ್ಬಂದಿಗಳು ಹಲ್ಲೆ ಮಾಡುತ್ತ ಧೋಂಗಿ ಮಾಡುತ್ತಿದ್ದಾನೆಂದು ಮಾತನಾಡುತ್ತಕೊಳ್ಳುತ್ತಿದ್ದರು.
ಹಲ್ಲೆಗೊಳಗಾದ ಸಾಧು ಯಾರೆಂದು ಇನ್ನು ಮಾಹಿತಿ ಸಿಕ್ಕಿಲ್ಲ, ಈ ಬಗ್ಗೆ ಮುಧೋಳ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.