ಗಡಿಕೇಶ್ವರದಲ್ಲಿ ಮತ್ತೆ ಇಂದು ಲಘು ಭೂಕಂಪನ

0
814

ಕಲಬುರಗಿ, ಅ. 16: ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಳೆದ ಏಳು ವರ್ಷಗಳಿಂದ ಭೂಮಿಯಿಂದ ವಿಚಿತ್ರ ಶಬ್ಧ ಕೇಳಿಬರುತ್ತಿದ್ದು, ಇತ್ತೀಚೆಗೆ ಒಂದು ವಾರದಿಂದ ಈ ಶಬ್ಧ ಜನರ ನಿದ್ದೆಗೆಡಿಸುವಂತೆ ಮಾಡಿದ್ದು, ಜನರು ರಾತ್ರಿ ಸಮಯದಲ್ಲಿ ಮನೆಯ ಹೊರಗಿನ ಬಯಲು ಪ್ರದೇಶದಲ್ಲಿ ಬಂದು ಮಲಗುವಂತಾಗಿದೆ.
ಇAದು ಮುಂಜಾನೆ 11.40ರ ಸುಮಾರು ಮತ್ತೆ ಗಡಿಕೇಶ್ವರ ಗ್ರಾಮದಲ್ಲಿ ಲಘು ಭೂಕಂಪವಾಗಿದ್ದು, ಈ ಸಮಯದಲ್ಲಿ ಎರಡು ಬಾರಿ ಭೂಮಿಯೊಳಗಿನಿಂದ ಬಂದ ಭಾರೀ ಸದ್ದು ಜನರ ಜೀವ ನಡುಗಿಸಿ ಬಿಟ್ಟಿದೆ.
ಮೇಲಿಂದ ಮೇಲೆ ಇಂತಹ ಶಬ್ಧಗಳು ಕೆಲ ದಿನಗಳಿಂದ ಬರುತ್ತಿದ್ದು, ಇದು ಲಘು ಭೂಕಂಪದ ಅನುಭವವಾಗುತ್ತಿದೆ.

LEAVE A REPLY

Please enter your comment!
Please enter your name here