ಮೋದಿಜೀ ಬಗ್ಗೆ ಖರ್ಗೆ ಬಾಯ್ತಪ್ಪಿ ಹೇಳಿದ್ರೇ ಕ್ಷಮೇಯಾಚಿಸಲಿ:ಈಶ್ವರಪ್ಪ

0
710
Only victorious disqualified MLAs will get ministerial berths: Eshwarappa -  The Hindu

ಕಲಬುರಗಿ, ಅ. 04: ರವಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹೇಳಿದ ಮಾತು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಬಾಯಿ ತಪ್ಪ ಹೇಳಿದ್ರೆ ಕ್ಷಮೇಯಾಚಿಸಲಿ, ಇಲ್ಲಾಂದ್ರ ಮೋದಜೀ ಅವರು ಚಿಲ್ಲರೆ ಇದ್ದೆ ಅದರ ಬಗ್ಗೆ ವಿವರಣೆ ಕೊಡಲಿ ಎಂದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ.
ಅವರಿಂದಿಲ್ಲಿ ಪತ್ರಕರ್ತರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡುತ್ತ, ಮೋದಿ ಅವರ ಬಗ್ಗೆ ಖರ್ಗೆ ಮಾತಾಡಿರೋದು ನನಗೆ ಅತೀವ ನೋವಾಗಿದೆ, ನನ್ನ ರಾಜಕೀಯ ಜೀವನದಲ್ಲಿ ಎಂದು ಸಹ ಇಷ್ಟು ಬೇಸರವಾಗಿರಲಿಲ್ಲ ಎಂದರು.
ವಿಶ್ವವೇ ಮೋದಿಜಿಯವರ ಬಗ್ಗೆ ಖರ್ಗೆಯವರು ಹಾಗೇ ಮಾತನಾಡಬಾರದಿತ್ತು, ಖರ್ಗೆಯವರಿಗೆ ಮಾತು ಅವರಿಗೆ ಸರಿಯನಿಸಿದ್ರೆ ನಾನು ಏನು ಹೇಳಲ್ಲ, ಮೋದಿಜಿಯವರ ಬಗ್ಗೆ ಮಾತನಾಡಿದ ಖರ್ಗೆಯವರು ಕ್ಷಮೆ ಕೇಳಿದ್ರೆ ಅವರ ಗೌರವ ಮತ್ತಷ್ಟು ಹೆಚ್ಚಾಗಲಿದೆ.
ದೇಶದ ಆಸ್ತಿ ಮಾರಲು ಮೋದಿ ಹೊರಟಿದ್ದಾರೆ ಎಂದು ಹೇಳಿದ ಖರ್ಗೆ ಅವರು, ಈ ದೇಶದ ಆಸ್ತಿ ಮೋದಿ ಮಾರಲ್ಲ, ದೇಶದ ಆಸ್ತಿಯೇ ನರೇಂದ್ರ ಮೋದಿಯಾಗಿದ್ದಾರೆ ಎಂದು ಬಣ್ಣಿಸಿದರು.
ಭಾರತೀಯ ಜನತಾ ಪಕ್ಷದ ಶಾಸಕರುಗಳು ಸಿಂಹ ಇದ್ದ ಹಾಗೇ, ನಮ್ಮ ಶಾಸಕರು ಯಾರು ಮಾರಾಟದ ವಸ್ತುಗಳಲ್ಲ, ಅಂತಹದರಲ್ಲಿ ಬಿಜೆಪಿಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ ಎಂದು ಕೆ. ಎಸ್. ಈಶ್ವರಪ್ಪ ಖಡಾತುಡಿಯಾಗಿ ಹೇಳಿದ್ದಾರೆ.
ತಾಕತ್ತಿದ್ದರೆ 40 ಅಲ್ಲ 4 ಜನ ಶಾಸಕರನ್ನು ಕಾಂಗ್ರೆಸ್ ಪಕ್ಷ ಸೆಳೆಯಲ್ಲಿ ನೋಡೋಣ, ಸಾಯುವ ಹಂತದಲ್ಲಿರುವ ಪಕ್ಷಕ್ಕೆ ಯಾರಾದರೂ ಹೋಗ್ತಾರೆನ್ಸಿ ಎಂದು ಪ್ರಶ್ನಸಿದರು.
ಪಂಚಾಬ್‌ನಲ್ಲಿ ಕಾಂಗ್ರೆಸ್ ಪಕ್ಷ ಒಡೆದು ಹೋದ್ರೆ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ತುಂಡ ತುಂಡ ಆಗಿದೆ, ಕಾಂಗ್ರೆಸ್ ಪಕ್ಷ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಿಲಿ ಎಂದು ಸಲಹೆ ನೀಡಿದರು.
ಕಾಂಗ್ರಸ್ ತನ್ನ ಅವಧಿಯಲ್ಲಿ ಹಿಂದೆ ಮಾಡಿದ ಕೆಲಸಗಳ ಪಟ್ಟಿ ಕೊಡಲು, ನಂತರ ನಾವು ಮಾಡಿದ ಕೆಲಸಗಳ ಪಟ್ಟಿ ಕೋಡ್ತಿವಿ ಎಂದರು.
ಈಗಾಗಲೇ ಮೋದಿಜಿಯವರ ಕಾರ್ಯಕ್ಷಮತೆ ಬಗ್ಗೆ ಅನೇಕ ರಾಷ್ಟçಗಳಲ್ಲಿನ ಮುಸ್ಲಿಂರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ ಎಂದು ನುಡಿದರು. ಕೆ.ಎಸ್. ಈಶ್ವರಪ್ಪ. ಜೆಡಿಎಸ್ ಪಕ್ಷ ಚುನಾವಣೆಯಲ್ಲಿ ಮುಸ್ಲಿಂರನ್ನು ನಿಲ್ಲಿಸಿದ್ರೆ ಕಾಂಗ್ರೆಸ್‌ಗೆ ಭಯವಾಗುತ್ತೆ ಎಂದು ಹೇಳಿದರು.

LEAVE A REPLY

Please enter your comment!
Please enter your name here