ಭಾರೀ ಮಳೆಗೆ ಮಳಕೇಡ ಸೇತುವೆ ಸಂಪೂರ್ಣ ಜಲಾವೃತ್ತ, ಸಂಪರ್ಕಕಡಿತ

0
787

ಕಲಬುರಗಿ, ಸೆ. 28: ಕಳೆದ ಎರಡು ದಿನಗಳಿಂದ ಬಿದ್ದ ಭಾರೀ ಮಳೆಯಿಂದಾಗಿ ಕಲಬುರಗಿ – ಸೇಡಂ ರಸ್ತೆಯ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ನಿನ್ನೆ ರಾತ್ರಿ ಬಿದ್ದ ಭಾರೀ ಮಳೆಯಿಂದಾಗಿ ಮಳಖೇಡ ಸೇತುವೆ ಮುಳುಗಡೆ ಹಿನ್ನೆಲೆಯಲ್ಲಿ ಸೇತುವೆಯ ಎರಡೂ ಬದಿಯಲ್ಲಿ ಸುಮಾರು ಒಂದು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ಲಾರಿಗಳು ನಿಂತಿವೆ.
ಸೇಡಮ್ ಹಾಗೂ ಹೈದ್ರಾಬಾದ ಕಡೆಗೆ ತೆರಳಬೇಕಿರುವ ಕೂಡ್ಸ್ ಸೇರಿದಂತೆ ಇನ್ನಿತರ ಭಾರೀ ವಾಹನಗಳು ರಸ್ತೆಯುದ್ದಕ್ಕೂ ನಿಂತಿದ್ದು, ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗಿದೆ.
ಕಳೆದ ರಾತ್ರಿಯಿಂದ ರಸ್ತೆ ಸಂಪರ್ಕ ಕಟ್ ಅಗಿದ್ದು ಸೇತುವೆ ಮೇಲೆ ಹೆಚ್ಚುತ್ತಲೇ ಇರುವ ಪ್ರವಾಹ ಅಬ್ಬರ ಇಂದು ಸಂಜೆ ಕೊಂಚ ನಿಲ್ಲುವಂತಾಗಿದೆ.

LEAVE A REPLY

Please enter your comment!
Please enter your name here