ಕಲಬುರಗಿ, ಅ. 07: ಯಾದಗಿರಿ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಖಂಡಿಸಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರಿಗೆ ಘೇರಾವ ಹಾಜಲು ಯತ್ನಿಸಲಾಯಿತು.
ಕಲಬುರಗಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಈ ಯತ್ನ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪಶುಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೆ ಭಾಗವಹಿಸಲು ಸಚಿವರು ಹೋಗುತ್ತಿರುವಾಗ ಈ ಘಟನೆ ನಡೆಯಿತು.
ಅಂತಿಮವಾಗಿ ಪೋಲಿಸರ ಸಹಾಯದಿಂದ ಸಚಿವರು ಜಿಲ್ಲಾಧಿಕಾರಿಗಳ ಕಛೇರಿ ಪ್ರವೇಶ ಪಡೆದರು.
ಇತ್ತೀಚೆಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಾಳ್ ಗ್ರಾಮದಲ್ಲಿ ದಲಿತ ಮಾದಿಗ ಸಮುದಾಯ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪೆಟ್ರೋಲ್ ಸುರಿದು ಹತ್ಯೆಗೈದ ಘಟನೆಯನ್ನು ಖಂಡಿಸಿ ಈ ಘೇರಾವ್ ಯತ್ನಿಸಲಾಯಿತು.
ಕಾಮುಕ ಹತ್ಯೆಕೋರರನ್ನು ಬಂಧಿಸುವAತೆ ಹೋರಾಟಗಾರು ಆಗ್ರಹಿಸಿ ಸಚಿವ ಪ್ರಭು ಚವ್ಹಾಣ್ ವಿರುದ್ಧ ಘೋಷಣೆ ಕೂಗುತ್ತ ಡಿಸಿ ಕಚೇರಿ ಮುಂಭಾಗದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಅದರಲ್ಲೂ ದಲಿತ ಸಮುದಾಯಕ್ಕೆ ಸೇರಿದ ಸಚಿವ ಪ್ರಭು ಚವ್ಹಾಣ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಿದಿರುವುದು ಪ್ರತಿಭಟನಾಕಾರರ ಕೆಂಗೆಣ್ಣಿಗೆ ಗುರಿಯಾಗಿ, ಉಸ್ತುವಾರಿ ಸಚಿವರಿಗೆ ಘೇರಾವ ಹಾಕಲು ಯತ್ನಿಸಿದರು.
ರಸ್ತೆ ತಡೆ ಮಾಡಿದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗಿ ಕೆಲ ಹೊತ್ತು ವಾಹನ ಸವಾರರು ಪರದಾಡಬೇಕಾಯಿತು.