ಕಲಬುರಗಿ, ಸೆ. 28: ಹಿಂಗಾರು ಬಿತ್ತನೆಗೆ ಸಿದ್ದಗೊಂಡಿರುವ ರೈತರು ಶೇಂಗಾ ಬಿತ್ತನೆ ಬೀಜದ ಕೊರತೆ ಹಿನ್ನೆಲೆಯಲ್ಲಿ ಬೀಜ ಖರೀದಿಗೆ ನೂಕು ನುಗ್ಗಲು ನಡೆದಿದೆ.
ನಾಲವಾರದಲ್ಲಿ ರೈತ ಸಂಪರ್ಕ ಕೇಂದ್ರದ ಮುಂಜೆ ರೈತರು ಬೀಜ ಖರೀದಿಗಾಗಿ ಕೋವಿಡ್ ನಿಯಮಗಳಣ್ನು ಗಾಳಿಗೆ ತೂರಿ ನಾ ಮುಂದೆ, ತಾ ಮುಂದೆ ಅಂತ ಒಬ್ಬರ ಮೇಲೋಬ್ಬರು ಬಿದ್ದು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಜಮೀನಿನ ದಾಖಲೆ ನೀಡುತ್ತ ಮೈ ಮೈರೆಯುತ್ತಿದ್ದ ಘಟನೆ ಬೆಳಿಗ್ಗೆಯಿಂದ ಗೋಚರಿಸಿತು
ಹಿಂಗಾರಿನ ಬೆಳೆಯಾದ ಶೇಂಗಾ ಬೀಜದ ಕೊರತೆ ಹಿನ್ನಲೆಯಲ್ಲಿ ಈ ನೂಕು ನುಗ್ಗಲು ಏರ್ಪಟ್ಟಿದೆ.