

ಕಲಬುರಗಿ, ಅ. 04: ಹಿಂದುತ್ವ ಅಜೆಂಡಾ ಇದೆ, ಈಶ್ವರಪ್ಪ ತಂಟೆಗೆ ನಾನು ಹೋಗಿದಿಲ್ಲಾ ಅನ್ನೋ ಸಿದ್ಧರಾಮಯ್ಯನವರ ಹೇಳಿಕೆ ವಿಚಾರ ನಾನು ಏನು ಮತನಾಡ್ತೇನೆ ಅಂತ ಅವರಿಗೆ ಗೊತ್ತಿದೆ, ಅದಕ್ಕಾಗಿ ಅವರು ನನ್ನ ತಂಟೆಗೆ ಬರಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅವರಿಂದು ಕಲಬುರಗಿಯಲ್ಲಿ ಮಾತನಾಡುತ್ತ, ಸಿದ್ರಾಮಯ್ಯನವರು ಏಕ ವಚನದಲ್ಲಿ ಮಾತನಾಡೋದನ್ನ ನಿಲ್ಲಿಸಲಿ ಎಂದ ಅವರು ಬಿಜೆಪಿಯಿಂದ ಕಾಂಗ್ರೆಸ್‌ಗೆ 40 ಶಾಸಕರು ಬರತ್ತಾರೆ ಎಂಬ ಹೇಳಿಕೆ ನೀಡಿದ ಕಾಂಗೈ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಯಾವ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಈಶ್ವರಪ್ಪ ಸಾಯೋ ಪಾರ್ಟಿಗೆ ಯಾರು ಹೋಗ್ತರ‍್ರೀ… ನಾಲ್ಕು ಜನ ಶಾಸಕರು ಕೂಡಾ ಹೋಗಲ್ಲ ಎಂದರು.
ಇತ್ತೀಚೆಗೆ ನಡೆದ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತು ಸುಣ್ಣವಾಗಿದ್ದು, ಡಿಪಾಜಿಟ್ ಕಳೆದುಕೊಳ್ಳುತ್ತಿದ್ದಾರೆ. ಚುನಾವಣೆ ಬಂದ್ರೆ ಕಾಂಗ್ರೆಸ್‌ನವರು ನಡುಗಿ ಹೋಗ್ತಾರೆ, ಬೇರೆ ಮನೆಯವರ‍್ನು ಹುಡುಕಿಕೊಂಡು ಟಿಕೆಟ್ ನೀಡ್ತಾರೆ, ಒಂದು ಹಂತದಲ್ಲಿ ಹೇಳಬೇಕೆಂದ್ರೆ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರೇ ಇಲ್ವಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಬರುವ 30ರಂದು ನಡೆಯಲಿರುವ ಎರಡು ಉಪ ಚುನಾವಣೆಯಲ್ಲಿ ನಮ್ಮ ಪಕ್ಷವೇ ಗೆಲ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.