ಕಲಬುರಗಿ, ಸೆ. 28: ಒಳ್ಳೆ ವಿಚಾರ ಹೇಳಬೇಕಾದರೆ ಮನ್ಸಸು ಶುದ್ಧಿ ಇರಬೇಕು, ಆರ್.ಎಸ್.ಎಸ್. ಸಂಘಟನೆಯನ್ನು ತಾಲಿಬಾನ್‌ಗೆ ಹೋಲಿಕೆ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಬಾಯಲ್ಲಿ ಒಳ್ಳೆ ವಿಚಾರ ಹೇಗೆ ಬರಲು ಸಾಧ್ಯ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.
ಅವರಿಂದು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಭೂತದ ಬಾಯಲ್ಲಿ ಭಗವದ್ಗೀತೆ ಎಂಬAತೆ ಸಿದ್ಧರಾಮಯ್ಯ ಅವರ ಬಾಯಲ್ಲಿ . ಹಿಂದುತ್ವ ಮತ್ತು ಆರ್ ಎಸ್ ಎಸ್ ಅನ್ನು ವಿರೋಧ ಮಾಡಿದರೆ ಅಲ್ಪಸಂಖ್ಯಾತರು ಮತ ಹಾಕುತ್ತಾರೆ ಎಂಬ ಕೆಟ್ಟ ಅಭಿಪ್ರಾಯವಿದೆ.
ಸಿದ್ದರಾಮಯ್ಯನವರು ಇನ್ನು ಮುಂದೆಯಾದರೂ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಚಡ್ಡಿಗಳು ಎಂದು ಹೇಳುವುದನ್ನು ನಿಲ್ಲಿಸಬೇಕು. ಬಹುಶಃ ಮೊನ್ನೆ ವಿಧಾನಸಭೆಯಲ್ಲಿ ಅವರ ಪಂಚೆ ಉದುರಿದಾಗ ಈ ಚಡ್ಡಿಯೇ ಅವರ ಮಾನ ಉಳಿಸಿದೆ. ದೇಶದ ಗೌರವ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಿಕೊಂಡಿರುವ ಸಂಸ್ಥೆಯಿದು. ಒಮ್ಮೆ ಸಿದ್ದರಾಮಯ್ಯನವರು ನಮ್ಮ ಒಟಿಸಿ ಕ್ಯಾಂಪ್ ಗೆ ಬಂದು ಅಲ್ಲಿನ ಶಿಸ್ತು ದೇಶಭಕ್ತಿಯನ್ನು ಕಲಿಯಲಿ ಎಂದು ನುಡಿದರು.
ಸಿಂದಗಿಮತ್ತು ಹಾನಗಲ್ ವಿಧಾನಸಭೆ ಉಪಚುನಾವಣೆಯಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಸಚಿವರು, ಸುಸಂಘಟಿತ ರಾಜಕೀಯ ಪಕ್ಷವಾಗಿ ಬಿಜೆಪಿ ಚುನಾವಣೆ ಎದುರಿಸಲಿದೆ.
ಬರುವ ಅಕ್ಟೊಬರ್‌ನಲ್ಲಿ ನಡೆಯಲಿರುವ ಈ ಎರಡು ಉಪ ಚುನಾವಣೆಗಳು ನಮ್ಮ ರಾಜ್ಯಾಧ್ಯಕ್ಷರಾದ ನಳೀನಕುಮಾರ ಕಟೀಲ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುಗಳ ನೇತೃತ್ವದಲ್ಲಿ ಎದುರಿಸಲಿದ್ದು, ಈ ಎರಡು ಕ್ಷೇತ್ರಗಳು ಬಿಜೆಪಿ ತಕ್ಕೆಗೆ ಸೇರಲಿವೆ ಎಂದರು.