ಕಲಬುರಗಿ, ಅ. 09: ಅನುಮಾನಾಸ್ಪದ ರೀತಿಯಲ್ಲಿ ಬಾಲಕಿಯೋರ್ವಳು ಸಾವನ್ನಪ್ಪಿದ್ದ ಘಟನೆ ತಾಲ್ಲೂಕಿನ ಪಾಣೆಗಾಂವ್ ನಡೆದಿದೆ.
ಪಾಯಲ್ ಎಂಬ 15 ವರ್ಷದ ಯುವತಿಗೆ ವಿಷ ಪ್ರಾಶನದಿಂದ ಸಾವನ್ನಪ್ಪಿದ್ದ ಘಟನೆ ನಿನ್ನೆ ಸಂಜೆ ನಡೆದ ಬಗ್ಗೆ ವರದಿಯಾಗಿದೆ.
ನಿನ್ನೆ ಸಂಜೆ ಕಟ್ಟಿಗೆ ತರೋದಕ್ಕೆ ಮನೆಯ ಹಿಂದೆ ತೆರಳಿದಾಗ, ಇಬ್ಬರು ಯುವಕರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ವಿಷ ಕುಡಿಸಿದ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಪಾಣೆಗಾಂವ್ ಗ್ರಾಮದ ಸುನೀಲ್ ಮತ್ತು ಆತನ ಸ್ನೇಹಿತನಿಂದ ಕೃತ ನಡೆದಿದೆ ಎಂದು ಹೇಳಲಾಗಿದ್ದು, ಇಬ್ಬರು ಯುವಕರು ಪಾಣೆಗಾಂವ ಗ್ರಾಮದ ನಿವಾಸಿಗಳಾಗಿದ್ದಾರೆ.
ಈ ಬಗ್ಗೆ ಫರಹತಾಬಾದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.