ಯಡಿಯೂರಪ್ಪರ ಭೇಟಿ ಸಾಬೀತಾದರೆ ರಾಜಕೀಯ ಸನ್ಯಾಸ:ಸಿದ್ರಾಮಯ್ಯ

0
796

ಕಲಬುರಗಿ, ಅ. 13: ಸಭೆ, ಸದನ ಬಿಟ್ಟರೆ ಯಾವುದೇ ಸಂದರ್ಭದಲ್ಲಿ ನಾನು ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲ್ಲ, ಉಳಿದ ಸಮಯದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದು ಸಾಬೀತಾ ಮಾಡಿದ್ರೆ ರಾಜಕೀಯ ಸನ್ಯಾಸ ತೋಗೋತನೆ ಎಂತ ವಿರೋಧ ಪಕ್ಷದ ಕಾಂಗೈ ನಾಯಕ ಸಿದ್ಧರಾಮಯ್ಯ ಅವರು ಸವಾಲು ಹಾಕಿದ್ದಾರೆ.
ಯಡಿಯೂರಪ್ಪ ರನ್ನು ಹುಟ್ಟು ಹಬ್ಬದ ಸಂದರ್ಭದಲ್ಲಿ ಭೇಟಿ ಮಾಡಿದ್ದೆ, ನಂತರ ಅವರನ್ನು ಯಾವಾಗಲೂ ಭೇಟಿ ಮಾಡಿಲ್ಲಾ. ಭೇಟಿ ಮಾಡೋದು ಅದೇ ಕುಮಾರಸ್ವಾಮಿ ಗಿರಾಕಿ ಎಂದು ನೇರವಾಗಿ ಅರೋಪಿಸಿದರು.
ಇನ್ನು ಯಡಿಯೂರಪ್ಪ ಅವರ ಆಪ್ತರ ಮೇಲಿನ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ ಅವರು ಪ್ರಧಾನಮಂತ್ರಿಗಳು ಬಿಜೆಪಿಯವರು ಅವರು ನನ್ನ ಮಾತು ಕೇಳಿ ರೆಡ್ ಮಾಡ್ತಾರಾ ಎಂದು ಮರುಪ್ರಶ್ನಿಸಿದರು.
ಈ ಹಿಂದೆ ನಾನು ತಾಲೂಕು ಬೋರ್ಡ್ ಸದಸ್ಯ ಆಗಿದ್ದಾಗಲೇ ವಿರೋಧ ಪಕ್ಷದ ನಾಯಕನಾಗಿದ್ದೆ, ಆಗಲು ಕೂಡಾ ಅಧಿಕಾರದಲ್ಲಿದ್ದ ರನ್ನು ಭೇಟಿ ಮಾಡುತ್ತಿರಲಿಲ್ಲ. ಇದು ರಾಜಕೀಯದಲ್ಲಿ ನನ್ನ ತತ್ವ ಸಿದ್ದಾಂತ ಎಂದು ಅವರು ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರಲ್ಲಾ ಅದು ಏನು ಆವಾಗ ಕುಮಾರಸ್ವಾಮಿ ಸನ್ಯಾಸಿ ಆಗಲಿಕ್ಕೆ ಹೋಗಿದ್ರಾ, ಪಕ್ಷದ ಹೆಸರು ಜೆಡಿಎಸ್, ಸರ್ಕಾರ ಮಾಡಿದ್ದು ಕೋಮುವಾದಿ ಬಿಜೆಪಿ ಅವರ ಬಳಿ ಸನ್ಯಾಸತ್ವ ತಗೋಲಿಕ್ಕೆ ಹೋಗಿದ್ರಾ ಎಂದ ಅವರು ಅಂತವರಿAದ ಪಾಠ ಕಲಿಬೇಕಾಗಿ ಬಂದಿರೋದು ನಮ್ಮ ದುಸ್ಥಿತಿ ಎಂದು ಮರಗಿದರು.

LEAVE A REPLY

Please enter your comment!
Please enter your name here