ಕಲಬುರಗಿಯಲ್ಲಿ ಮತ್ತೊಂದು ಕೊಲೆ ಉಸಿರು ಗಟ್ಟಿಸಿ ಯುವಕನ ಬರ್ಬರ ಹತ್ಯೆ

0
1905

ಕಲಬುರಗಿ, ಅ. 06: ಕಲಬುರಗಿ ನಗರದಲ್ಲಿ ದಿನ ನಿತ್ಯ ರಸ್ತೆ ಅಪಘಾತ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ನಗರದಲ್ಲಿ ಯುವಕನೋರ್ವನ ಬರ್ಬರವಾಗಿ ಹತ್ಯೆಯಾದ ಬಗ್ಗೆ ವರದಿಯಾಗಿದೆ.
ಇಂತಹದೊoದ ಮನಕಲಕುವ ದೃಶ್ಯ ಕಂಡು ಬಂದಿರೋದು ಕಲಬುರಗಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದ್ದು, ಕಿರಣ (18) ತಂದೆ ಶ್ರೀಮಂತ ಎಂಬ ಯುವಕನೆ ಹತ್ಯೆಗೀಡಾಗಿದ್ದಾನೆ.
ಮಗನನ್ನ ಕಳೆದುಕೊಂಡು ಕಣ್ಣಿರು ಹಾಕುತ್ತಿರುವ ಹೆತ್ತ ಜೀವ ಮತ್ತೊಂದೆಡೆ ಬಾರದ ಲೋಕಕ್ಕೆ ತೆರಳಿರುವ ಸ್ನೇಹಿತನನ್ನ ನೆನೆದು ಮರಗುತ್ತಿರುವ ಸ್ನೇಹಿತರು.. ಅಷ್ಟಕ್ಕು ಇಂತಹದೊAದ ಮನಕಲಕುವ ದೃಶ್ಯ ಕಂಡು ಬಂದಿರೋದು ಕಲಬುರಗಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ.

ಅಷ್ಟಕ್ಕು ಇಲ್ಲಿ ಕೊಲೆಯಾಗಿ ಬಿದ್ದರುವ ಯುವಕನ ಹೆಸರು ಕಿರಣ್ ಹೊಸಮನಿ ಅಂತಾ..ಎಸ್ ಎಸ್ ಎಲ್ ಸಿ ವರೆಗೂ ವಿದ್ಯಾಭ್ಯಾಸ ಮಾಡಿದ್ದ ಕಿರಣ್ ಕರೊನಾ ಸಂಧರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯು ಕಟ್ಟದೆ ವಿದ್ಯಾಭ್ಯಾಸ ಬಿಟ್ಟು ಕೂಲಿ ನಾಲಿ ಕೆಲಸ ಮಾಡಿಕೊಂಡಿದ್ದ.
ತಾಯಿ ಇತ್ತ ಬಸವೇಶ್ವರ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡ್ತಿದ್ದಾಳೆ. ಇವತ್ತು ಅಮವಾಸ್ಯೆ ಹಿನ್ನಲೆಯಲ್ಲಿ ಯಾದಗಿರಿ ಜಿಲ್ಲೆಯ ಮೈಲಾಪುರ ಮಲ್ಲಯ್ಯನ ದೇವಸ್ಥಾನಕ್ಕೆ ಸ್ನೇಹಿತರ ಜೊತೆಗೂಡಿ ಹೋಗ್ತಿದ್ದೆನೆ ಅಂತಾ ಮನೆಯಲ್ಲಿ ಹೇಳಿ ಬ್ಯಾಗ್‌ನಲ್ಲಿ ಬಟ್ಟೆ ಪ್ಯಾಕ್ ಮಾಡಿಕೊಂಡು ಹೋರ ಹೋಗಿದ್ದ..ರಾತ್ರಿ 12:26 ರ ಕ್ಕೆ ಮೈಲಾಪುರಕ್ಕೆ ಹೋಗ್ತಿದ್ದಿನಿ ಅಂತಾ ವಾಟ್ಸ್ ಆಪ್ ನಲ್ಲಿ ಸ್ಟೇಟಸ್ ಹಾಕಿದ್ದ..ಅದಾದ ಬಳಿಕವು ಕೂಡ ಮಧ್ಯಾರಾತ್ರಿ ಎರಡು ಗಂಟೆಯವರೆಗೂ ಕೂಡ ಕಿರಣ್ ಕಲಬುರಗಿಯಲ್ಲೆ ಸ್ನೇಹಿತರ ಜೊತೆದ್ದು, ಇತ್ತ ಮನೆಯವರು ಮಗ ದೇವಸ್ಥಾನಕ್ಕೆ ಹೋಗಿರಬೇಕು ಅಂತಾ ಸುಮ್ಮನಾಗಿದ್ದರು..ಆದ್ರೆ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಮನೆಯ ಮುಂದಿನ ಪಾರ್ಕ್ ನಲ್ಲಿ ಕಿರಣ್ ಕೊಲೆಯಾಗಿ ಬಿದ್ದಿದ್ದಾನೆ…

ರಾತ್ರಿ ಮನೆಯಿಂದ ಹೋರ ಹೋದ ಕಿರಣ್ ಸ್ನೇಹಿತರ ಜೊತೆಗೂಡಿ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದಾನೆ..ಅದಾದ ಬಳಿಕ ಸ್ನೇಹಿತರ ಮಧ್ಯೆ ಯಾವ ವಿಚಾರಕ್ಕೆ ಗಲಾಟೆಯಾಗಿದೆಯೋ ಗೊತ್ತಿಲ್ಲ ಕುಡಿದ ನಶೆಯಲ್ಲಿ ಸ್ನೇಹಿತರು ಕಿರಣ್ ಉಸಿರುಗಟ್ಟಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಇನ್ನೂ ಕೊಲೆಗೂ ಮುಂಚೆ ನಿನ್ನೆ ಬೆಳಗ್ಗೆ ಕಿರಣ್ ತನ್ನ ಸ್ನೇಹಿತನ ಬಳಿ ಐನೂರು ರೂಪಾಯಿ ಸಾಲ ಮಾಡಿದ್ದನಂತೆ ಸಾಲ ವಾಪಸ್ ನೀಡದ ಹಿನ್ನಲೆಯಲ್ಲಿ ಆತ ಕಿರಣ್ ಮೊಬೈಲ್ ಕಸಿದಕೊಂಡಿದ್ದನAತೆ..  ಹಾಗಾಗಿ ನಿನ್ನೆ ಸಂಜೆ ತನ್ನ ತಾಯಿ ಕೆಲಸ ಮಾಡ್ತಿದ್ದ ಆಸ್ಪತ್ರೆ ಬಳಿ ಹೋಗಿ ಐನೂರು ರೂಪಾಯಿ ಕೋಡು ಮೊಬೈಲ್ ಬಿಡಿಸಿಕೊಂಡು ಬರಬೇಕು ಅಂತಾ ಹೇಳದ್ದನಂತೆ. ತಾಯಿ ಕೂಡ ಐನೂರು ರೂಪಾಯಿ ಕೊಟ್ಟು ಕಳುಹಿಸಿದ್ದಳು.
ಆದ್ರೆ ನಿನ್ನೆ ಬೆಳಗ್ಗೆಯಿಂದಲೆ ಅದ್ಯಾವುದೋ ವಿಚಾರಕ್ಕೆ ತುಂಬಾ ಗಲಿಬಿಲಿಯದಾವನಂತೆ ಕಾಣ್ತಿದ್ದನಂತೆ ಕಿರಣ್..ಅಲ್ಲದ ಬೆಳಗ್ಗೆಯಿಂದಲು ಕೂಡ ಪಾರ್ಕ್ ನಲ್ಲೆ ಸ್ನೇಹಿತರ ಜೋತೆಗೂಡಿ ಇದ್ದನಂತೆ..ಆದ್ರೆ ಮಧ್ಯರಾತ್ರಿ ಕಿರಣ್ ಅದೇ ಪಾರ್ಕ ನಲ್ಲಿ ಬರ್ಬರವಾಗಿ ಕೊಲೆಯಾಗಿ ಬಿದ್ದಿದ್ದಾನೆ..ಬೆಳಗ್ಗೆ ಪಾರ್ಕ್ ನಲ್ಲಿ ಬಿದ್ದಿದ್ದ ಮಗನನ್ನ ಕರೆತಂದು ನೋಡಿದಾಗ ಕಣ್ಣಲ್ಲಿ ಮರಳು ಹಾಕಿ ಉಜ್ಜಿರೋ ರೀತಿಯಲ್ಲಿ ಕಂಡು ಬಂದಿದೆ..ಅಲ್ಲದೆ ಕೊಲೆಯ ಬಳಿಕ ಮಗನ ಮೊಬೈಲ್ ಮತ್ತು ಬಟ್ಟೆ ಬ್ಯಾಗ್ ಕೂಡ ಹಂತಕರು ತೆಗೆದುಕೊಂಡು ಹೋಗಿದ್ದಾರಂತೆ.
ಈ ಸಂಬAಧ ಎಮ್ ಬಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ..ಕೊಲೆ ಪ್ರಕರಣ ದಾಖಲಿಸಿಕೊಂಡ ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ..ಅದೇನೆ ಆಗಲಿ ದೇವಸ್ಥಾನಕ್ಕೆ ಹೋಗಿದ್ದಾನೆ ಅಂತಾ ಅಂದುಕೊAಡ ಮಗ ಮನೆಯ ಎದುರಿನ ಪಾರ್ಕ್ನಲ್ಲಿ ಕೊಲೆಯಾಗಿ ಬಿದ್ದಿರೋದನ್ನ ಕಂಡು ಆ ವಯಸ್ಸಾದ ಹೆತ್ತ ಜೀವಕ್ಕೆ ಆಕಾಶವೆ ಕಳಚಿ ಬಿದ್ದಂತಾಗಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿದ್ದು, ಈ ಬಗ್ಗೆ ಎಂ.ಬಿ. ನಗರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here