ಸಬ್ ಕಾ ಸಾಥ್, ಸಬಕಾ ವಿಕಾಸ್, ಸಬ್ ಕಾ ವಿಶ್ವಾಸ ಹೆಸರಿನಲ್ಲಿ ಶ್ರೀಮಂತರಿಗೆ ಆಸ್ತಿಗಳ ಹಸ್ತಾಂತರ:ಖರ್ಗೆ

0
1079

(ರಾಜು ದೇಶಮುಖ)
ಕಲಬುರಗಿ, ಅ. 03: ಒಂದೊAದಾಗಿ ದೇಶದ ಆಸ್ತಿಗಳನ್ನು ತಮಗಿಷ್ಟ ಬಂದ ಶ್ರೀಮಂತರಿಗೆ ಮೋದಿ ಮತ್ತು ಅಮೀತ ಶಾ ಆಸ್ತಿಗಳನ್ನು ಹಸ್ತಾಂತರಿಸುತ್ತಿದ್ದಾರೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಪಾದಿಸಿದ್ದಾರೆ.
ಅವರಿಂದು ನಗರದ ಐವಾನ್ -ಎ-ಶಾಹಿ ಅತಿಥಿ ಗ್ರಹದಲ್ಲಿ ಎರಡು ವರ್ಷ ಬಳಿಕ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ದೇಶದ ಒಟ್ಟು 366 ಸಾರ್ವಜನಿಕ ಸ್ವಾಮ್ಯದ ಆಸ್ತಿಗಳನ್ನು 99 ವರ್ಷ ಲೀಜ್‌ಗೆ ಮತ್ತು 30 ವರ್ಷಗಳ ಲೀಜ್‌ಗೆ ನೀಡುವುದರ ಮೂಲಕ ಒಂದೊAದಾಗಿ ಲೀಜ್ ನೆಪದಲ್ಲಿ ಮಾರಾಟವಾಗುತ್ತಿದ್ದು, ರೈಲು, ವಿದ್ಯುತ್‌ಛಕ್ತಿ, ಸೇರಿದಂತೆ ಎಲ್ಲವನ್ನು ಖಾಸಗೀಕರಣ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಲಾಬವೇನು ಇಲ್ಲ, ಬರೀ ನಷ್ಟವೇ ಹೆಚ್ಚಾಗಲಿದೆ ಎಂದು ವಿವರಿಸಿದರು.
ದೇಶದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ತನ್ನ 55 ವರ್ಷಗಳ ಇತಿಹಾಸದಲ್ಲಿ ಮಾಡಿದ ಕೆಲಸ ಕಾರ್ಯಗಳಿಗೆ ಈಗಿನ ಪ್ರಧಾನಿ ಮೋದಿ ಅವರು ಹೆಸರು ಬದಲಾಯಿಸುವುದರ ಮೂಲಕ ಇದೆಲ್ಲ ನಾವೇ ಮಾಡಿದ್ದೇವೆ, ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದು, ಮಧ್ಯಾಹ್ನದ ಬಿಸಿಯೂಟ ಯೋಜನೆ ನಾವು ಆರಂಭಿಸಿದ್ದು ಅದರ ಹೆಸರು ಬದಲಾಯಿ ಪ್ರಧಾನ ಮಂತ್ರಿ ಪೋಷಣ ಯೋಜನೆಯೆಂದು ನಾಮಕರಣ ಮಾಡಿದ್ದು, ಅಲ್ಲದೇ ಜಿಎಸ್‌ಟಿ ಜಾರಿಗೆ ವಿರೋಧಿಸಿದ ಬಿಜೆಪಿ ಅದನ್ನೇ ತಾವು ಮಾಡಿದ್ದು ಎಂದು ಹೇಳಿಕೊಂಡುತ್ತಿರುಗುವುದು ಸೇರಿದಂತೆ ನಾವು ಮಾಡಿದ್ದನ್ನು ನಾವು ಅದರ ಪ್ರಚಾರ ತೆಗೆದುಕೊಳ್ಳಲು ಬರದ ಹಿನ್ನೆಲೆಯಲ್ಲಿ ಅವರು ಮಾಡಿದ್ದು, ಸ್ವಲ್ಪವಾದರೂ ಅದಕ್ಕೆ ನೂರರಷ್ಟು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಕಾAಗ್ರೆಸ್‌ನ ಕಾಲದಲ್ಲಿ ಪ್ರತಿಬ್ಯಾರಲ್‌ಗೆ ಯುಎಸ್ ಡಾಲರ್ 100 ರಿಂದ 150 ರೂ. ಆಗ ಪೆಟ್ರೋಲ್ 70 ಮತ್ತು ಡಿಜೈಲ್ 52 ರೂ. ನಾವು ಕೊಡುತ್ತಿದ್ದೇವೆ, ಆದರೆ ಇಂದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈಗ ಪ್ರತಿ ಲೀಟರ್‌ಗೆ ಪೆಟ್ರೋಲ್ 108 ರೂ. ಆಗಿದೆ, ಈಗ ಪ್ರತಿಬ್ಯಾರೆಲ್ ರೆಟೆ ಎಷ್ಟು ಗೊತ್ತಾ ಎಂದು ಪ್ರಶ್ನಿಸಿದ ಖರ್ಗೆ ಅವರು ಕೇವಲ 50 ರೂ. ಆಗಿದೆ, ಆದರೆ ಪೆಟ್ರೋಲ್‌ನಿಂದ ಲಾಭದ ಬಂದ ಹಣವನ್ನು ಐಒಸಿಗೆ ಮಾಡಿದ ಸಾಲವನ್ನು ತಿರಿಸಿದ್ದಾಗಿ ಹೇಳಿಕೆ ನೀಡಿದ ಮೋದಿ ಅವರು ಕೇವಲ 1700 ಲಕ್ಷ ಕೋಟಿ ರೂ. ಮಾತ್ರ ಸಾಲವನ್ನು ಭರಿಸಿದ್ದಾರೆ ಆದರೆ ಬಂದಿದ್ದು, 25 ಲಕ್ಷ ಕೋಟಿ ರೂ. ಎಂದರು.
ಇನ್ನು ಕಾಲದಲ್ಲಿ ದೇಶದಲ್ಲಿ ಶೇ.16% ಪ್ರತಿಶತದಷ್ಟು ಮಾತ್ರ ಸಾಕ್ಷರತೆಯಿತ್ತು, ಆದರೆ ಕಾಂಗ್ರೆಸ್ ಸ್ವಾತಂತ್ರö್ಯದ ನಂತರ ಅಧಿಕಾರಕ್ಕೆ ಬಂದ ಮೇಲೆ ಅದು ಶೇ. 73%ರಷ್ಟು ಸಾಕ್ಷರತೆಯನ್ನು ಮಾಡಿದೆ ಎಂದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬಕ್ ವಿಶ್ವಾಸ ಎನ್ನುವ ಮಂತ್ರದೊAದಿಗೆ ಅಧಿಕಾರಕ್ಕೆ ಭಾರತೀಯ ಜನತಾ ಪಕ್ಷ ಅದು ಮಾಡುವುದು ಏನು ಗೊತ್ತಾ, ಪೆಟ್ರೋಲ್ ಖಲಿಗಳ ಸಾಥ್‌ನೊಂದಿಗೆ ವಿಕಾಸ ಮತ್ತು ಅವರ ವಿಶ್ವಾಸ ಗಳಿಸಿದ್ದಾರೆ ಎಂದರು.
ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಈ ಸರಕಾರಕ್ಕೆ ಚಿಂತೆ ಇಲ್ಲ, ಅಡುಗೆ ಎಣ್ಣೆ, ಬೆಳೆ ಸೇರಿದಂತೆ ಹಲವಾರು ವಸ್ತುಗಳ ಬೆಲೆ ಗಗಣಕ್ಕೆ ಏರಿದೆ, ಇದು ಹೊರೆಯಾಗುವುದು ಶ್ರೀಮಂತರಿಗೆ ಅಲ್ಲ ಬಡ, ಮಧ್ಯಮ ವರ್ಗದ ಜನರಿಗೆ ಮಾತ್ರ ಇದನ್ನು ಯಾರು ಕೇಳುತ್ತಿಲ್ಲ, ಮೋದಿ ಸರಕಾರ ಬರೀ ಇಬ್ಬರ ಆಡಳಿತದ ಸರಕಾರವಾಗಿದೆ, ಅದು ಮೋದಿ ಮತ್ತು ಶಹಾ, ಉಳಿದೆಲ್ಲರೂ ಶೂನ್ಯವಾಗಿದ್ದಾರೆ ಎಂದು ನುಡಿದರು.
ಇನ್ನು ಇಡೀ ವಿಶ್ವಕ್ಕೆ ವ್ಯಾಪಿಸಿದ ಮಹಾಮಾರಿ ದೇಶಕ್ಕೂ ಅಪಾರ ಪ್ರಮಾಣದಲ್ಲಿ ಸಾವು, ನೋವಿ ತಂದಿದೆ, ದೇಶದಲ್ಲಿ ಕೋವಿಡ್‌ನಿಂದಾಗಿ 4 ಲಕ್ಷ 80 ಸಾವಿರ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರಕಾರದ ಆರೋಗ್ಯ ಇಲಾಖೆ ವರದಿ ಹೇಳುತ್ತದೆ, ನಮ್ಮ ಪ್ರಕಾರ ನಮ್ಮ ದೇಶದಲ್ಲಿ 6 ಲಕ್ಷ 80 ಸಾವಿರ ಕಂದಾಯ ಗ್ರಾಮಗಳಿವೆ, ಅಂದಾಜಿನAತೆ ಪ್ರತಿ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟರೆಂದರೆ ಮೃತರ ಸಂಖ್ಯೆ 13 ಲಕ್ಷ 80 ಸಾವಿರ ಆಗುವುದು ಆದರೆ ಬಿಜೆಪಿಯವರು ಹೇಳುವ ಲೆಕ್ಕ ಏನು ಬರೀ 4.80 ಲಕ್ಷ ಮಾತ್ರ ಇದರಲ್ಲೂ ಸುಳ್ಳು ಹೇಳಿದ್ದಾರೆ ಎಂದು ಸತ್ಯವನ್ನು ಬಯಲಿಗೆಳದರು ಖರ್ಗೆ ಅವರು.
ಬರೀ ಹಳ್ಳಿಗಳ ಲೆಕ್ಕ ಇದಾಗಿದೆ, ಮೆಟ್ರೋಪಾಲಿಟಿನ್ ಸಿಟಿಗಳು, ಜಿಲ್ಲಾ ಕೇಂದ್ರಗಳು, ದೆಹಲಿ, ಮುಂಬೈ, ಬೆಂಗಳೂರು, ಹೈದ್ರಾಬಾದ, ಸೇರಿದಂತೆ ದೇಶದ ಎಲ್ಲ ರಾಜಧಾನಿಗಳು ಸೇರಿದಂತೆ ಒಟ್ಟು ದೇಶದಲ್ಲಿ 52 ಲಕ್ಷ ಕ್ಕೂ ಹೆಚ್ಚು ಕೋವಿಡ್‌ನಿಂದ ಪ್ರಾಣ ಬಿಟ್ಟಿದ್ದಾರೆ, ನಾವು ಇದನ್ನು ಬಯಲಿಗೆಳೆದ ಮೇಳೆ ಸಂಜೆ ವೇಳಗೆ ಯುಎಸ್ ತನ್ನ ವರದಿಯಲ್ಲಿ ಭಾರತದಲ್ಲಿ 50 ಲಕ್ಷಕ್ಕೂ ಅಧಿಕ ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ವರದಿ ನೀಡಿದೆ ಎಂದರು.
ಮೇಯರ್ ಚುನಾವಣೆ ಬಗ್ಗೆ ಮಾತನಾಡಿದ ಖರ್ಗೆ ಅವರು ಈಗಾಗಲೇ ನಮ್ಮ ಸ್ಥಳೀಯ ಶಾಸಕರು, ಮುಖಂಡರ ಒತ್ತಾಯದಂತೆ ನಾನು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರೊಂದಿಗೆ ಮಾತುಕತೆ ನಡೆಸಿದ್ದು, ಜ್ಯಾತ್ಯಾತೀತ ಮನೋಭಾವದ ಹಾಗೂ ಅತಿ ಹೆಚ್ಚು ಅಂದರೆ ಬಹುಮತಕ್ಕೆ ಒಂದೇ ಒಂದು ಸ್ಥಾನದ ಕೊರತೆಯಿದ್ದ ಕಾಂಗ್ರೆಸ್ ಪಕ್ಷಕ್ಕೆ ಮೇಯರ್ ಚುನಾವಣೆಯಲ್ಲಿ ಬೆಂಬಲ ನೀಡಲು ಮನವಿ ಮಾಡಿಕೊಂಡಿದ್ದೇ, ಅದಕ್ಕೆ ಅವರು ನೋಡೋಣ ಈ ಬಗ್ಗೆ ಮಾತನಾಡುತ್ತೇನೆ, ಇನ್ನು ಮೇಯರ್ ಚುನಾವಣೆಯ ಅಧಿಸೂಚನೆಯೇ ಹೊರಡಿಸಿಲ್ಲ, ಹೊರಡಿಸಿದ ಮೇಲೆ ನೋಡೋಣ ಮತ್ತೋಮ್ಮೆ ಮಾತುಕತೆ ನಡೆಸುವುದಾಗಿ ವಿವರಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಶಾಸಕಿ ಖನೀಜ್ ಪಾತಿಮಾ, ಮಾಜಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕ ಬಿ. ಆರ್. ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಂಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಡಿಸಿಸಿ ಅಧ್ಯಕ್ಷ ಜಗದೇವಪ್ಪ ಗುತ್ತೇದಾರ, ಮಾಜಿ ಮಹಾಪೌರ ಶರಣಕುಮಾರ ಮೋದಿ, ಗೋಪಾಲ ರೆಡ್ಡಿ, ಯುವ ಮುಖಂಡರಾದ ಡಾ. ಕಿರಣ ದೇಶಮುಖ, ಪ್ರವೀಣ ಹರವಾಳ ಸೇರಿದಂತೆ ಇನ್ನು ಹಲವಾರು ಜನರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here